ETV Bharat / entertainment

ಕಾರ್ತಿಕ್‌ ಮಹೇಶ್‌ ಮುಡಿಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಕಿರೀಟ - ರಿಯಾಲಿಟಿ ಶೋ

ಇಡೀ ಕರ್ನಾಟಕವೇ ಕಾತರದಿಂದ ಕಾಯುತ್ತಿದ್ದ ಬಿಗ್​ ಬಾಸ್​ 10ರ ವಿಜಯಶಾಲಿಯ​ ಹೆಸರನ್ನು ಭಾನುವಾರ ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಘೋಷಿಸಿದರು.

Bigg Boss Kannada 10 Winner
ಬಿಗ್​ ಬಾಸ್​ ವಿನ್ನರ್​ 10 ವಿಜೇತ ಕಾರ್ತಿಕ್​ ಮಹೇಶ್​
author img

By ETV Bharat Karnataka Team

Published : Jan 29, 2024, 7:25 AM IST

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್​ 10ರ ಗ್ರ್ಯಾಂಡ್​ ಫಿನಾಲೆ ಭಾನುವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು. ಕಾರ್ತಿಕ್​ ಮಹೇಶ್​ ಅವರು ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಬಿಗ್​ ಬಾಸ್​ ಮನೆಯೊಳಗೆ ಆಗಮಿಸಿದ ದಿನದಿಂದಲೂ ಉತ್ತಮವಾಗಿ ಆಟವಾಡಿಕೊಂಡು ಬಂದಿದ್ದ ಕಾರ್ತಿಕ್​ ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್​ ಪ್ರತಾಪ್​ ಜೊತೆ ಪೈಪೋಟಿಯಲ್ಲಿ ಗೆದ್ದು, ಟ್ರೋಫಿ ಜಯಿಸಿದರು. ಫಿನಾಲೆ ಅಖಾಡದಲ್ಲಿದ್ದ ಡ್ರೋನ್​ ಪ್ರತಾಪ್​ ಫಸ್ಟ್​ ರನ್ನರ್​ ಅಪ್​ ಆಗಿದ್ದು, ಸಂಗೀತ ಶೃಂಗೇರಿ ಸೆಕೆಂಡ್​ ರನ್ನರ್​ ಅಪ್​ ಆಗಿ ಹೊರಹೊಮ್ಮಿದ್ದಾರೆ.

ಸೀಸನ್​ ಹತ್ತರ ವಿನ್ನರ್​ ಕಾರ್ತಿಕ್​ ಅವರಿಗೆ 50 ಲಕ್ಷ ರೂ. ಕ್ಯಾಶ್​ ಪ್ರೈಸ್​, ಮಾರುತಿ ಸುಜುಕಿ ಬ್ರೇಜಾ ಕಾರು ಹಾಗೂ ಬೌನ್ಸ್​ ಇನ್ಫಿನಿಟಿ ಎಲೆಕ್ಟ್ರಿಕ್​ ಸ್ಕೂಟರ್​ ಬಹುಮಾನವಾಗಿ ದೊರಕಿದೆ. ಫಸ್ಟ್​ ರನ್ನರ್​ ಅಪ್​ ಡ್ರೋನ್​ ಪ್ರತಾಪ್​ ಅವರಿಗೆ 10 ಲಕ್ಷ ರೂ ನಗದು ಹಾಗೂ ಬೌನ್ಸ್​ ಇನ್ಫಿನಿಟಿ ಎಲೆಕ್ಟ್ರಿಕ್​ ಸ್ಕೂಟರ್​ ಬಹುಮಾನವಾಗಿ ನೀಡಲಾಗಿದೆ. ಎರಡನೇ ರನ್ನರ್​ ಅಪ್​ ಸ್ಥಾನ ಪಡೆದ ಸಂಗೀತಾ ಶೃಂಗೇರಿ ಅವರಿಗೆ 7 ಲಕ್ಷ ರೂ. ಬಹುಮಾನ ನೀಡಲಾಗಿದೆ. ಈವರೆಗಿನ ಬಿಗ್​ ಬಾಸ್​ ಸೀಸನ್​ಗಳಲ್ಲಿ ವಿನ್ನರ್​ಗೆ ಮಾತ್ರ ನಗದು ಬಹುಮಾನ ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಫಿನಾಲೆಗೆ ಬಂದಿರುವ ಐವರು ಕಂಟೆಸ್ಟೆಂಟ್​ಗಳಿಗೂ ಕ್ಯಾಶ್​ ಪ್ರೈಸ್​ ನೀಡಲಾಗಿದೆ.

