ETV Bharat / entertainment

ಕ್ಯಾನ್ಸರ್​ಗೆ ಬಲಿಯಾದ ಕಪಿಲ್​ ಶರ್ಮಾ ಶೋ ಖ್ಯಾತಿಯ ಅತುಲ್​ ಪರ್ಚುರೆ: ಸಿಎಂ ಶಿಂಧೆ ಸೇರಿ ಸೆಲೆಬ್ರಿಟಿಗಳಿಂದ ಸಂತಾಪ - ATUL PARCHURE PASSES AWAY

ದೀರ್ಘಕಾಲದ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅತುಲ್​ ಪರ್ಚುರೆ ಅವರು ವಿಧಿವಶರಾಗಿದ್ದಾರೆ.

condolences to Atul Parchure death
ಅತುಲ್ ಪರ್ಚುರೆ ನಿಧನಕ್ಕೆ ಗಣ್ಯರ ಸಂತಾಪ (ANI)
author img

By ETV Bharat Entertainment Team

Published : Oct 15, 2024, 11:33 AM IST

ಬಹು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಅತುಲ್ ಪರ್ಚುರೆ ಇಹಲೋಕ ತ್ಯಜಿಸಿದ್ದಾರೆ. ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದ ಹಾಸ್ಯ ನಟನ ನಿಧನಕ್ಕೆ ಭಾರತೀಯ ಚಿತ್ರರಂಗ ಸಂತಾಪ ಸೂಚಿಸಿದೆ. ಸೋಮವಾರ ಅವರು ಮೃತಪಟ್ಟಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಹುದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ಗಳಲ್ಲಿ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ. ಮರಾಠಿ ಮತ್ತು ಹಿಂದಿ ಮನರಂಜನಾ ಕ್ಷೇತ್ರದಲ್ಲಿ ಅತುಲ್​ ಪರ್ಚುರೆ ತಮ್ಮ ಬಹುಮುಖ ಪ್ರತಿಭೆ, ಹಾಸ್ಯಕ್ಕಾಗಿ ಹೆಸರು ವಾಸಿಯಾಗಿದ್ದರು.

ನಟನ ನಿಧನದ ಸುದ್ದಿ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಬಾಲಿವುಡ್​ನ ಬೇಡಿಕೆಯ ನಟ ಅರ್ಜುನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. "ನನಗೆ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಗಲಿಲ್ಲ. ಆದರೆ, ಪಾತ್ರ ಯಾವುದೇ ಇರಲಿ ಅತ್ಯುತ್ತಮವಾಗಿ ನಿಭಾಯಿಸಿದ್ದು, ಬಹಳ ಇಷ್ಟವಾಗುತ್ತಿದ್ದರು. ಅವರು ಹಲವು ವರ್ಷಗಳ ಕಾಲ ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ತಿಳಿಸಿದ್ದಾರೆ.

Arjun Kapoor Instagram story
ಅರ್ಜುನ್ ಕಪೂರ್ ಇನ್​​ಸ್ಟಾಗ್ರಾಮ್​​ ಸ್ಟೋರಿ (Instagram)

ರಂಗಭೂಮಿ, ಹಿರಿತೆರೆ ಮತ್ತು ಕಿರುತೆರೆಗೆ ಅತುಲ್​​ ಅವರ ಮಹತ್ವದ ಕೊಡುಗೆಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡಾ ಗೌರವ ಸಲ್ಲಿಸಿದ್ದಾರೆ. "ಅವರ ಅಕಾಲಿಕ ಮರಣವು ನೋವು ನೀಡಿದೆ" ಎಂದು ಸಿಎಂ ಶಿಂಧೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.​ ಮರಾಠಿ ಚಿತ್ರರಂಗದಲ್ಲಿ ಅವರ ಪ್ರಭಾವದ ಬಗ್ಗೆ ಅವರು ಒತ್ತಿಹೇಳಿದರು.

ಈ ಹಿಂದೆ ಟಾಕ್ ಶೋನಲ್ಲಿ ನಟ ಅತುಲ್​ ಪರ್ಚುರೆ ಅವರು ತಮ್ಮ ಕ್ಯಾನ್ಸರ್​ನೊಂದಿಗಿನ ಹೋರಾಟವನ್ನು ಬಹಿರಂಗಪಡಿಸಿದರು. ತಮ್ಮ ಲಿವರ್​​​ನಲ್ಲಿ 5 ಸೆಂ.ಮೀ ಗಡ್ಡೆಯಿದೆ ಎಂದು ತಿಳಿಸಿದ್ದರು. ತಮ್ಮ ಚಿಕಿತ್ಸೆ ವೇಳೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. "ರೋಗ ಇರುವುದು ತಿಳಿದ ನಂತರ ನನ್ನ ಮೊದಲ ವಿಧಾನ ತಪ್ಪಾಗಿತ್ತು, ಇದು ನನ್ನ ಮೇದೋಜೀರಕ ಗ್ರಂಥಿ ಮೇಲೆ ಪರಿಣಾಮ ಬೀರಿತ್ತು, ವಿವಿಧ ತೊಡಕುಗಳಿಗೆ ಕಾರಣವಾಯ್ತು" ಎಂದು ವಿವರಿಸಿದ್ದರು. ವೈದ್ಯರನ್ನು ಬದಲಿಸಿ ಸೂಕ್ತ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗುವ ಭರವಸೆ ಹೊಂದಿದ್ದ ನಟ ದುರಾದೃಷ್ಟವಶಾತ್ ಸೋಮವಾರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.

