ETV Bharat / entertainment

ತಮಿಳು ಚಿತ್ರರಂಗದಲ್ಲಿ ಕೊಡುಗಿನ ಕುವರಿ ಅಕ್ಷಿತಾ ಬೋಪಯ್ಯ ಮಿಂಚು - Akshitha Bopaiah - AKSHITHA BOPAIAH

ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಮನಗೆದ್ದ ಕೊಡುಗಿನ ಹುಡುಗಿ ಅಕ್ಷಿತಾ ಬೋಪಯ್ಯ, ತಮಿಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

AKSHITHA BOPAIAH
ಅಕ್ಷಿತಾ ಬೋಪಯ್ಯ (Instagram)
author img

By ETV Bharat Karnataka Team

Published : Jun 24, 2024, 8:13 PM IST

'ಬ್ರಹ್ಮಚಾರಿ', 'ಐ ಲವ್ ಯೂ', 'ಶಿವಾರ್ಜುನ' ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡದ ಪ್ರೇಕ್ಷಕರ ಮನಗೆದ್ದ ಅಕ್ಷಿತಾ ಬೋಪಯ್ಯ, ಇದೀಗ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆರಂಭದಲ್ಲಿ ತಮಿಳು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ ತಮ್ಮ ನಟನಾ ಕೌಶಲ ಪ್ರದರ್ಶಿಸಿದ ಅಕ್ಷಿತಾ, ಸಿನಿ ಶಿಖರದ ಒಂದೊಂದೇ ಮೆಟ್ಟಿಲೇರುತ್ತಾ ಇದೀಗ ಹೆಸರಿಡದ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

ಕನ್ನಡದ 'ಸಿದ್ಲಿಂಗು 2' ನಿರ್ಮಿಸಿದ್ದ ಬ್ಯಾನರ್‌ನಲ್ಲೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ನಿರ್ಮಾಣವಾಗುತ್ತಿದೆ. "ನಾನು ಬಯಸಿದ ಪಾತ್ರವೇ ಸಿಕ್ಕಿದೆ" ಎಂದು ಅಕ್ಷಿತಾ ಹರ್ಷ ವ್ಯಕ್ತಪಡಿಸಿದರು.

Actress Akshitha Bopaiah is shining in the Tamil film industry
ಅಕ್ಷಿತಾ ಬೋಪಯ್ಯ (Instagram)

"ಈ ಸಿನಿಮಾ ಬಗೆಗಾಗಲಿ, ತಮ್ಮ ಪಾತ್ರದ ಬಗೆಗಾಗಲೀ ಹೆಚ್ಚೇನೂ ಮಾಹಿತಿ ಬಿಟ್ಟುಕೊಡದ ನಟಿ, ಒಂದೊಳ್ಳೆ ತಂಡ. ಹೊಸತೆನಿಸುವ ಕಥಾನಕದೊಂದಿಗೆ ಸಿನಿಮಾ ತಯಾರಾಗುತ್ತಿದೆ. ಕೊಡಗಿನ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆದಿದೆ" ಎಂದರು.

ತಮಿಳು ಒಂದು ಹಂತದಲ್ಲಿ ಅಕ್ಷಿತಾ ಪಾಲಿಗೆ ಗುರುತಿರದ ಭಾಷೆಯಾಗಿತ್ತು. ಆ ಭಾಷೆಯಲ್ಲೇ ಧಾರಾವಾಹಿಯೊಂದರ ನಾಯಕಿಯಾಗುವ ಅವಕಾಶ ಒದಗಿ ಬಂದಾಗ, ಪ್ರತಿಭೆಯ ಬಲದಿಂದಲೇ ಅದನ್ನು ತಮ್ಮದಾಗಿಸಿಕೊಂಡಿದ್ದರು. ತಮಿಳು ಕಿರುತೆರೆ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ಅಕ್ಷಿತಾ, ಅಲ್ಲಿಯೇ ನಟಿಯಾಗಿ ನೆಲೆಗಾಣುವ ವಿಫುಲ ಅವಕಾಶಗಳಿವೆ. ಆದರೂ ಕೂಡಾ ಕನ್ನಡ ಚಿತ್ರರಂಗವೇ ತನ್ನ ಪಾಲಿನ ಖಾಯಂ ನೆಲೆ ಅಂದುಕೊಂಡಿರುವ ಅವರು, ಈಗಾಗಲೇ ಕರ್ನಾಟಕದ ಅಳಿಯ, ಮಿಸ್ಟರ್ ಆ್ಯಂಡ್ ಮಿಸೆಸ್ ಎಂಬೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆರಡೂ ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿವೆ.

ಬಿಎಸ್ಸಿ ಪದವೀಧರೆಯಾಗಿರುವ ಇವರು ಡ್ಯಾನ್ಸರ್ ಕೂಡ ಹೌದು. ಕುಟುಂಬದಲ್ಲಿ ಸಿನಿಮಾ ಹಿನ್ನೆಲೆ ಹೊಂದಿದವರು ಇಲ್ಲದೇ ಇದ್ದರೂ ಆರಂಭದಿಂದಲೇ ನಟಿಯಾಗುವ ಕನಸು ಕಂಡುಕೊಂಡಿದ್ದಾರೆ. ಪದವಿ ಮುಗಿಯುತ್ತಲೇ ಕೆಲಸಕ್ಕೆ ಸೇರುವ ಸಂದರ್ಭ ಬಂದಾಗ ಸೀದಾ ತನ್ನ ಕನಸಿನ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆ ಹಾಕಿದ್ದಾರೆ.

ಸಾಯಿ ಕುಮಾರ್ ನಟಿಸಿದ್ದ ರಿಯಲ್ ಪೊಲೀಸ್ ಚಿತ್ರದ ಪಾತ್ರವೊಂದರಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಪಡೆದುಕೊಂಡಿದ್ದ ಅಕ್ಷಿತಾ, ನಂತರದಲ್ಲಿ ಒಂದಷ್ಟು ಚಿತ್ರಗಳಲ್ಲಿ ಸಹನಟಿಯಾಗಿ ನಟಿಸಿ, ನಾಯಕಿಯಾಗಿಯೂ ಹೊರಹೊಮ್ಮಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.