ETV Bharat / entertainment

ಬರ್ತ್​​ಡೇಗೆ ಶುಭಕೋರಿದವರಿಗೆ ಧನ್ಯವಾದ ಅರ್ಪಿಸಿದ ಅಮೃತಾ ಅಯ್ಯಂಗಾರ್: ಮುಂದಿನ ಚಿತ್ರಗಳ ಘೋಷಣೆಗೆ ಫ್ಯಾನ್ಸ್​ ನಿರೀಕ್ಷೆ - Amrutha Iyengar - AMRUTHA IYENGAR

28ನೇ ವರ್ಷದ ಜನ್ಮದಿನ ಆಚರಿಸಿಕೊಂಡ ನಟಿ ಅಮೃತಾ ಅಯ್ಯಂಗಾರ್, ತಮಗೆ ಶುಭಕೋರಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Actress Amrutha Iyengar
ನಟಿ ಅಮೃತಾ ಅಯ್ಯಂಗಾರ್ (ETV Bharat)
author img

By ETV Bharat Karnataka Team

Published : Jul 27, 2024, 1:59 PM IST

ಅಮೃತಾ ಅಯ್ಯಂಗಾರ್, ಸ್ಯಾಂಡಲ್​​​ವುಡ್​ನ ಬಹುಬೇಡಿಕೆ ನಟಿಯರಲ್ಲೋರ್ವರು. ಕಳೆದ ದಿನ ತಮ್ಮ 28ನೇ ವರ್ಷದ ಜನ್ಮದಿನ ಆಚರಿಸಿಕೊಂಡ ನಟಿ, ಫೋಟೋಗಳನ್ನು ಹಂಚಿಕೊಂಡು ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಸುಂದರ ಫೋಟೋಗಳ ಜೊತೆಗೆ ಬರ್ತ್​ಡೇ ಸೆಲೆಬ್ರೇಶನ್​ನಂತೆ ತೋರುವ ಫೋಟೋವನ್ನೂ ಹಂಚಿಕೊಂಡ ಅಮೃತಾ ಅಯ್ಯಂಗಾರ್, ವಂಡರ್​ಫುಲ್​ ವಿಶಸ್​​ಗೆ ಧನ್ಯವಾದಗಳು. ಯೂ ಗಾಯ್ಸ್ ಮೇಡ್​ ಮೈ ಡೇ ಎಂದು ಬರೆದುಕೊಂಡಿದ್ದಾರೆ. ಕಳೆದ ದಿನ ತಮ್ಮ ಸ್ಟೋರಿ ವಿಭಾಗದಲ್ಲಿ ಹಲವು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದರು.

28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಟಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಅವುಗಳಲ್ಲಿ ಕೆಲವನ್ನು ನಟಿ ತಮ್ಮ ಸ್ಟೋರಿ ಸೆಕ್ಷನ್​ನಲ್ಲಿ ರೀಶೇರ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದರು. ಸದ್ಯ ಹಂಚಿಕೊಂಡಿರುವ ಹೊಸ ಸುಂದರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ 'ದ್ವಾಪರ' ಸಾಂಗ್​​ ಟ್ರೆಂಡಿಂಗ್​​​ನಲ್ಲಿ: ಸಿನಿಮಾ ನೋಡುವ ಕಾತರ ಹೆಚ್ಚಳ - Dwapara Song

ಅಮೃತಾ ಅಯ್ಯಂಗಾರ್ ತಮ್ಮ 19ನೇ ವಯಸ್ಸಿಗೆ ಕನ್ನಡ ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭಿಸಿದರು. ಸದ್ಯ ಜನಪ್ರಿಯ ನಟಿಯರಲ್ಲೊರ್ವರು. 2017ರಲ್ಲಿ ಬಂದ 'ಸಿಂಹ ಹಾಕಿದ ಹೆಜ್ಜೆ' ನಟಿಯ ಚೊಚ್ಚಲ ಚಿತ್ರ. ನಂತರ ಅನುಷ್ಕಾ, ಲವ್​ ಮಾಕ್ಟೇಲ್​, ಪಾಪ್​ಕಾರ್ನ್ ಮಂಕಿ ಟೈಗರ್​​​, ಶಿವಾರ್ಜುನ, ಬಡವ ರಾಸ್ಕಲ್​​, ಲವ್​ ಮಾಕ್ಟೇಲ್​ 2, ಫ್ಯಾಮಿಲಿ ಪ್ಯಾಕ್​​, ವಿಂಡೋ ಸೀಟ್​​, ಗುರುದೇವ್​ ಹೊಯ್ಸಳ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ಚಿತ್ರಗಳ ಘೋಷಣೆಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: ಟಿ.ಎಸ್ ನಾಗಾಭರಣರ ಪತ್ನಿ ನಿರ್ದೇಶನದ ಚೊಚ್ಚಲ ಚಿತ್ರ 'ಜೀನಿಯಸ್ ಮುತ್ತ'ನಿಗೆ ಚಿನ್ನಾರಿಮುತ್ತ ಸಾಥ್ - Genius Mutta

ETV Bharat Logo

Copyright © 2025 Ushodaya Enterprises Pvt. Ltd., All Rights Reserved.