ETV Bharat / entertainment

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ನಟನೆಯ 'ಡೆವಿಲ್'​​ ಬಿಡುಗಡೆಗೆ ಮುಹೂರ್ತ ಫಿಕ್ಸ್ - Devil Release Date - DEVIL RELEASE DATE

Devil: ಚಾಲೆಂಜಿಂಗ್​ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ 'ಡೆವಿಲ್'​​ ಸಿನಿಮಾ ಇದೇ ಸಾಲಿನ ಕ್ರಿಸ್ಮಸ್​ಗೆ ಬಿಡುಗಡೆ ಆಗಲಿದೆ.

Devil poster, Darshan
ಡೆವಿಲ್​ ಪೋಸ್ಟರ್, ದರ್ಶನ್ (Darshan X account)
author img

By ETV Bharat Karnataka Team

Published : May 23, 2024, 12:01 PM IST

Updated : May 23, 2024, 12:24 PM IST

ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ನಟನ ಹೆಚ್ಚೆಚ್ಚು ಸಿನಿಮಾ ಮೂಡಿ ಬರಲಿ ಎಂದುಕೊಳ್ಳುವ ಅಪಾರ ಸಂಖ್ಯೆಯ ಅಭಿಮಾನಿಗಳು, ಮುಂದಿನ ಚಿತ್ರಗಳ ಅಪ್ಡೇಟ್ಸ್​​ಗಾಗಿ ಕಾತರರಾಗಿರುತ್ತಾರೆ. ಡಿ ಬಾಸ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಡೆವಿಲ್'.

ಸಿನಿಮಾ ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಅಭಿಮಾನಿಗಳು ಬಹಳ ಉತ್ಸುಕರಾಗಿದ್ದರು. ​'ಡೆವಿಲ್'​​ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಸ್ವತಃ ದರ್ಶನ್​ ಅವರೇ ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳೀಗ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ.

ದರ್ಶನ್​​ ಎಕ್ಸ್​ ಪೋಸ್ಟ್​: ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಚಾಲೆಂಜಿಂಗ್​ ಸ್ಟಾರ್, ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024ರಂದು ಬೆಳ್ಳಿತೆರೆ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್​​​ ವೀರ್​​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​​​ ಹೇಳಿದ್ದಾರೆ. ಜೆ ಜಯಮ್ಮ ನಿರ್ಮಾಣದ ಈ ಚಿತ್ರದಲ್ಲಿ ಬಿ. ಅಜನೀಶ್​ ಲೋಕನಾಥ್ ಅವರ ಸಂಗೀತವಿದೆ. ಮೋಹನ್​ ಬಿ ಕೆರೆ ಅವರ ಕಲಾ ನಿರ್ದೇಶನ ಡೆವಿಲ್​ಗಿದೆ. ದರ್ಶನ್ ರಗಡ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಪೋಸ್ಟರ್ ಮೂಲಕ ತಿಳಿಸಲಾಗಿದೆ.

ದರ್ಶನ್​​ ಅವರ ಕೊನೆಯ ಸಿನಿಮಾ 'ಕಾಟೇರ' ಸೂಪರ್ ಡೂಪರ್ ಹಿಟ್​ ಆಗಿದೆ. ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿರುವ ಈ ಸಿನಿಮಾ, ಬಾಕ್ಸ್​ ಆಫೀಸ್​ನಲ್ಲೂ ಧೂಳೆಬ್ಬಿಸಿದೆ. ಹಾಗಾಗಿ ಅವರ ಮುಂದಿನ ಚಿತ್ರಗಳ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ನಟನ ಹೆಚ್ಚೆಚ್ಚು ಸಿನಿಮಾ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದರು. ದರ್ಶನ್​ ಕೂಡ ಹೆಚ್ಚಿನ ಸಂಖ್ಯೆಯ ಸಿನಿಮಾ ಕೊಡಬೇಕೆಂಬ ತವಕದಲ್ಲಿದ್ದರು. ಆದ್ರೆ ಅವರ ಕೈಗೆ ಪೆಟ್ಟಾಗಿರೋದು ಗೊತ್ತಿರುವ ವಿಚಾರ. ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಈ ಹಿನ್ನೆಲೆ 2024 ರಲ್ಲಿ ದರ್ಶನ್​ ಅವರಿಂದ ಕೇವಲ ಒಂದೇ ಸಿನಿಮಾ ಬರಲಿದೆ. ಮುಂದಿನ ವರ್ಷಗಳಲ್ಲಿ ಸಿನಿಮಾ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಈ ಸಾಲಿನ ಕ್ರಿಸ್ಮಸ್​ ಸಂದರ್ಭ ಡೆವಿಲ್​​ ತೆರೆಕಾಣಲಿದ್ದು, ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕಾಟೇರ ಕೂಡ ಕಳೆದ ಕ್ರಿಸ್ಮಸ್​ ಸಂದರ್ಭದಲ್ಲೇ ತೆರೆಕಂಡಿತ್ತು.

ಇದನ್ನೂ ಓದಿ: 'ಮಂಜುಮ್ಮೆಲ್ ಬಾಯ್ಸ್'ಗೆ ಇಳಯರಾಜ ಕಾಪಿರೈಟ್​​ ನೋಟಿಸ್​: ಕಾರಣ? - Manjummel Boys

ಸದ್ಯ ಡೆವಿಲ್ ಪೋಸ್ಟರ್ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಅಭಿಮಾನಿಗಳು, ಸಿನಿಪ್ರಿಯರು ಡೆವಿಲ್ ವೀಕ್ಷಿಸುವ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ.

Last Updated : May 23, 2024, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.