ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪುಷ್ಪ 2: ದಿ ರೂಲ್'. ಇದೇ ಸಾಲಿನ ಆಗಸ್ಟ್ 15ರಂದು ಚಿತ್ರಮಂದಿರ ಪ್ರವೇಶಿಸಲಿದೆ. ನಿರ್ಮಾಪಕರು ಶೀಘ್ರವೇ ಪ್ರಚಾರ ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ಸಿನಿಮಾ ಸುತ್ತಲಿರುವ ಸುದ್ದಿಗಳು, ಶೀಘ್ರವೇ ಸಾಂಗ್ ರಿಲಿಸ್ ಆಗಲಿದೆ ಎಂಬ ಸುಳಿವು ನೀಡಿದೆ. ಈ ಬಗ್ಗೆ ಅಪ್ಡೇಟ್ಸ್ ಸದ್ಯದಲ್ಲೇ ಹೊರಬೀಳುವ ಸಾಧ್ಯತೆಯಿದೆ. ಪುಷ್ಪ 2 ತಂಡವು ತನ್ನ ಮೊದಲ ಟ್ರ್ಯಾಕ್ ಅನ್ನು ಶೀಘ್ರದಲ್ಲೇ ಅನಾವರಣಗೊಳಿಸಲು ರೆಡಿಯಾಗಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಸಿನಿಮಾದ ಮೊದಲ ನೋಟ ಅನಾವರಣಗೊಂಡಾಗಿನಿಂದ, ಅಭಿಮಾನಿಗಳು ಪುಷ್ಪ ರಾಜ್‌ಗೆ ಸಂಬಂಧಿಸಿದ ಅಪ್ಡೇಟ್ಸ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಸುತ್ತಲಿನ ಉತ್ಸಾಹವನ್ನು ಕಾಪಾಡಿಕೊಳ್ಳಲು ಮತ್ತು ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಲು, ಚಿತ್ರತಂಡ ಮುಂದಿನ ದಿನಗಳಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ಇತ್ತೀಚಿನ ವರದಿಗಳು ಸೂಚಿಸಿವೆ. ಇದು ಸಿನಿಪ್ರಿಯರ ವಲಯದಲ್ಲಿ 'ಪುಷ್ಪ 2' ಚರ್ಚೆಯ ವಿಷಯವಾಗಿ ಉಳಿದುಕೊಳ್ಳಲು ಪೂರಕವಾಗಲಿದೆ. ಅದಾಗ್ಯೂ ಚಿತ್ರತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.
- " class="align-text-top noRightClick twitterSection" data="">
ಈಗಾಗಲೇ ಸಿನಿಮಾ ಬಿಡುಗಡೆ ವಿಳಂಬವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಚಿತ್ರತಂಡ ತನ್ನ ಕೆಲಸಗಳನ್ನು ಮುಂದುವರಿಸಿದೆ. ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಅವರು ಮೊದಲ ಹಾಡನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯಶ್ ಜೊತೆ ಸ್ಕ್ರೀನ್ ಶೇರ್: 'ಟಾಕ್ಸಿಕ್'ನಲ್ಲಿ ಕಾಣಿಸಿಕೊಳ್ಳುವ ಸುಳಿವು ಬಿಟ್ಟುಕೊಟ್ಟ ಕರೀನಾ
ಪುಷ್ಪ 2 ತಂಡ ಇತ್ತೀಚೆಗೆ ವೈಜಾಖ್ನಲ್ಲಿ ಕೆಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದೆ. ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಕೆಲ ದಿನಗಳ ಚಿತ್ರೀಕರಣ ನಡೆಸಿರುವ ಅಲ್ಲು ಅರ್ಜುನ್ ಹೈದರಾಬಾದ್‌ಗೆ ಮರಳಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ 'ಪುಷ್ಪ 2: ದಿ ರೂಲ್'ಗಾಗಿ ವೈಜಾಖ್ಗೆ ಆಗಮಿಸಿದ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು.
ಇದನ್ನೂ ಓದಿ: 'ಬ್ಯಾಂಗಲೂರ್ ಇಡ್ಲಿ ಬೇಡ': ರಿಷಬ್, ಶಿವಣ್ಣ ಬಳಿಕ 'RCB' ವಿಡಿಯೋದಲ್ಲಿ ಸುದೀಪ್
ಸುಕುಮಾರ್ ನಿರ್ದೇಶನದ ''ಪುಷ್ಪ 2''ನಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮುಂದುವರಿಯಲಿದ್ದಾರೆ. ಪುಷ್ಪ ರಾಜ್‌ಗೆ (ಅಲ್ಲು ಅರ್ಜುನ್) ಎದುರಾಳಿಯಾಗಿ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಕೋವಿಡ್ ಬಳಿಕ ಬಂದ, ಪುಷ್ಪ 1 ಬ್ಲಾಕ್ ಬಸ್ಟರ್ ಅಗಿ ಹೊರಹೊಮ್ಮಿತು. ಇದೇ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ. ಕಳೆದ ವರ್ಷ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ - ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಇವರು.