ETV Bharat / entertainment

ಫೈಟರ್​​ ಸಿನಿಮಾ: ಎರಡೇ ದಿನಕ್ಕೆ ಅಡ್ವಾನ್ಸ್​ ಬುಕ್ಕಿಂಗ್​ನಲ್ಲಿ 1.8 ಲಕ್ಷ ಟಕೆಟ್​ ಮಾರಾಟ - ಫೈಟರ್​ ಸಿನಿಮಾ ಗಳಿಕೆ

ನಟ ಹೃತಿಕ್​ ರೋಷನ್​ ಮತ್ತು ನಟಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಫೈಟರ್​ ಸಿನಿಮಾ ಇಂದು ಬಿಡುಗಡೆಯಾಗಿದೆ.

fighter Film received Rs 5 94 crore in advance bookings

author img

By ETV Bharat Karnataka Team

Published : Jan 25, 2024, 5:38 PM IST

ಹೈದರಾಬಾದ್​: ಸಿದ್ದಾರ್ಥ್​​ ಆನಂದ್​ ನಿರ್ದೇಶನದ 'ಫೈಟರ್'​ ಸಿನಿಮಾದ ಎರಡನೇ ದಿನದ ಬುಕ್ಕಿಂಗ್​ನಲ್ಲಿ 1.84 ಲಕ್ಷ ಟಿಕೆಟ್​ ಮಾರಾಟವಾಗಿದ್ದು, 5.94 ಕೋಟಿ ಗಳಿಕೆ ಮಾಡಿದೆ. ಗಣರಾಜ್ಯೋತ್ಸವಕ್ಕೂ ಮುನ್ನಾ ದಿನ ಅಂದರೆ ಇಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಜನವರಿ 26ರಿಂದ ದೀರ್ಘ ವಾರಾಂತ್ಯ ಆರಂಭವಾಗಲಿದ್ದು, ಇದರಿಂದ ಟಿಕೆಟ್​ ಮಾರಾಟ ಪ್ರಕ್ರಿಯೆ ಕೂಡ ಹೆಚ್ಚಾಗಿದೆ.

ನಟ ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ ಮತ್ತು ಅನಿಲ್​ ಕಪೂರ್​ ನಟನೆಯಲ್ಲಿ ಮೂಡಿ ಬಂದಿರುವ ಈ ವರ್ಷದ ಸಖತ್​ ಆ್ಯಕ್ಷನ್​ ಚಿತ್ರ ಇದಾಗಿದೆ. ಆನಂದ್​​ ಅವರ ಈ ಹಿಂದಿನ 'ವಾರ್'​ ಮತ್ತು 'ಪಠಾಣ್​' ಚಿತ್ರಗಳಿಗಿಂತ ಈ ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ದೊಡ್ಡ ತಾರಾ ಬಳಗ ಮತ್ತು ನಿರ್ದೇಶನದ ನಡುವೆಯೂ ಚಿತ್ರ ಸಿನಿ ಪ್ರೇಕ್ಷಕರ ವರ್ಗದಲ್ಲಿ ಹೇಳಿಕೊಳ್ಳುವಂತಹ ಉತ್ಸಾಹ ಕಂಡು ಬಂದಿಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ.

ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್​​​ ವರದಿ ಪ್ರಕಾರ, ಚಿತ್ರ ಬಿಡುಗಡೆಯಾದ ಮೊದಲ ದಿನ ಅಂದರೆ ಜನವರಿ 25ರಂದು ಚಿತ್ರವೂ ಕೇವಲ 1,85,547 ಲಕ್ಷ ಸೀಟುಗಳು ಭರ್ತಿಯಾಗಿದ್ದು, 5.94 ಕೋಟಿಯನ್ನು ಎರಡು ದಿನದ ಅಡ್ವಾನ್ಸ್​​ ಬುಕ್ಕಿಂಗ್​ ಮೂಲಕ ಪಡೆದಿದೆ. ಚಿತ್ರವೂ 3ಡಿಯಲ್ಲಿ ಮೂಡಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬುಕ್ಕಿಂಗ್​ ಕಲೆಕ್ಷನ್​ ಕೂಡ ಉತ್ತಮವಾಗಿದೆ. ಆದರೆ, ಅಂತಿಮವಾಗಿ ಚಿತ್ರವು ಗುರುವಾರ ಸಿನಿಮಾದ ವಿಶ್ಲೇಷಣೆ ಬಳಿಕ ಹೇಗೆ ಪ್ರದರ್ಶನ ಕಾಣಲಿದೆ ಎಂಬುದು ತಿಳಿಯಲಿದೆ.

ಗುರುವಾರ ಚಿತ್ರ ಬಿಡುಗಡೆಗೆ ಮುನ್ನ ಮುಂಬೈನಲ್ಲಿ ಸಿನಿ ಉದ್ಯಮದ ಮಂದಿಗೆ ಚಿತ್ರ ನಿರ್ದೇಶಕ ಸಿದ್ಧಾರ್ಥ್​ ಆನಂದ್​ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಜಯೇದ್​ ಖಾನ್​​, ಸಬಾ ಅಜಾದ್​, ಸೂಸೆನ್​ ಖಾನ್​, ರಾಕೇಶ್​ ರೋಷನ್​ ಮತ್ತು ಶಾರುಖ್​​ ಖಾನ್​ ಸೇರಿದಂತೆ ಹಲವು ಮಂದಿ ಸಿನಿಮಾ ವೀಕ್ಷಣೆ ಮಾಡಿದರು.

ಚಿತ್ರದಲ್ಲಿ ನಟ ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಹೊರತಾಗಿ ಅಕ್ಷಯ್​​ ಒಬೆರಾಯ್​​, ಕರಣ್​ ಸಿಂಗ್​ ಗ್ರೋವರ್​​ ಮತ್ತು ಅನಿಲ್​ ಕಪೂರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ವಯೋಕಾಮ್​ 18 ಸ್ಟುಡಿಯೋದಿಂದ ನಿರ್ಮಿಸಲಾಗಿದ್ದು, ಇದಕ್ಕೆ ಮಾರ್ಫ್ಲಿಕ್ಸ್​​ ಪಿಕ್ಚರ್​ ಸಾಥ್​ ನೀಡಿದೆ. ಚಿತ್ರದಲ್ಲಿ ಭಾರತೀಯ ಸೇನಾ ಸಿಬ್ಬಂದಿಯ ಶೌರ್ಯ, ನಿಸ್ವಾರ್ಥತೆ ಮತ್ತು ರಾಷ್ಟ್ರೀಯತೆ ಎತ್ತಿ ಹಿಡಿಯಲಾಗಿದೆ. ಆನಂದ್​​ ಮತ್ತು ರಾಮೊನ್​ ಚಿಬ್​​ ಜಂಟಿಯಾಗಿ ಚಿತ್ರ ಕಥೆ ಬರೆದಿದ್ದು, ಸಿನಿಮಾದಲ್ಲಿ ದೇಶಭಕ್ತಿ, ಹಾಸ್ಯ, ಸಾಹಸ, ಭಾವನಾತ್ಮಕತೆ ಮತ್ತು ಕೊಂಚ ರೋಮಾನ್ಸ್​​ ಕೂಡ ಪ್ರೇಕ್ಷಕರು ಆನಂದಿಸಬಹುದಾಗಿದೆ.

ಇದನ್ನೂ ಓದಿ: ಮಣಿರತ್ನಂ - ಕಮಲ್​ ಹಾಸನ್​ ಜೋಡಿಯ 'ಥಗ್​ ಲೈಫ್​' ಶೂಟಿಂಗ್​ ಪ್ರಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.