ETV Bharat / entertainment

'ಫೈಟರ್' ಅಡ್ವಾನ್ಸ್ ಟಿಕೆಟ್; ಭರ್ಜರಿ ವ್ಯವಹಾರ ನಡೆಸುತ್ತಿದೆ​ ಹೃತಿಕ್ - ದೀಪಿಕಾ ಜೋಡಿಯ ಸಿನಿಮಾ - ದೀಪಿಕಾ ಪಡುಕೋಣೆ

ಬಹುನಿರೀಕ್ಷಿತ 'ಫೈಟರ್' ಸಿನಿಮಾ ಬಿಡುಗಡೆಗೂ ಮುನ್ನ ಉತ್ತಮ ವ್ಯವಹಾರ ನಡೆಸುತ್ತಿದೆ.

Fighter advance bookings
ಫೈಟರ್ ಅಡ್ವಾನ್ಸ್ ಟಿಕೆಟ್
author img

By ETV Bharat Karnataka Team

Published : Jan 20, 2024, 6:10 PM IST

ಸಿದ್ಧಾರ್ಥ್ ಆನಂದ್ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಮತ್ತು ಕರಣ್​ ಸಿಂಗ್​​ ಗ್ರೋವರ್​​ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಸಿನಿಮಾ ಇದೇ ಜನವರಿ 25 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸಖತ್​​ ಸದ್ದು ಮಾಡುತ್ತಿದೆ. ಗಣರಾಜ್ಯೋತ್ಸ ಸಂದರ್ಭ ತೆರೆಕಾಣಲಿರುವ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್​ ಪ್ರೊಸೆಸ್​ ಓಪನ್​ ಆಗಿದ್ದು, ಭರ್ಜರಿ ವ್ಯವಹಾರ ನಡೆಸುತ್ತಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಅಡ್ವಾನ್ಸ್ ಬುಕಿಂಗ್​ ಈಗಾಗಲೇ ಗಮನಾರ್ಹ ವ್ಯವಹಾರ ನಡೆಸಿದೆ. ಮೊದಲ ದಿನ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಟಿಕೆಟ್​​ ಸೇಲ್​ ಆಗಿದ್ದು, ಈಗಾಗಲೇ 1 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿದೆ.

ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ತೆರೆಕಾಣುವ ಮೊದಲ ದಿನವೇ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಟಿಕೆಟ್​ ಸೇಲ್​ ಆಗಿದ್ದು, ಈಗಾಗಲೇ 1.09 ಕೋಟಿ ರೂ. ಕಲೆಕ್ಷನ್​ ಮಾಡಿದೆ. ದೇಶಾದ್ಯಂತ 3,763 ಶೋಗಳ 30,226 ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದು ಡೇಟಾ ಬಹಿರಂಗಪಡಿಸಿದೆ. 2ಡಿಯಲ್ಲಿ 32,68,294 ರೂ., 3ಡಿಯಲ್ಲಿ 60,88,399.98 ರೂ., ಐಮ್ಯಾಕ್ಸ್ 3ಡಿಯಲ್ಲಿ 12,33,225.45 ರೂ. ಮತ್ತು 4ಡಿಎಕ್ಸ್ 3ಡಿಯಲ್ಲಿ 3,47,730 ರೂಪಾಯಿಯ ವ್ಯವಹಾರ ನಡೆಸಿದೆ. ಈ ಅಂಕಿ - ಅಂಶಗಳು ಕ್ಷಣಕ್ಷಣಕ್ಕೂ ಏರುತ್ತಿದೆ.

ಬ್ಯಾಂಗ್ ಬ್ಯಾಂಗ್ (2014) ಮತ್ತು ವಾರ್ (2019) ಸಿನಿಮಾಗಳು ಸೂಪರ್​ ಹಿಟ್​ ಆಗಿತ್ತು. ಈ ಎರಡೂ ಚಿತ್ರದಲ್ಲಿ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ನಟ ಹೃತಿಕ್​​ ರೋಷನ್​ ಕೆಲಸ ಮಾಡಿದ್ದರು. ಯಶಸ್ವಿ ನಿರ್ದೇಶಕ - ನಟ ಜೋಡಿಯ ಮೂರನೇ ಚಿತ್ರ ಫೈಟರ್​. ಕಳೆದ ವರ್ಷ ತೆರೆಕಂಡು ಧೂಳೆಬ್ಬಿಸಿದ್ದ ಪಠಾಣ್​ನಲ್ಲಿ ಸಿದ್ಧಾರ್ಥ್ ಆನಂದ್ ಮತ್ತು ದೀಪಿಕಾ ಪಡುಕೋಣೆ ಕೆಲಸ ಮಾಡಿದ್ದಾರೆ. ಹೃತಿಕ್​​ - ದೀಪಿಕಾ ನಟನೆಯ ಚೊಚ್ಚಲ ಚಿತ್ರವಿದು. ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಅಶುತೋಷ್ ರಾಣಾ ಮತ್ತು ಸಂಜೀದಾ ಶೇಖ್​ ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: 'ಫೈಟರ್​​' ಸಿಕ್ಸ್​​ಪ್ಯಾಕ್​​ಗಾಗಿ ಪರಿಶ್ರಮ: 14 ತಿಂಗಳ ಬಳಿಕ ಸಿಹಿ ಸೇವಿಸಿದ ಹೃತಿಕ್​ ರೋಷನ್​

ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ವಯಾಕಾಮ್​ 18 ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿರುವ ಫೈಟರ್ ಗಣರಾಜ್ಯೋತ್ಸವ ಸಂದರ್ಭ ತೆರೆಕಾಣಲಿದೆ. ಇಂಡಿಯನ್​ ಏರ್​ ಫೋರ್ಸ್ ಅಧಿಕಾರಿಗಳು ಮತ್ತು ಅವರ ಕಾರ್ಯಾಚರಣೆಗಳ ರೋಮಾಂಚಕ ಚಿತ್ರಣದೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸಲು ಫೈಟರ್​​ ಸಿದ್ಧವಾಗಿದೆ. ವೈಮಾನಿಕ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ ನೋಡಲು ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಕಾತರರಾಗಿದ್ದಾರೆ.

ಇದನ್ನೂ ಓದಿ: ಏರ್​ಪೋರ್ಟ್​​​ನಲ್ಲಿ ಕಾಣಿಸಿಕೊಂಡ ಶಾರುಖ್​ ಫ್ಯಾಮಿಲಿ: ಶೀಘ್ರದಲ್ಲೇ ಸೆಟ್ಟೇರಲಿದೆ ತಂದೆ - ಮಗಳ ಚಿತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.