ETV Bharat / entertainment

ಸಸ್ಪೆನ್ಸ್, ಥ್ರಿಲ್ಲರ್ ಕಥೆಯ 'ಸಂಗೀತ ಸಂತೋಷ' ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿ - SANGEETHA SANTHOSHA TRAILER

'ಸಂಗೀತ ಸಂತೋಷ' ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ.

Sangeetha Santhosha trailer release event
'ಸಂಗೀತ ಸಂತೋಷ' ಟ್ರೇಲರ್​ ರಿಲೀಸ್​ ಈವೆಂಟ್​ (ETV Bharat)
author img

By ETV Bharat Entertainment Team

Published : Oct 10, 2024, 6:46 PM IST

ಸ್ಯಾಂಡಲ್​ವುಡ್​ನಲ್ಲಿ ಕಂಟೆಂಟ್ ಆಧರಿತ ಸಿನಿಮಾಗಳು ಬರುತ್ತಿವೆ. ಇದೀಗ ಅಂಥದ್ದೇ ಕಥೆ ಇರುವ 'ಸಂಗೀತ ಸಂತೋಷ' ಎಂಬ ಚಿತ್ರವೊಂದು ಬಿಡುಗಡೆಗೆ ರೆಡಿಯಾಗಿದೆ. ಚಿತ್ರದ ಟ್ರೇಲರ್​ ಅನ್ನು ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿ ಅನಾವರಣಗೊಳಿಸಿ, ಶುಭ ಹಾರೈಸಿದರು. ವಿಶೇಷ ಅತಿಥಿಯಾಗಿ ಲಹರಿ ವೇಲು ಆಗಮಿಸಿದ್ದರು. ಸೆನ್ಸಾರ್ ಮಂಡಳಿಯಿಂದ 'ಯು' ಪ್ರಮಾಣಪತ್ರ ಪಡೆದಿದ್ದು, ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.

ಮೊದಲು ಮಾತನಾಡಿದ ನಿರ್ದೇಶಕ ಸಿದ್ದು, "ಸಿನಿಮಾ ವಿಷಯದಲ್ಲಿ ನಾಲ್ಕು ಪ್ರಮುಖ ಪಿಲ್ಲರ್​ಗಳಿವೆ. ಅದರಲ್ಲಿ ಸಿನಿಮಾ ತಯಾರಿ, ನಟನೆ ಎರಡು ಪಿಲ್ಲರ್​ಗಳಾದ್ರೆ, ಜನರಿಗೆ ತಲುಪಿಸುವ ಮಾಧ್ಯಮ ಮತ್ತು ವೀಕ್ಷಕರ ಪ್ರೀತಿ ಇನ್ನೆರಡು ಪಿಲ್ಲರ್​ಗಳಾಗಿ ಕೆಲಸ ಮಾಡಲಿವೆ. ನಾನು ಸಿನಿಮಾಪ್ರೇಮಿ. ಒಳ್ಳೆಯ ಸಿನಿಮಾ‌ ನೋಡಿ, ನಾನು ಈ ರೀತಿ ಸಿನಿಮಾ ಮಾಡಬೇಕೆಂದು ಕನಸು ಕಂಡವನು. ಆ ಕನಸೀಗ ನನಸಾಗಿದೆ. ಎಲ್ಲರ ಸಹಕಾರದಿಂದ 'ಸಂತೋಷ ಸಂಗೀತ' ಸಿನಿಮಾವನ್ನು ನಾನೇ ನಿರ್ಮಿಸಿ, ನಿರ್ದೇಶಿಸಿದ್ದೇನೆ" ಎಂದು ತಿಳಿಸಿದರು.

"ಲಾಕ್‌ಡೌನ್ ಸಂದರ್ಭದಲ್ಲಿ ಬರೆದ ಕಥೆ ಇದು. ಲವ್, ಕಾಮಿಡಿ, ಸಸ್ಪೆನ್ಸ್ ಹೀಗೆ ನೋಡುಗನಿಗೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿದೆ. ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ಈ ಚಿತ್ರದ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದಾರೆ. ದೊಡ್ಡಣ್ಣ, ಅವಿನಾಶ್, ಲಯ ಕೋಕಿಲ, ಕವನ, ಅಮಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ, ಮಡೆನೂರು ಮನು, ಹನೀಶ್, ನಕ್ಷತ್ರ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಟ್ರೇಲರ್ ಕೂಡ ಚೆನ್ನಾಗಿ ಬಂದಿದೆ. ಸಿನಿಮಾ ಕೂಡಾ ಪ್ರೇಕ್ಷಕರಿಗೆ ಇಷ್ಟ ಆಗಲಿದೆ" ಎಂದು ನಿರ್ದೇಶಕ ಸಿದ್ದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ತಮಟೆ' ಚಿತ್ರದ ಮೂಲಕ ಶೋಷಿತ ಜನಾಂಗದ ಬದುಕು ಅನಾವರಣ: ಡಿಸಿಎಂ ಡಿ.ಕೆ.ಶಿವಕುಮಾರ್

ಯುವ ನಟ ಅರ್ನವ್ ವಿನ್ಯಾಸ್ ಮಾತನಾಡಿ, "2017ರಲ್ಲಿ ತೆರೆಕಂಡ ಹೊಂಬಣ್ಣ ಚಿತ್ರದ ಮೂಲಕ‌ ಸಿನಿ ಪಯಣ ಆರಂಭಿಸಿದ ನಾನು ಆನಂತರ 'ಪ್ರೇಮಂ' ಚಿತ್ರದಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಈ ಚಿತ್ರದಲ್ಲಿ ನನ್ನದು ಉದ್ಯಮಿಯ ಪಾತ್ರ. ನಿಜ ಜೀವನದಲ್ಲೂ‌ ಪತಿ ಪತ್ನಿಯರಾಗಿರುವ ನಾನು ಹಾಗೂ ರಾಣಿ ವರದ್, ತೆರೆಯ ಮೇಲೂ ಪತಿ ಪತ್ನಿಯರಾಗೇ ಕಾಣಿಸಿಕೊಂಡಿರುವುದು ವಿಶೇಷ" ಎಂದರು‌.

Sangeetha Santhosha trailer release event
'ಸಂಗೀತ ಸಂತೋಷ' ಟ್ರೇಲರ್​ ರಿಲೀಸ್​ ಈವೆಂಟ್​ನಲ್ಲಿ ಚಿತ್ರತಂಡ (ETV Bharat)

ಬಳಿಕ ನಾಯಕಿ ರಾಣಿ ವರದ್ ಮಾತನಾಡಿ, "ನನ್ನ ಪಾತ್ರ ಕೂಡಾ ಚೆನ್ನಾಗಿದೆ" ಎಂದು ತಿಳಿಸಿದರು. ‌

ಇದನ್ನೂ ಓದಿ: ರಜನಿಕಾಂತ್ 'ವೆಟ್ಟೈಯನ್‌' ಬಿಡುಗಡೆ: ಚಿತ್ರಮಂದಿರಗಳೆದುರು ಸಂಭ್ರಮಾಚರಣೆ ಜೋರು - ವಿಡಿಯೋ ನೋಡಿ

ಚಿತ್ರದ ಮತ್ತೋರ್ವ ನಟಿ ನಕ್ಷತ್ರ ಮಾತನಾಡಿ, ಇವರಿಬ್ಬರ ನಡುವೆ ಬರುವ ಹೆಣ್ಣಿನ ಪಾತ್ರ ನನ್ನದು" ಎಂದರು. ಈ ಸಂದರ್ಭದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.