ETV Bharat / entertainment

'ಆಲ್ಫಾ' ಆದ ಆಲಿಯಾ; Alpha ಗಂಡ - ಹೆಂಡತಿ ಎಂದ ನೆಟ್ಟಿಗರು - Alia Bhatts Alpha Film title teaser - ALIA BHATTS ALPHA FILM TITLE TEASER

ಯಶ್​ ರಾಜ್​ ಫಿಲ್ಮ್ಸ್​ ಸ್ಪೈ ಯುನಿವರ್ಸ್​ ಬ್ಯಾನರ್​ ಅಡಿ ಈ ಚಿತ್ರ ಮೂಡಿ ಬರಲಿದ್ದು, ಪತ್ತೆದಾರಿ ಕಥೆ ಹೊಂದಿರುವ ಚಿತ್ರ ಇದಾಗಿದೆ.

Alia Bhatts Alpha Film title teaser Realesed by Yash Raj Films Spy Universe
ಆಲಿಯಾ, ಶಾರ್ವರಿ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 5, 2024, 4:18 PM IST

ಹೈದರಾಬಾದ್​: ಬಾಲಿವುಡ್ ನಟಿ ಆಲಿಯಾಭಟ್​​ ತಮ್ಮ ಬಹು ನಿರೀಕ್ಷೆಯ ಸಿನಿಮಾದ ಕುರಿತು ಹೊಸ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಪತ್ತೆದಾರಿ ಕಥೆ ಹೊಂದಿದೆ. ಚಿತ್ರಕ್ಕೆ 'ಆಲ್ಫಾ' ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಆಲಿಯಾಗೆ ನಟಿ ಶಾರ್ವರಿ ಕೂಡ ಜೊತೆಯಾಗಿದ್ದಾರೆ. ಈ ಕುರಿತು ಆಲಿಯಾ ಮತ್ತು ಶಾರ್ವರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್​ ಟೀಸರ್​ನಲ್ಲಿ ಆಲಿಯಾ ಧ್ವನಿ ಕೇಳ ಬಹುದಾಗಿದೆ.

ಗ್ರೀಕ್​ ವರ್ಣಮಾಲೆಯ ಮೊದಲ ಅಕ್ಷರ, ಹಾಗೇ ನಮ್ಮ ಯೋಜನೆಯ ಮುಖ್ಯ ಉದ್ದೇಶ. ಎಲ್ಲರಿಗಿಂತ ಮೊದಲು, ಎಲ್ಲರಿಗಿಂತ ವೇಗ, ಎಲ್ಲರಿಗಿಂತ ಶೂರರು. ಎಚ್ಚರದಿಂದ ನೋಡಿದರೆ, ಎಲ್ಲ ನಗರಗಳಲ್ಲೂ ಒಂದು ಕಾಡಿದೆ. ಆ ಕಾಡನ್ನು ಆಳುವುದು ಆಲ್ಫಾ ಎಂದು ಚಿತ್ರದ ಟೈಟಲ್​ ಅನಾವರಣಗೊಂಡಿದೆ. ಚಿತ್ರದ ಟೀಸರ್​ ಅಂತ್ಯದಲ್ಲಿ ಚಿತ್ರ ಇದೀಗ ಶೂಟಿಂಗ್​ ಪ್ರಾರಂಭಿಸಲಿದೆ ಎಂದು ತೋರಿಸಲಿದೆ.

ಯಶ್​ ರಾಜ್​ ಫಿಲ್ಮ್ಸ್​ ಸ್ಪೈ ಯುನಿವರ್ಸ್​ನಲ್ಲಿ ಟೀಸರ್​ ಹಂಚಿಕೊಂಡಿರುವ ನಟಿ ಆಲಿಯಾ, ಇದು ಆಲ್ಫಾ ಸಮಯ ಹುಡುಗಿಯರೇ ಎಂದು ಅಡಿ ಬರಹ ಬರೆದಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಮುನ್ನವೇ ಚಿತ್ರ ಇದೀಗ ಸದ್ದು ಮಾಡುತ್ತಿದೆ. ಮಹಿಳಾ ಗೂಢಚಾರಿಣಿ ಪ್ರಧಾನ ಪಾತ್ರದಲ್ಲಿ ಹೊಂದಿರುವ ಕಥೆಯನ್ನು ಚಿತ್ರ ಹೊಂದಿದೆ. ಆಲಿಯಾ ಮತ್ತು ಶಾರ್ವರಿ ಪ್ರಮುಖ ಪಾತ್ರದಲ್ಲಿ ಸೂಪರ್​ ಏಜೆಂಟ್​ ಆಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ.

ಚಿತ್ರದ ಟೈಟಲ್​ ಬಿಡುಗಡೆಯೇ ಇದೀಗ ಅನೇಕರನ್ನು ಸೆಳೆದಿದೆ. ಜೊತೆಗೆ ಆಲಿಯಾ ಮತ್ತು ರಣಬೀರ್​ ಕಪೂರ್​ ಅಭಿನಯದ 'ಅನಿಮಲ್'​ ಚಿತ್ರದಲ್ಲಿ ಆಲ್ಫಾ ಡೈಲಾಗ್​​ಗಳೊಂದಿಗೆ ತಾಳೆ ಹಾಕಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಇಬ್ಬರನ್ನು ಆಲ್ಫಾ ಜೋಡಿ ಎಂದು ಟ್ಯಾಗ್​ ಮಾಡಲಾಗುತ್ತಿದೆ. ಆಲ್ಫಾ ಮೇಲ್​, ಆಲ್ಫಾ ಗರ್ಲ್​​ ಎಂಬ ಬಳಕೆದಾರರೊಬ್ಬರ ಕಮೆಂಟ್​ಗೆ ಮತ್ತೊಬ್ಬರು ಆಲ್ಫಾ ಗಂಡ, ಅಲ್ಫಾ ಹೆಂಡತಿ ಎಂದು ಬರೆದಿದ್ದಾರೆ.

ಈಗಾಗಲೇ ಮಹಿಳಾ ಪ್ರಧಾನ ಚಿತ್ರದಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿರುವ ನಟಿ ಇದೀಗ ಮತ್ತೊಮ್ಮೆ ಅದೇ ರೀತಿಯ ಪ್ರದರ್ಶನವನ್ನು ಆಲ್ಪಾ ಚಿತ್ರದಲ್ಲಿ ತೋರಲು ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಅವರು ಶಾರ್ವರಿ ವಾಗ್​ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. 'ಆಲ್ಫಾ' ಸಿನಿಮಾವನ್ನು ಶಿವ್ ರಾವೈಲ್ ನಿರ್ದೇಶಿಸಲಿದ್ದಾರೆ. ಇದು ಯಶ್ ರಾಜ್ ಫಿಲಂಸ್‌ನ ಪತ್ತೇದಾರಿ ಕಥೆಯ ಏಳನೇ ಚಿತ್ರವಾಗಲಿದೆ.

ಇದನ್ನೂ ಓದಿ: ಹಣದ ಸೂಟ್‌ಕೇಸ್​​ನೊಂದಿಗೆ ರಶ್ಮಿಕಾ ಮಂದಣ್ಣ; ಕುತೂಹಲ ಹೆಚ್ಚಿಸಿದ 'ಕುಬೇರ' ಫಸ್ಟ್ ಗ್ಲಿಂಪ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.