ಬಿಗ್​ ಬಾಸ್​ ಮನೆಯೊಳಗೆ ಈ ಬಾರಿ ಒಟ್ಟು 21 ಸ್ಪರ್ಧಿಗಳು ಕಾಲಿಟ್ಟಿದ್ದರು. ಆಟ ಪ್ರಾರಂಭವಾದ ಮೊದಲ ವಾರದಿಂದಲೇ ಒಬ್ಬೊಬ್ಬರಾಗಿ ಮನೆಯಿಂದ ಹೊರ ನಡೆದು, ವೈಲ್ಡ್​ ಕಾರ್ಡ್​ ಎಂಟ್ರಿಯಲ್ಲಿ ಮತ್ತೆ ಮನೆಯೊಳಗೆ ಪ್ರವೇಶಿಸಿ, ಒಟ್ಟು 112 ದಿನಗಳು ಅಂದರೆ 16 ವಾರಗಳ ಕಾಲ ಬಿಗ್​ ಬಾಸ್​ ಆಟ ನಡೆದಿದೆ. ಈ 112 ದಿನಗಳ ಜಿದ್ದಾಜಿದ್ದಿನಲ್ಲಿ ಫಿನಾಲೆ ಅಂಗಳಕ್ಕೆ ಆರು ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದರು. ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ವಿನಯ್​ ಗೌಡ, ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​ ಹಾಗೂ ಕಾರ್ತಿಕ್​ ಮಹೇಶ್​ ಇದ್ದರು. ಇವರಲ್ಲಿ ಇಬ್ಬರು ಶನಿವಾರವೇ ಮನೆಯಿಂದ ಹೊರ ನಡೆದಿದ್ದರು. 5ನೇ ರನ್ನರ್​ ಅಪ್​ ಆಗಿ ತುಕಾಲಿ ಸಂತೋಷ್​ ಅವರು ಮನೆಯಿಂದ ಹೊರ ನಡೆದಿದ್ದು, ಅವರಿಗೆ ಕಿಚ್ಚ ಸುದೀಪ್ ವೇದಿಕೆ ಮೇಲೆ 2 ಲಕ್ಷ ರೂಪಾಯಿಯ ಚೆಕ್​ ನೀಡಿದರು. ನಾಲ್ಕನೇ ರನ್ನರ್​ ಅಪ್​ ಆಗಿ ವರ್ತೂರು ಸಂತೋಷ್​ ಮನೆಯಿಂದ ಹೊರ ನಡೆದಿದ್ದು, ಅವರಿಗೆ 2 ಲಕ್ಷ ರೂಪಾಯಿಯ ಚೆಕ್​ ಹಸ್ತಾಂತರಿಸಲಾಗಿದೆ.

ಮೂರನೇ ರನ್ನರ್​ ಅಪ್​ ಆಯ್ಕೆ ಈ ಬಾರಿ ವಿಶೇಷವಾಗಿ ನಡೆಯಿತು. ಮನೆಯೊಳಗಿದ್ದ ಕೊನೆಯ ನಾಲ್ಕು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಮನೆಯಿಂದ ವೇದಿಕೆಗೆ ಕರೆತರಲು ಬಿಗ್​ ಬಾಸ್​ ಸ್ಪರ್ಧಿ ಆಗಿದ್ದ ನಟಿ ನಮ್ರತಾ ಅವರನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಮನೆಯೊಳಗೆ ಹೋದ ನಮ್ರತಾ ಮೂರನೇ ರನ್ನರ್​ ಅಪ್​ ಆಗಿ ಆನೆ ವಿನಯ್​ ಗೌಡ ಅವರನ್ನು ವೇದಿಕೆಗೆ ಕರೆದುಕೊಂಡು ಬಂದರು. ಮೂರನೇ ರನ್ನರ್​ ಅಪ್​ ಸ್ಥಾನ ಪಡೆದ ವಿನಯ್​ ಅವರಿಗೆ ಕಿಚ್ಚ 5 ಲಕ್ಷ ರೂಪಾಯಿಯ ಚೆಕ್​ ನೀಡಿದರು.

ಇನ್ನುಳಿದ ಮೂವರು ಫೈನಲ್​ ಕಂಟೆಸ್ಟೆಂಟ್​ಗಳನ್ನು ವಾಡಿಕೆಯಂತೆ ಸ್ವತಃ ಸುದೀಪ್​ ಅವರೇ ಮನೆಯೊಳಗೆ ತೆರಳಿ ವೇದಿಕೆಗೆ ಕರೆದುಕೊಂಡು ಬಂದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಸುದೀಪ್ ಮನೆಯೊಳಗೆ ಹೋಗಿ, ಟೀ ಕುಡಿದು ಅವರ ಜೊತೆಗೆ ಹರಟೆ ಹೊಡೆದ ನಂತರ ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.

ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಅವರನ್ನು ಎರಡನೇ ರನ್ನರ್ ಅಪ್ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್. ಸುದೀಪ್‌ ಅವರ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್‌ ಕೈ ಇತ್ತು. ಇಬ್ಬರ ಕೈಗಳ ಪೈಕಿ ಸುದೀಪ್ ಅವರು ಕಾರ್ತಿಕ್ ಕೈ ಎತ್ತಿ ಹಿಡಿದು ವಿನ್ನರ್​ ಎಂದು ಘೋಷಣೆ ಮಾಡಿದರು.

ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ ಸೀಸನ್‌ 10ರ ಸ್ಮರಣೀಯ ಕ್ಷಣಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.