ETV Bharat / entertainment

ಸಾಂಪ್ರದಾಯಿಕ ಶೈಲಿಯಲ್ಲಿ ಬೇಬಿಬಂಪ್​​ ಫೋಟೋಶೂಟ್​ ಮಾಡಿಸಿದ ಹರ್ಷಿಕಾ ಪೂಣಚ್ಚ: ನಟಿಯ ವಿಡಿಯೋ ನಿಮಗಾಗಿ - Harshika Poonacha - HARSHIKA POONACHA

2023ರ ಆಗಸ್ಟ್​​​ 24ರಂದು ಹಸೆಮಣೆ ಏರಿದ್ದ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್​ ಪೊನ್ನಣ್ಣ ಅಕ್ಟೋಬರ್​​​​ನಲ್ಲಿ ಪೋಷಕರಾಗಿ ಭಡ್ತಿ ಪಡೆಯಲಿದ್ದಾರೆ. ಸದ್ಯ ರವಿವರ್ಮ ಪೇಂಟಿಂಗ್ ಥೀಮ್​​ನಲ್ಲಿ ಚಂದನವನದ ಚೆಲುವೆಯ ಬೇಬಿಬಂಪ್​​ ಫೋಟೋಶೂಟ್ ಮೂಡಿಬಂದಿದೆ.

Harshika Poonacha
ಹರ್ಷಿಕಾ ಪೂಣಚ್ಚ ಬೇಬಿಬಂಪ್​​ ಫೋಟೋಶೂಟ್ (ETV Bharat)
author img

By ETV Bharat Karnataka Team

Published : Aug 20, 2024, 1:19 PM IST

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಹಲವರು ಇದೇ ಕ್ಷೇತ್ರದಲ್ಲಿರುವವರನ್ನು ಪ್ರೀತಿಸಿ ಮದುವೆಯಾದ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಸ್ಯಾಂಡಲ್​ವುಡ್​​​ ಕೂಡಾ ಇದರಿಂದ ಹೊರತಲ್ಲ. ಕಲಾವಿದರು ಪರಸ್ಪರ ಪ್ರೀತಿಸಿ ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿರುವ ಚೆಂದದ ಜೋಡಿಗಳು ಚಂದನವನದಲ್ಲಿವೆ. ಆ ಪೈಕಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್​ ಪೊನ್ನಣ್ಣ ದಂಪತಿ ಕೂಡಾ ಒಂದು. ಇದೀಗ ಪೋಷಕರಾಗುತ್ತಿರುವ ಖುಷಿಯಲ್ಲಿ ಈ ಸ್ಯಾಂಡಲ್​​​​ವುಡ್​ ಕಪಲ್​​​ ಇದ್ದಾರೆ. ಬ್ಯೂಟಿಫುಲ್​​ ಬೇಬಿಬಂಪ್​ ಫೋಟೋಶೂಟ್​ ಮಾಡಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

Harshika Poonacha
ಹರ್ಷಿಕಾ ಪೂಣಚ್ಚ ಬೇಬಿಬಂಪ್​​ ಫೋಟೋಶೂಟ್ (ETV Bharat)

7 ತಿಂಗಳ ಗರ್ಭಿಣಿ ಹರ್ಷಿಕಾ ಪೂಣಚ್ಚ: ಹೌದು, ಚಂದನವನದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟಿ ಹರ್ಷಿಕಾ ಪೂಣಚ್ಚ ಒಂದು ಸುಂದರ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ರವಿವರ್ಮ ಪೇಂಟಿಂಗ್ ಥೀಮ್​​ನಲ್ಲಿ ಈ ಫೋಟೋಶೂಟ್ ಮೂಡಿಬಂದಿದೆ. ನಟಿಯೀಗ 7 ತಿಂಗಳ ಗರ್ಭಿಣಿ. ಕಳೆದ ವರ್ಷ ದಾಂಪತ್ಯ ಜೀವನ ಆರಂಭಿಸಿದ್ದ ಹರ್ಷಿಕಾ ಭುವನ್ ಶೀಘ್ರದಲ್ಲೇ ಪೋಷಕರಾಗಿ ಭಡ್ತಿ ಪಡೆಯಲಿದ್ದಾರೆ.

