ETV Bharat / entertainment

ಸಿಎಂ ಮಮತಾ ಮಧ್ಯಪ್ರವೇಶ: ನಿರ್ದೇಶಕ ರಾಹುಲ್ ಮುಖರ್ಜಿ ಮೇಲಿನ ನಿಷೇಧ ತೆಗೆದುಹಾಕಿದ ಎಫ್‌ಸಿಟಿಡಬ್ಲ್ಯುಇಐ - Rahool Mukherjee - RAHOOL MUKHERJEE

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಧ್ಯಪ್ರವೇಶದ ನಂತರ ಫೆಡರೇಶನ್ ಆಫ್ ಸಿನಿ ಟೆಕ್ನಿಷಿಯನ್ಸ್ ಆ್ಯಂಡ್​​ ವರ್ಕರ್ಸ್ ಆಫ್ ಈಸ್ಟರ್ನ್ ಇಂಡಿಯಾ (ಎಫ್‌ಸಿಟಿಡಬ್ಲ್ಯೂಇಐ) ನಿರ್ದೇಶಕ ರಾಹುಲ್ ಮುಖರ್ಜಿ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ. ದುರ್ಗಾ ಪೂಜೆ ಸಂದರ್ಭ ಬಿಡುಗಡೆಯಾಗಲಿರುವ ರಾಹುಲ್​​ ಮುಖರ್ಜಿಯವರ ಹೊಸ ಪ್ರಾಜೆಕ್ಟ್‌ನ ಚಿತ್ರೀಕರಣ ಇಂದು ಪುನರಾರಂಭವಾಗಲಿದೆ. ಚಿತ್ರರಂಗದ ಪ್ರಮುಖರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ನಡೆದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Director Rahool Mukherjee Back to Work
ನಿರ್ದೇಶನಕ್ಕೆ ಮರಳಿದ ರಾಹುಲ್ ಮುಖರ್ಜಿ (Photo: ETV Bharat)
author img

By ETV Bharat Karnataka Team

Published : Jul 31, 2024, 4:10 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಧ್ಯಪ್ರವೇಶದ ನಂತರ ಫೆಡರೇಶನ್ ಆಫ್ ಸಿನಿ ಟೆಕ್ನಿಷಿಯನ್ಸ್ ಅಂಡ್​​​​ ವರ್ಕರ್ಸ್ ಆಫ್ ಈಸ್ಟರ್ನ್ ಇಂಡಿಯಾ (ಎಫ್‌ಸಿಟಿಡಬ್ಲ್ಯುಇಐ) ನಿರ್ದೇಶಕ ರಾಹುಲ್ ಮುಖರ್ಜಿ (Rahool Mukherjee) ಅವರ ಮೇಲೆ ವಿಧಿಸಿದ್ದ ನಿಷೇಧವನ್ನು ತೆಗೆದುಹಾಕಿದೆ. ಹಾಗಾಗಿ, ದುರ್ಗಾ ಪೂಜಾ ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಅವರ ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣವನ್ನು ಪ್ರಾರಂಭಿಸಲು ಅನುಮತಿ ಸಿಕ್ಕಿದೆ. ಶೂಟಿಂಗ್​​ ಪುನರಾರಂಭಿಸಲು ನಿರ್ಧರಿಸಲಾಗಿದೆ.

ಮಂಗಳವಾರದಂದು, ಫಿಲ್ಮ್​​​ಮೇಕರ್​​ ಗೌತಮ್ ಘೋಸ್, ನಟರಾದ ಪ್ರೊಸೆನ್​​​​​ಜಿತ್ ಚಟರ್ಜಿ, ದೇವ್ ಮತ್ತು ಸಚಿವ ಅರೂಪ್ ಬಿಸ್ವಾಸ್ ಅವರು ಸರ್ಕಾರಿ ಕಚೇರಿ ನಬನ್ನಾದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ದೀರ್ಘ ಚರ್ಚೆ ನಡೆಸಿದರು. ನಂತರ, ಸಂಜೆ ಟೆಕ್ನಿಷಿಯನ್ಸ್ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಬುಧವಾರದಿಂದ ಶೂಟಿಂಗ್​​ ಪ್ರಾರಂಭವಾಗಲಿದೆ ಎಂಬ ತೀರ್ಮಾನಕ್ಕೆ ಬರಲಾಯಿತು.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಫಿಲ್ಮ್​​​ಮೇಕರ್​​ ಕೌಶಿಕ್ ಗಂಗೂಲಿ, "ಇಷ್ಟು ದಿನದಿಂದ ಸಮಸ್ಯೆ ಸೃಷ್ಟಿಸಿದ್ದ ನಿಯಮಗಳಲ್ಲಿ ಬದಲಾವಣೆ ಆಗಲಿದೆ, ಯಾರನ್ನೂ ನಿಷೇಧಿಸಲಾಗುವುದಿಲ್ಲ, ನವೆಂಬರ್ ಒಳಗೆ ಸಮಿತಿ ರಚಿಸಲಾಗುವುದು. ಇದಕ್ಕೆ ಶಾಶ್ವತ ಪರಿಹಾರ ಸಿಗಲಿದೆ' ಎಂದು ತಿಳಿಸಿದರು.

