ಚಿಕ್ಕಮಗಳೂರು: '420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ. ಯಾವುದೇ ಪಕ್ಷವಾಗಲಿ ಅಲ್ಲಿ ಅವರ ಅಹಂಕಾರ ಕಾಣುತ್ತದೆ. ನಾನಿಷ್ಟು ತೆಗೆದುಕೊಳ್ತೀನಿ ಅನ್ನೋದಲ್ಲ, ಬೇಡ್ಕೊಳಿ, ಕೊಟ್ರೆ ತಗೋಳಿ. ನಾನು ತೆಗೆದುಕೊಳ್ತೀನಿ ಅನ್ನೋ ಅಹಂಕಾರ ನಿಮಗೆ ಎಲ್ಲಿಂದ ಬರುತ್ತೆ' ಎಂದು ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, 'ಆ ಮಾತಿನ ಅಹಂಕಾರ, ಅತೃಪ್ತತೆ ಜನರಿಗೆ ಕಾಣುತ್ತಿದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ. ಅದಕ್ಕೆ ಸಣ್ಣ ಪಕ್ಷಗಳನ್ನು ಒಡೆಯುವ, ಕೊಂಡುಕೊಳ್ಳುವ ಕೆಲಸಗಳು ನಡೆಯುತ್ತಿವೆ. ನೋಡಿ, ತೆಲುಗು ರಾಜ್ಯದ ಮಹಾಪ್ರಭುಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆಂಧ್ರದಲ್ಲಿ 3 ಪಕ್ಷಗಳ ಹಿಂದೆ ಅವರೇ ಇದ್ದಾರೆ.
ಆ ಮಹಾಪ್ರಭುಗಳಿಗೆ ಶೇ.1ರಷ್ಟು ಮತ ಅಷ್ಟೇ ಇರೋದು. ಅದರಲ್ಲಿ ಗೆಲ್ಲಲ್ಲ ಅನ್ನೋದು ಗೊತ್ತು. ಅದೇ ಮೂರು ಪಕ್ಷಗಳನ್ನು ಇಟ್ಕೊಂಡ್ರೆ ಗೆಲುವು ಸಾಧ್ಯ. ಅವರಿಗೆ ಏನು ಸ್ಯಾಂಕ್ಷನ್ ಮಾಡಬೇಕು ಮಾಡಿದ್ದಾರೆ. ಇಬ್ಬರು ಪ್ರಾದೇಶಿಕ ಪಕ್ಷದವರನ್ನು ಒಳ ಹಾಕಿಕೊಂಡಿದ್ದಾರೆ. ಅವನು 10, ಇವನು 12 ಅಂತಾ ತೆಗೆದುಕೊಂಡರೆ ಕೊನೆಗೆ ಇವ್ರಿಗೆ ತಾನೇ ಆ ಗೆಲುವು' ಎಂದು ಪ್ರಕಾಶ್ ರಾಜ್ ಹೇಳಿದರು.
ಇದನ್ನೂ ಓದಿ: ಶೀಘ್ರದಲ್ಲೇ 'ಪುಷ್ಪ 2' ಸಾಂಗ್ ರಿಲೀಸ್: ಅಲ್ಲು ಅರ್ಜುನ್, ರಶ್ಮಿಕಾ ಅಭಿಮಾನಿಗಳಲ್ಲಿ ಕುತೂಹಲ