ಅಕ್ಟೋಬರ್​​​​ನಲ್ಲಿ ಮಗುವಿನ ಜನನ: ಸರಿಸುಮಾರು 10 ವರ್ಷಗಳಿಂದ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಭುನ್​ ಮತ್ತು ಹರ್ಷಿಕಾ 2023ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಈ ಸಾಲಿನ ಜುಲೈ 2ರಂದು ತಾವು ಪೋಷಕರಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡರು. ಸಂಪೂರ್ಣ ಕೊಡಗು ಶೈಲಿಯಲ್ಲಿ ಫೋಟೋಶೂಟ್​ ಮಾಡಿಸಿದ್ದ ತಾರಾ ದಂಪತಿ, ''ಸ್ನೇಹಿತರೇ, ಈವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ. ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್​​ಗೆ ಕಾತುರದಿಂದ ಕಾಯುತ್ತಿದ್ದೇವೆ. ಇಂತಿ ನಿಮ್ಮ ಭುವನ್, ಹರ್ಷಿಕಾ'' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​​ ಮೂಲಕ ಅಕ್ಟೋಬರ್​​​​ನಲ್ಲಿ ಮಗುವಿನ ಜನನ ಆಗಲಿದೆ ಎಂದು ಕೂಡಾ ತಿಳಿಸಿದ್ದರು.

ಇದನ್ನೂ ಓದಿ: ಹ್ಯಾಟ್ರಿಕ್​​ ಹೀರೋ ಶೂಟಿಂಗ್​​ ಸೆಟ್​ಗೆ ರಾಕಿಂಗ್​​ ಸ್ಟಾರ್ ಎಂಟ್ರಿ: ಶಿವಣ್ಣ-ಯಶ್​​​ ಭೇಟಿ ವಿಡಿಯೋ ನೋಡಿ - Yash Met Shiva Rajkumar

2023ರ ಆಗಸ್ಟ್​​​ 24ರಂದು ಹಸೆಮಣೆ ಏರಿದ್ದ ಜೋಡಿ: ಚಿತ್ರರಂಗ ಮತ್ತು ಸಮಾಜಸೇವೆಗಳಲ್ಲಿ ಸಕ್ರಿಯರಾಗಿ ಗಮನ ಸೆಳೆದಿರುವ ಈ ಪ್ರೇಮಪಕ್ಷಿಗಳು 2023ರ ಆಗಸ್ಟ್​​​ 24ರಂದು ಕೊಡಗು - ವಿರಾಜಪೇಟೆಯ ಅಮ್ಮತ್ತಿಯಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದರು. ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರು, ಚಿತ್ರರಂಗ ಮತ್ತು ರಾಜಕೀಯ ಗಣ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ಈ ಜೋಡಿ ವರ್ಷ ತುಂಬುವುದರೊಳಗೆ ಗುಡ್​ ನ್ಯೂಸ್​​ ಕೊಟ್ಟಿದೆ. ಇನ್ನೆರಡು ತಿಂಗಳಲ್ಲಿ ತಾರಾದಂಪತಿ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಲಿದೆ. ಈ ಖುಷಿಯಲ್ಲಿ ಭುವನ್​ ಹರ್ಷಿಕಾ ಕುಟುಂಬಸ್ಥರಿದ್ದಾರೆ.

ಇದನ್ನೂ ಓದಿ: 'ವಿನಯ್ ರಾಜ್​ಕುಮಾರ್​​ ಮಲಯಾಳಂ ನಟನಂತೆ ಕಾಣ್ತಾನೆ': ಪೆಪೆ ಟ್ರೇಲರ್ ಅನಾವರಣಗೊಳಿಸಿದ ಶಿವಣ್ಣ​ - PEPE Trailer

ETV Bharat Logo

Copyright © 2024 Ushodaya Enterprises Pvt. Ltd., All Rights Reserved.