ನಟನೆ ಜೊತೆ ನಿರ್ದೇಶನದಲ್ಲೂ ಗುರುತಿಸಿಕೊಂಡಿರುವ ಸುದೇಶ್ನಾ ರಾಯ್ ಮಾತನಾಡಿ, "ಮುಖ್ಯಮಂತ್ರಿ ಅವರೊಂದಿಗಿನ ಚರ್ಚೆ ಪ್ರಯೋಜನಕಾರಿಯಾಗಿದೆ. ಸಿಎಂ ನಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದು, ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ಇಷ್ಟು ದಿನ ಜಾರಿಯಲ್ಲಿದ್ದ ಹಲವು ನಿಯಮಗಳಿಗೆ ತಿದ್ದುಪಡಿ ತರುವಂತೆ ಸೂಚಿಸಿದ್ದಾರೆ'' ಎಂದು ತಿಳಿಸಿದರು.

ದೇವ್ ಮಾತನಾಡಿ, "ಹೆಚ್ಚುವರಿ ಹಣ ಮತ್ತು ಯೂನಿಟ್‌ಗಳ ಅಗತ್ಯವಿಲ್ಲ. ಇನ್ನು ಕಲಾವಿದರನ್ನು ನಿಷೇಧಿಸಲಾಗುವುದಿಲ್ಲ. ಇನ್ನೊಬ್ಬರ ಆಹಾರ ಕಸಿದುಕೊಳ್ಳುವ ಸ್ಥಿತಿ ಇನ್ನಿಲ್ಲ" ಎಂದು ತಿಳಿಸಿದರು. ಎಫ್‌ಸಿಟಿಡಬ್ಲ್ಯುಇಐ ಅಧ್ಯಕ್ಷ ಸ್ವರೂಪ್ ಬಿಸ್ವಾಸ್ ಮಾತನಾಡಿ, "ಮುಖ್ಯಮಂತ್ರಿ ಅವರ ಆದೇಶಗಳಿಗೆ ಬದ್ಧರಾಗಿದ್ದೇವೆ. ಸಿಎಂ ನಮ್ಮ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತಾಪಿಸಲಾಗಿರುವ ಉಳಿದ ತಿದ್ದುಪಡಿಗಳ ಬಗ್ಗೆ ಇಸಿ ಸಮಿತಿಯಲ್ಲಿ ಸಭೆ ನಡೆಸುತ್ತೇವೆ. ಅಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ದರ್ಶನ್​ಗೆ ಹೀಗಾಗಬಾರದಿತ್ತು': ಪ್ರಕರಣದ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದಿಷ್ಟು - Kumar Bangarappa on Darshan

ಈ ಹಿಂದೆ, ತಂತ್ರಜ್ಞರ ಸ್ಟುಡಿಯೋದಲ್ಲಿನ ಸಮಸ್ಯೆ ಪರಿಹರಿಸುವ ಪ್ರಯತ್ನಗಳು ವಿಫಲಗೊಂಡಿದ್ದವು. ಮುಖರ್ಜಿ ಅವರ ಅಡಿ ಕೆಲಸ ಮಾಡಲು ತಂತ್ರಜ್ಞರು ನಿರಾಕರಿಸಿದ್ದರಿಂದ ಸಮಸ್ಯೆಗಳು ಉದ್ಭವಿಸಿತು, ಇದು ಪ್ರೊಡಕ್ಷನ್​​ ಕೆಲಸಗಳನ್ನು ಸ್ಥಗಿತಗೊಳಿಸಿತ್ತು. ಪರಿಣಾಮವಾಗಿ, ಎಫ್‌ಸಿಟಿಡಬ್ಲ್ಯುಇಐ ನಿರ್ದೇಶನದಿಂದ ರಾಹುಲ್ ಮುಖರ್ಜಿ ಅವರನ್ನು ನಿಷೇಧಿಸುವ ಕ್ರಮಕ್ಕೆ ಮುಂದಾಯಿತು. ಅದಾಗ್ಯೂ, ಮೂರು ತಿಂಗಳ ಕಾಲ ಕೆಲ ನಿರ್ಬಂಧಗಳಡಿಯಲ್ಲಿ ಕ್ರಿಯೇಟಿವ್​​ ಪ್ರೊಡ್ಯೂಸರ್​ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: 'ದರ್ಶನ್ ಅಪರಾಧಿ ಅಲ್ಲ, ಅವರ ಮೇಲೆ ಗಂಭೀರ ಆರೋಪವಿದೆ': ನಟ ಚೇತನ್ ಅಹಿಂಸಾ - ACTOR CHETAN ON DARSHAN CASE

ಚಾಲ್ತಿಯಲ್ಲಿರುವ ನಿಯಮಗಳ ಉಲ್ಲಂಘನೆಯಿಂದಾಗಿ ರಾಹುಲ್ ಮುಖರ್ಜಿ ಅವರನ್ನು ನಿರ್ದೇಶನದಿಂದ ಮೂರು ತಿಂಗಳ ಕಾಲಕ್ಕೆ ನಿಷೇಧಿಸಲಾಗಿತ್ತು. ಫೆಡರೇಶನ್‌ಗೆ ತಿಳಿಸದೇ ಮತ್ತೊಂದು ಚಿತ್ರದ ಚಿತ್ರೀಕರಣಕ್ಕಾಗಿ ಬಾಂಗ್ಲಾದೇಶಕ್ಕೆ ಪ್ರಯಾಣಿಸಿದ್ದು, ಢಾಕಾ ಮೂಲದ ತಂತ್ರಜ್ಞರ ಸಹಾಯ ಪಡೆದಿದ್ದು ಸೇರಿದಂತೆ ಅವರ ಹಲವು ವಿಚಾರಗಳು ಚಿತ್ರರಂಗದ ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆರೋಪವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.