ETV Bharat / entertainment

ಜುಲೈ 19ರಂದು ರಾಜ್ಯಾದ್ಯಂತ 'ಬ್ಯಾಕ್ ಬೆಂಚರ್ಸ್' ತೆರೆಗೆ - Backbenchers - BACKBENCHERS

ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ 'ಬ್ಯಾಕ್ ಬೆಂಚರ್ಸ್' ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.

Backbenchers movie picture
'ಬ್ಯಾಕ್ ಬೆಂಚರ್ಸ್' ಸಿನಿಮಾದ ಒಂದು ನೋಟ (ETV Bharat)
author img

By ETV Bharat Karnataka Team

Published : Jun 30, 2024, 1:23 PM IST

ಸ್ಯಾಂಡಲ್​​ವುಡ್ ಅಂಗಳದಲ್ಲಿ ವಿಭಿನ್ನ, ಆಸಕ್ತಿಕರ ಕಂಟೆಂಟ್​ನೊಂದಿಗೆ​​​ ಸಖತ್​​ ಕ್ರೇಜ್ ಹುಟ್ಟುಹಾಕಿರುವ ಚಿತ್ರ 'ಬ್ಯಾಕ್ ಬೆಂಚರ್ಸ್'. ಈಗಾಗಲೇ ಟೀಸರ್ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಕಾಲೇಜುಕೇಂದ್ರಿತ ಕಥೆ ಮತ್ತು ಹೊಸತನದ ನಿರೂಪಣೆಯ ಸುಳಿವಿನೊಂದಿಗೆ ಬಹುತೇಕ ಎಲ್ಲಾ ವರ್ಗದ ಪ್ರೇಕ್ಷಕರನ್ನೂ 'ಬ್ಯಾಕ್ ಬೆಂಚರ್ಸ್' ಆಕರ್ಷಿಸುತ್ತಿದೆ.

ರಾಜಶೇಖರ್ ನಿರ್ದೇಶನದಲ್ಲಿ ಕಾಲೇಜು ಕಥೆ: ಆರಂಭಿಕ ಹೆಜ್ಜೆಯಲ್ಲಿಯೇ ಸಕಾರಾತ್ಮಕ ವಾತಾವರಣ ಸೃಷ್ಟಿಸಿಕೊಂಡಿರುವ ಈ ಸಿನಿಮಾ ಇದೀಗ ಸೆನ್ಸಾರ್ ಅಂಗಳದಲ್ಲಿದೆ. ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ನಿರ್ಮಾಪಕ, ನಿರ್ದೇಶಕರಾಗಿ ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ರಾಜಶೇಖರ್ ಹೊಸಬರ ತಂಡವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.

Backbenchers movie picture
'ಬ್ಯಾಕ್ ಬೆಂಚರ್ಸ್' ಸಿನಿಮಾ (ETV Bharat)

ಬ್ಯಾಕ್​ ಬೆಂಚರ್ಸ್​​ ತಾರಾಗಣ: ಯುವ ಪ್ರತಿಭೆಗಳಾದ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ., ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ.

ಹೊಸಬರ ತಂಡದ ಮೇಲೆ ನಿರ್ದೇಶಕರ ಭರವಸೆ: ಸಾಮಾನ್ಯವಾಗಿ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಲು ಬಹುತೇಕರು ಹಿಂದೇಟು ಹಾಕುತ್ತಾರೆ. ರಾಜಶೇಖರ್ ಸಂಪೂರ್ಣವಾಗಿ ಹೊಸಬರ ತಂಡದೊಂದಿಗೇನೆ ಈ ಚಿತ್ರ ತಯಾರಿಸಿದ್ದಾರೆಂದರೆ ಅಚ್ಚರಿ ಆಗದಿರದು. ಹೊಸಬರೇ ಸೇರಿರುವುದರಿಂದ ಇಲ್ಲಿ ಹೊಸತನದ ಛಾಯೆಯಿದೆ. ಅದರ ಘಮಲು ಟೀಸರ್ ಮೂಲಕ ಪ್ರೇಕ್ಷಕರನ್ನು ತಲುಪಿದೆ.

Backbenchers movie picture
'ಬ್ಯಾಕ್ ಬೆಂಚರ್ಸ್' ಸಿನಿಮಾ (ETV Bharat)

ಇದನ್ನೂ ಓದಿ: ವಿಶ್ವ ಚಾಂಪಿಯನ್ನರಿಗೆ​ ಯಶ್​​, ಸುದೀಪ್​, ರಶ್ಮಿಕಾ ಸೇರಿ ಕನ್ನಡ ತಾರೆಯರಿಂದ ಅಭಿನಂದನೆ - Sandalwood Stars Reactions

ಯುವ ಚಿತ್ರತಂಡ ವಿಭಿನ್ನ ಶೈಲಿಯಲ್ಲಿಯೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನಾಯಕ ನಾಯಕಿ, ಇತರೆ ಪಾತ್ರಧಾರಿಗಳೂ ಸೇರಿದಂತೆ ಒಂದಿಡೀ ಚಿತ್ರತಂಡ ಹೊಸ ಶೈಲಿಯಯಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ. ನಿರ್ದೇಶಕ ರಾಜಶೇಖರ್ ಸ್ಕ್ರಿಪ್ಟ್​​ ವರ್ಕ್ ಸೇರಿದಂತೆ ಎಲ್ಲದರಲ್ಲಿಯೂ ಈ ಹುಡುಗ ಹುಡುಗಿಯರನ್ನು ಸೇರಿಸಿಕೊಂಡಿದ್ದಾರೆ.

Backbenchers movie picture
'ಬ್ಯಾಕ್ ಬೆಂಚರ್ಸ್' ಸಿನಿಮಾ (ETV Bharat)

ಇದನ್ನೂ ಓದಿ: ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, 'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು: ಶಿವ ರಾಜ್‌ಕುಮಾರ್‌ - Shiva Rajkumar

ಜುಲೈ 19ಕ್ಕೆ ಸಿನಿಮಾ ಬಿಡುಗಡೆ: ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ಖುದ್ದು ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ. ಇದೀಗ ಸೆನ್ಸಾರ್ ಅಂಗಳ ತಲುಪಿರುವ ಬ್ಯಾಕ್ ಬೆಂಚರ್ಸ್ ಮುಂದಿನ ತಿಂಗಳು ಜುಲೈ 19ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ನವ ಪ್ರತಿಭೆಗಳ ತಂಡ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಎಂಬುದು ಬರುವ ತಿಂಗಳಾಂತ್ಯ ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.