ETV Bharat / entertainment

ಕ್ಯಾಪ್ಟನ್​ ಆದ ಗೌತಮಿ: ಮೋಕ್ಷಿತಾಗೆ ಮುಳುವಾಯ್ತಾ ಸ್ವಾಭಿಮಾನ/ಅಹಂಕಾರ? - BIGG BOSS KANNADA 11

ಗೌತಮಿ ಅವರೊಂದಿಗೆ ಆಟ ಆಡಲು ಮೋಕ್ಷಿತಾ ನಿರಾಕರಿಸಿದ್ದರು. ಆದ್ರೀಗ ಗೌತಮಿ ಅವರೇ ಗೆದ್ದು ಕ್ಯಾಪ್ಟನ್​​ ಆಗಿದ್ದಾರೆ. ಮಾಡಿದ ಆ ಒಂದು ತಪ್ಪಿಗೆ ಮೋಕ್ಷಿತಾ ಬೆಲೆ ತೆರುವಂತಾಗಿದೆ.

Mokshitha, Gauthami
ಮೋಕ್ಷಿತಾ, ಗೌತಮಿ (Photo: Bigg Boss team)
author img

By ETV Bharat Entertainment Team

Published : Dec 6, 2024, 10:05 AM IST

Updated : Dec 6, 2024, 10:12 AM IST

'ಬಿಗ್​ ಬಾಸ್​ ಕನ್ನಡ ಸೀಸನ್​​ 11' ಆರಂಭವಾಗಿ 10 ವಾರ ಸಮೀಪಿಸಿದೆ. ಆಟ ರಂಗೇರುತ್ತಿದ್ದು, ಸ್ಪರ್ಧಿಗಳ ಅಸಲಿತನ ಹೊರ ಬರುತ್ತಿದೆ. ಇದೀಗ ಬೆಸ್ಟ್​ ಫ್ರೆಂಡ್ಸ್ ಆಗಿದ್ದ ಮೋಕ್ಷಿತಾ ಮತ್ತು ಗೌತಮಿ ನಡುವಿನ ಮನಸ್ತಾಪಗಳು ಎಲ್ಲರೆದುರು ಬಹಿರಂಗಗೊಳ್ಳುತ್ತಿವೆ. ಅದರಂತೆ ಇದೀಗ ಮೋಕ್ಷಿತಾ ತೆಗೆದುಕೊಂಡ ಆ ಒಂದು ನಿರ್ಧಾರ ಅವರಿಗೇನೇ ಮುಳುವಾಗಿದೆ. ಸಂಭಾವ್ಯ ಕ್ಯಾಪ್ಟನ್ಸಿ ಪಟ್ಟವನ್ನು ಅವರು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಗೌತಮಿ ಕ್ಯಾಪ್ಟನ್​ ಆಗಿ ಹೊರಹೊಮ್ಮಿದ್ದಾರೆ.

ಈ ವಾರ ಬಿಗ್ ಬಾಸ್​ ಮನೆ ಎರಡು ವಾಹಿನಿಗಳಾಗಿ ರೂಪುಗೊಂಡಿತ್ತು. ಸ್ಪರ್ಧಿಗಳನ್ನು ಎರಡು ಬಣಗಳಾಗಿ ವಿಂಗಡಿಸಿ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಹೀಗೆ ಆಟಗಳು ಸಾಗಿ ಪ್ರೇಕ್ಷಕರಿಗೆ ಮನರಂಜನೆಯೂ ಸಿಕ್ಕಿತ್ತು. ಕ್ಯಾಪ್ಟನ್ಸಿ ಟಾಸ್ಕ್​​​ಗಾಗಿ ಮೋಕ್ಷಿತಾ ಅವರು ಗೌತಮಿ ಅವರ ಸಹಾಯ ಪಡೆಯಬೇಕಿತ್ತು. ಆದ್ರೆ ತಮ್ಮ ನಡುವಿನ ಮನಸ್ತಾಪ ಹಿನ್ನೆಲೆ, ಮೋಕ್ಷಿತಾ ಅವರು ಗೌತಮಿ ಅವರೊಂದಿಗೆ ಆಡಲು ನಿರಾಕರಿಸಿದರು.

ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕೂಡಾ ಬಿಗ್​ ಬಾಸ್​ ಎಚ್ಚರಿಸಿದ್ದರು. ಮೋಕ್ಷಿತಾ ಮಾಡಿದ ತಪ್ಪಿನಿಂದಾಗಿ ಮತ್ತು ಗೌತಮಿ ತಮ್ಮ ಪರಿಶ್ರಮದಿಂದ ಕ್ಯಾಪ್ಷನ್​ ಆಗಿ ಹೊರಹೊಮ್ಮಿದ್ದಾರೆ. ಇದರ ಝಲಕ್​ ಅನ್ನು ''ಒಂದು ಕಡೆ ಸಂಭ್ರಮ, ಮತ್ತೊಂದು ಕಡೆ ಸಂಘರ್ಷ'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್​ನೊಂದಿಗೆ ಅನಾವರಣಗೊಂಡ ಪ್ರೋಮೋದಲ್ಲಿ ಕಾಣಬಹುದಾಗಿದೆ. ಗೌತಮಿ ಕ್ಯಾಪ್ಟನ್ಸಿಯಡಿ ಮೋಕ್ಷಿತಾ ಅವರ ನಡೆ ಹೇಗಿರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಇದನ್ನೂ ಓದಿ: ಮಹಿಳಾ ಅಭಿಮಾನಿ ಸಾವು; ಮೃತಳ ಕುಟುಂಬಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಅಲ್ಲು ಅರ್ಜುನ್​​ ತಂಡ

ಬಿಗ್​ ಬಾಸ್​ ಮನೆಯಲ್ಲಿ ಇಂತಹ ಅವಕಾಶಗಳು ಸಿಗೋದೇ ಕಡಿಮೆ. ಮೋಕ್ಷಿತಾ ಅವರಿಗೆ ಕ್ಯಾಪ್ಟನ್​​ ಆಗೋ ಎಲ್ಲಾ ಅವಕಾಶಗಳಿದ್ದವು. ಆದ್ರೆ ಅವರು ಗೌತಮಿ ಅವರ ಸಹಾಯ ಪಡೆಯಬೇಕಿತ್ತು. ಆದ್ರೆ ಇದನ್ನು ಮೋಕ್ಷಿತಾ ನಿರಾಕರಿಸಿದ್ದರು. ಗೌತಮಿ ಅವರಿಂದ ನಾನು ಗೆದ್ದು ಕ್ಯಾಪ್ಟನ್​ ಆಗಬೇಕೆಂದಿಲ್ಲ ಎಂದು ತಿಳಿಸಿದ್ದರು. ಗೌತಮಿ ಸಹಾಯ ಪಡೆಯಲು ಹಿಂಜರಿದ ಮೋಕ್ಷಿತಾ ಅವರು, ನಾನು ಗೌತಮಿ ಅವರಲ್ಲಿ ಸಹಾಯ ಕೇಳಲ್ಲ. ಅವರಿಂದ ಕ್ಯಾಪ್ಟನ್​ ಆಗಬೇಕೆಂದಿದ್ದರೆ ನಾನು ಆಡೋದೇ ಇಲ್ಲ. ನನಗೆ ನನ್ ಸೆಲ್ಫ್​ ರೆಸ್ಪೆಕ್ಟ್​ ಮುಂದೆ ಯಾವುದೂ ಕೂಡಾ ದೊಡ್ಡದಲ್ಲ. ನನ್ನನ್ನು ಕಳುಹಿಸಿದ್ರೆ ನಾಳೆನೇ ಕಳುಹಿಸಲಿ, ನಾನು ಹೋಗಲು ರೆಡಿ ಎಂದೆಲ್ಲಾ ಮಾತನಾಡಿದ್ದರು.

ಇದನ್ನೂ ಓದಿ: Watch: 'ಎಕ್ಕ' ಸಿನಿಮಾ ತಂಡದವರಿಗೆ ಕಿವಿ ಚುಚ್ಚಿಸಿದ ಯುವ ರಾಜ್​ಕುಮಾರ್

ಹೀಗೆ, ಮೋಕ್ಷಿತಾ ಅವರಿಗೆ ಬಂದಿದ್ದ ಅವಕಾಶ ಗೌತಮಿ ಅವರ ಪಾಲಾಗಿದೆ. ಮೋಕ್ಷಿತಾ ಬದಲಾಗಿ ಬೇರೆ ಆಟಗಾರರನ್ನು ಆಯ್ಕೆ ಮಾಡಲು ಎದುರಾಳಿ ತಂಡಕ್ಕೆ ಅವಕಾಶ ಕೊಡಲಾಯಿತು. ಅದರಂತೆ ಗೌತಮಿ ಅವರನ್ನು ಆಯ್ಕೆ ಮಾಡಲಾಯಿತು. ನಂತರ ನಡೆದ ಕ್ಯಾಪ್ಷನ್ಸಿ ಟಾಸ್ಕ್​ನಲ್ಲಿ ಗೌತಮಿ ಗೆದ್ದು ಕ್ಯಾಪ್ಟನ್​ ಆಗಿದ್ದಾರೆ. ಇದು ಮೋಕ್ಷಿತಾ ಅವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಸಂಪುರ್ಣ ಸಂಚಿಕೆ ಮತ್ತು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

Last Updated : Dec 6, 2024, 10:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.