ETV Bharat / entertainment

ಬಾಂಬೆ ಬೆಡಗಿ ಸೋನಿ ಚೆರಿಸ್ಟ ಜೊತೆ ಆದಿತ್ಯ ಶಶಿಕುಮಾರ್ ಬೊಂಬಾಟ್ ಡ್ಯಾನ್ಸ್: ನೋಡಿ - Kaadaadi Movie Song - KAADAADI MOVIE SONG

'ಕಾದಾಡಿ' ಸಿನಿಮಾ ಹಾಡಿಗೆ ಬಾಂಬೆ ಬೆಡಗಿ ಸೋನಿ ಚೆರಿಸ್ಟ ಅವರೊಂದಿಗೆ ಆದಿತ್ಯ ಶಶಿಕುಮಾರ್ ಮೈ ಕುಣಿಸಿದ್ದಾರೆ.

Aditya Shashikumar, Sony Charishta
ಆದಿತ್ಯ ಶಶಿಕುಮಾರ್ ಜೊತೆ ಸೋನಿ ಚೆರಿಸ್ಟ ಡ್ಯಾನ್ಸ್ (ETV Bharat)
author img

By ETV Bharat Karnataka Team

Published : Jun 11, 2024, 8:08 PM IST

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅವರೀಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದು,‌ 'ಕಾದಾಡಿ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ರಿಲೀಸ್​ಗೆ ರೆಡಿಯಾಗಿದೆ‌. ಪ್ರಚಾರದ ಸಲುವಾಗಿ ಇತ್ತೀಚೆಗಷ್ಟೇ ಮೂರನೇ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಕೃಷ್ಣ ಸಾಹಿತ್ಯದ 'ನೂರು ಪುಟದ ಜೀವನ ಒಂದು ಎಳೆಯ ಕಾಗದ..' ಎಂಬ ಹಾಡಿಗೆ ಅನನ್ಯ ಭಟ್ ಧ್ವನಿಯಾಗಿದ್ದು, ಆದಿತ್ಯ ಶಶಿಕುಮಾರ್ ಜೊತೆ ಬಾಂಬೆ ನಟಿ ಸೋನಿ ಚೆರಿಸ್ಟ ಸೊಂಟ ಬಳುಕಿಸಿದ್ದಾರೆ. ಜನರ ಜೀವನದ ದಿನದ ಅಂತ್ಯದಲ್ಲಿ ಪ್ರತಿಯೊಬ್ಬರೂ ತ್ಯಾಗಮಯಿ ಆಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಆಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೇವೆ. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

Sony Charishta
ಆದಿತ್ಯ ಶಶಿಕುಮಾರ್ ಜೊತೆ ಸೋನಿ ಚೆರಿಸ್ಟ ಡ್ಯಾನ್ಸ್ (ETV Bharat)

ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ಚಿತ್ರದ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ ಮನೋಹರ್, ಶ್ರವಣ್‌ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣವನ್ನು ಡಿ.ಯೋಗಿಪ್ರಸಾದ್ ನಿರ್ವಹಿಸಿದ್ದಾರೆ. ಕಲೆ ಅರ್ಜುನ್‌ ಸೂರಿಸೆಟ್ಟಿ ಅವರದ್ದು. ಸಂಕಲನವನ್ನು ಪ್ರಕಾಶ್‌ ತೋಟ ನಿರ್ವಹಿಸಿದ್ದಾರೆ. ರಾಜ್‌ಪಿಡಿ ರಾಜ್‌ಕೃಷ್ಣ ನೃತ್ಯ ಸಂಯೋಜನೆ ಮಾಡಿದ್ದರೆ, ಸಾಹಸ ಬಿ.ಎಲ್.ಸತೀಶ್ , ವಿನ್‌ಚೇನ್‌ಆಂಜಿ, ಬಿಂಬಸಾರ, ರಾಮಕೃಷ್ಣ, ರಾಮಸುಂಕರ ಅವರದ್ದಾಗಿದೆ. ಗೋವಾ, ಚಿಕ್ಕಮಗಳೂರು, ಹೈದರಾಬಾದ್, ಚೆನ್ನೈನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲ್ಮ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ಧಗೊಂಡಿರುವ ಈ ಸಿನಿಮಾ ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Aditya Shashikumar, Sony Charishta
ಕಾದಾಡಿ ಸಿನಿಮಾ ಸಾಂಗ್​​ನ ಒಂದು ಕ್ಷಣ (ETV Bharat)

ಇದನ್ನೂ ಓದಿ: ಉಮಾಪತಿ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್​ ಸರ್ಜಾ ಪುತ್ರಿ - Aishwarya Umapathy Marriage

ETV Bharat Logo

Copyright © 2025 Ushodaya Enterprises Pvt. Ltd., All Rights Reserved.