ETV Bharat / entertainment

ಡ್ಯಾನ್ಸ್​​ ಮಾಡುತ್ತಲೇ ಬಿದ್ದ ಅಕ್ಷಯ್​ ಕುಮಾರ್​​: ಕಿಲಾಡಿಯ ವಿಡಿಯೋ ವೈರಲ್​​ - Akshay Kumar - AKSHAY KUMAR

ಬಾಲಿವುಡ್​ ಕಿಲಾಡಿ ಖ್ಯಾತಿಯ ಅಕ್ಷಯ್​ ಕುಮಾರ್​ ಶೇರ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Khel Khel Mein actors
'ಖೇಲ್ ಖೇಲ್ ಮೇ' ಕಲಾವಿದರು (Etv Bharat)
author img

By ETV Bharat Karnataka Team

Published : Jul 25, 2024, 5:25 PM IST

ಅಕ್ಷಯ್ ಕುಮಾರ್, ಬಾಲಿವುಡ್​ನ ಬಹುಬೇಡಿಕೆ ನಟ. 'ಸರ್ಫಿರಾ' ಚಿತ್ರದ ನಂತರ 'ಖೇಲ್ ಖೇಲ್ ಮೇ' ಬಿಡುಗಡೆಗೆ ಅವರು ಸಜ್ಜಾಗಿದ್ದಾರೆ. ನಿರ್ಮಾಪಕರಿಂದು ಚಿತ್ರದ ಹೊಸ ಹಾಡು 'ಹೌಲಿ ಹೌಲಿ'ಯನ್ನು ಅನಾವರಣಗೊಳಿಸಲಿದ್ದಾರೆ.

ಹಾಡಿನ ಬಿಡುಗಡೆಗೂ ಮುನ್ನ ಅಕ್ಷಯ್​​ ಕುಮಾರ್ ಹಾಡಿನ ಚಿತ್ರೀಕರಣದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಸಾಕಷ್ಟು ಮನರಂಜನಾತ್ಮಕವಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​​ ಆಗಿದೆ.

ಅಕ್ಷಯ್ ಕುಮಾರ್ ಅತ್ಯುತ್ತಮ ಅಭಿನಯದ ಹೊರತಾಗಿ ಸ್ಟಂಟ್​​, ಫಿಟ್ನೆಸ್ ಜೊತೆಗೆ ತಮ್ಮ ಮೋಜು ಮಸ್ತಿಗೂ ಹೆಸರುವಾಸಿಯಾಗಿದ್ದಾರೆ. ಇಂದು 'ಹೌಲಿ ಹೌಲಿ'ಗೆ ಸಂಬಂಧಿಸಿದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಜೊತೆಗೆ ವಾಣಿ ಕಪೂರ್, ತಾಪ್ಸಿ ಪನ್ನು ಸೇರಿದಂತೆ ಇತರ ಪಾತ್ರವರ್ಗದ ಸದಸ್ಯರು ಕಾಣಿಸಿಕೊಂಡಿದ್ದಾರೆ. ಎಲ್ಲರೂ ಹಾಡಿನ ಬೀಟ್ಸ್​​ಗೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ಆದರೆ, ಅಕ್ಷಯ್ ಇದ್ದಕ್ಕಿದ್ದಂತೆ ಬಿದ್ದಂತೆ ವರ್ತಿಸಿದ್ದಾರೆ. ನೆಲದ ಮೇಲೆ ಮಲಗಿ ನಾಗಿನ್ ಸ್ಟೆಪ್​​ ಹಾಕಿದ್ದಾರೆ. ನಟನ ಮೋಜು ಕಂಡು ಎಲ್ಲರೂ ನಗೆಗಡಲಿನಲ್ಲಿ ತೇಲಿದ್ದಾರೆ.

ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡ ಅಕ್ಷಯ್ ಕುಮಾರ್, ''ಪರಿಶ್ರಮ, ನಗು ಮತ್ತು ಇಡೀ ಚಿತ್ರತಂಡದ ಪ್ರೀತಿ. ಇದೆಲ್ಲವನ್ನು ಸಂಗ್ರಹಿಸಿ ನಿಮಗೆ ಒಪ್ಪಿಸುತ್ತಿದ್ದೇನೆ. ಇಂದು! ಶೀಘ್ರದಲ್ಲೇ ಬರಲಿದೆ. ಟ್ರೇಲರ್​ಗೂ ಮೊದಲು ಗಾನಾ ಬಜಾವೋ. ಸಂಜೆ ಹೌಲಿ ಹೌಲಿ ಹಾಡು ಬಿಡುಗಡೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬುಡಕಟ್ಟು ಜನಾಂಗದವರೊಂದಿಗೆ ಕುಣಿದು ಸಂಭ್ರಮಿಸಿದ ದುನಿಯಾ ವಿಜಯ್​​: ವಿಡಿಯೋ - Bheema Promotion

'ಖೇಲ್ ಖೇಲ್ ಮೇ' ಒಂದು ಕಾಮಿಡಿ ಡ್ರಾಮಾವಾಗಿದ್ದು, ಮುದಸ್ಸರ್ ಅಝೀಝ್​​​ ನಿರ್ದೇಶಿಸಿದ್ದಾರೆ. ಭೂಷಣ್ ಕುಮಾರ್, ಕೃಷ್ಣ ಕುಮಾರ್, ವಿಪುಲ್ ಡಿ ಶಾ, ಅಶ್ವಿನ್ ವರ್ದೆ, ರಾಜೇಶ್ ಬಹ್ಲ್, ಶಶಿಕಾಂತ್ ಸಿನ್ಹಾ ಮತ್ತು ಅಜಯ್ ರೈ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷಯ್ ಕುಮಾರ್, ವಾಣಿ ಕಪೂರ್, ತಾಪ್ಸಿ ಪನ್ನು, ಆ್ಯಮಿ ವಿರ್ಕ್, ಆದಿತ್ಯ ಸೀಲ್ ಮತ್ತು ಪ್ರಜ್ಞಾ ಜೈಸ್ವಾಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: ಲಂಡನ್​ನಿಂದ ವಾಪಸ್​ ಆದ ಶಾರುಖ್​ ಖಾನ್​ ಕುಟುಂಬ: ವಿಡಿಯೋ ನೋಡಿ - SRK Family

ಜುಲೈ 12ರಂದು ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ 'ಸರ್ಫಿರಾ' ಸಿನಿಮಾ, ಸೌತ್​ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ 'ಇಂಡಿಯನ್ 2' ಜೊತೆಗೇ ಬಿಡುಗಡೆ ಆಯಿತು. ಬಹುನಿರೀಕ್ಷೆಗಳ ನಡುವೆ ತೆರೆಕಂಡ 'ಸರ್ಫಿರಾ' ಮಿಶ್ರ ಪ್ರತಿಕ್ರಿಯೆ ಜೊತೆಗೆ, ಬಾಕ್ಸ್​ ಆಫೀಸ್​ನಲ್ಲೂ ತೀವ್ರ ಪೈಪೋಟಿ ಎದುರಿಸಿತು. ಒಂದು ಕಾಲದಲ್ಲಿ ಸೂಪರ್​​ ಹಿಟ್​ ಚಿತ್ರಗಳನ್ನೇ ಕೊಟ್ಟ ಅಕ್ಷಯ್​,​ ಸಿನಿಮಾ ಯಶಸ್ಸಿನ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚ ಏರಿಳಿತಗಳನ್ನು ಕಾಣುತ್ತಿದ್ದಾರೆ. ಇದೀಗ ಬಿಡುಗಡೆಗೆ ಎದುರು ನೋಡುತ್ತಿರುವ 'ಖೇಲ್ ಖೇಲ್ ಮೇ' ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.