ಅತುಲ್​ ಪರ್ಚುರೆ ಹಲವು ಕಿರುತೆರೆ ಕಾರ್ಯಕ್ರಮಗಳ ಮೂಲಕ ಖ್ಯಾತಿ ಗಳಿಸಿದ್ದರು. ಅದರಲ್ಲೂ ದಿ ಕಪಿಲ್ ಶರ್ಮಾ ಶೋನಲ್ಲಿ ತಮ್ಮ ಹಾಸ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಅಲ್ಲದೇ, ನವ್ರಾ ಮಜಾ ನವ್​​​​ಸಾಚಾ, ಸಲಾಮ್-ಇ-ಇಷ್ಕ್, ಪಾರ್ಟ್​​ನರ್​​ ಮತ್ತು ಖಟ್ಟಾ ಮೀಠಾದಂತಹ ಮೊದಲಾದ ಹಿಟ್​ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 'ನಾನು ಅನ್​​​ಫಿಟ್​​ ಅನಿಸ್ತಿದೆ': ಬಿಗ್​ ಬಾಸ್​ ಮನೆಯಲ್ಲಿ ಧನರಾಜ್​ ಕಣ್ಣೀರು; ಬ್ಯಾಗ್​ ಪ್ಯಾಕ್ ಮಾಡಲು ಸಲಹೆ

ನಟ ಸಚಿನ್ ಪಿಲ್ಗಾಂವ್ಕರ್ ಕೂಡಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸಂತಾಪ ಸೂಚಿಸಿದ್ದಾರೆ. ಅತುಲ್ ಅವರ ಫೋಟೋ ಶೇರ್ ಮಾಡಿ, ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಜರ್ಮನ್ ನಟಿ ಸುಝೇನ್ ಬರ್ನರ್ಟ್ ಕೂಡಾ ಈ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಜೊತೆಗಿನ ಫೋಟೋ ಪೋಸ್ಟ್ ಮಾಡಿ, "ನಮ್ಮ ಸ್ನೇಹಿತನಿಗೆ ವಿದಾಯ. ಅಖಿಲ್ ಮತ್ತು ನಾನು ಇಬ್ಬರೂ ಅವರೊಂದಿಗೆ ಕೆಲಸ ಮಾಡಿದ್ದೇವೆ. ಅವರೋರ್ವ ಸನ್​ಶೈನ್​​​ನಂತಿದ್ದರು. ಸ್ವೀಟ್, ಪರಿಗಣನೆಗೆ ತೆಗೆದುಕೊಳ್ಳುವ ವ್ಯಕ್ತಿತ್ವ ಮತ್ತು ತುಂಬಾ ಒಳ್ಳೆಯ ನಟ. ಓಂ ಶಾಂತಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಮೋದ್​ ಶೆಟ್ಟಿಯೀಗ 'ಜಲಂಧರ': ನಾಯಕ ನಟನಾಗಿ ಮತ್ತೆ ಅದೃಷ್ಟ ಪರೀಕ್ಷೆಗಳಿದ 'ಲಾಫಿಂಗ್ ಬುದ್ಧ'

ರೇಣುಕಾ ಶಹಾನೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಟನಿಗೆ ಗೌರವ ಸೂಚಿಸಿದರು. "ಅತುಲ್, ಮಿತ್ರಾ" ಎಂದ ಕ್ಯಾಪ್ಷನ್​ ಕೂಡಾ ನೀಡಿದ್ದಾರೆ. ಸುಪ್ರಿಯಾ ಪಿಲ್ಗಾಂವ್ಕರ್ ಫೋಟೋ ಹಂಚಿಕೊಂಡು, "ಪ್ರೀತಿಯ ಸ್ನೇಹಿತ, ಇದು ಹೀಗಾಗಬಾರದಿತ್ತು. ನೀವು ತುಂಬಾ ಹೋರಾಡಿದ್ದೀರಿ ಮತ್ತು ಸಾಕಷ್ಟು ಸಹಿಸಿಕೊಂಡಿದ್ದೀರಿ. ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನಿಮ್ಮ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ" ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.