ಕ್ಯಾಮರಾ ಸಹಾಯಕನಾಗಿ ಚಿತ್ರರಂಗಕ್ಕೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಂತಹಂತವಾಗಿ ಕಷ್ಟಪಟ್ಟು ಬೆಳೆದು ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರು. ಕನ್ನಡ ಚಿತ್ರರಂಗದಲ್ಲಿ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಬಾಕ್ಸ್ ಆಫೀಸ್ ಸುಲ್ತಾನನಾದರು. ಆದರೆ ಈಗ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದಾಸನಿಗೆ ವಿಚಾರಣಾಧೀನ ಕೈದಿ ಅಂತಾ 6106 ನಂಬರ್ ಕೊಡಲಾಗಿದೆ. ಸದ್ಯ ಈಗ ಈ ನಂಬರ್ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.
ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ಅಚ್ಚುಮೆಚ್ಚಿನ ನಟ ಹಾಕುವ ಬಟ್ಟೆ, ನಟನ ಹೆರ್ ಸ್ಟೈಲ್ ಫಾಲೋ ಮಾಡೋದು ಕಾಮನ್. ಆದ್ರೀಗ ದರ್ಶನ್ ಅಭಿಮಾನಿಗಳು, ಈಗ ಕೈದಿ ನಂಬರ್ಅನ್ನೇ ಟ್ರೆಂಡ್ ಮಾಡಿದ್ದರಿಂದ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲಾ ದರ್ಶನ್ ಕೈದಿ ನಂಬರ್‌ಗೆ ಡಿಮ್ಯಾಂಡ್ ಸಿಕ್ಕಾಪಟ್ಟೆ ಆಗಿದೆ. ದರ್ಶನ್ ಕೈದಿ ನಂಬರ್‌ವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಾರು, ಬೈಕ್ ಹಾಗೂ ಆಟೋಗಳ ಹಿಂದೆ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಆರೋಪಿ ಅಷ್ಟೇ ಅಪರಾಧಿ ಅಲ್ಲಾ ಎಂಬ ಟ್ಯಾಗ್ ಲೈನ್ ಕೂಡ ಹಾಕಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇದನ್ನೂ ಓದಿ: 'ನ್ಯಾಯದ ಮೇಲೆ ಭರವಸೆಯಿಡೋಣ': ಅಭಿಮಾನಿಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನವಿ - Vijayalakshmi Darshan
ಕೈದಿ ನಂಬರ್ 6106 ಟೈಟಲ್: ಅಷ್ಟೇ ಅಲ್ಲ, ದರ್ಶನ್ ಕೈದಿ ನಂಬರ್‌ನಲ್ಲಿಯೇ ಮೊಬೈಲ್ ಕವರ್ ಕೂಡ ಮಾರ್ಕೆಟ್ಗೆ ಬಂದಿದೆಯಂತೆ. ನೂರಾರು ಅಭಿಮಾನಿಗಳು ತಮ್ಮ ಬೈಕ್, ಆಟೋಗಳ ಹಿಂದೆ ಕೈದಿ ನಂಬರ್ ಸ್ಟಿಕ್ಕರ್ಗಳನ್ನ ಅಂಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೈದಿ ನಂಬರ್ 6106 ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮತ್ತೊಂದು ಕಡೆ ಕೈದಿ ನಂಬರ್ 6106 ಎಂಬ ಹೆಸರಿನಲ್ಲಿ ಕೆಲ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ. ಆದರೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಈ ಹೆಸರಿನಲ್ಲಿ ಟೈಟಲ್ ಕೊಡುವುದಕ್ಕೆ ಬರೋದಿಲ್ಲ ಅಂತಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿದ್ದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ಈ ಟೈಟಲ್ ರಿಜಿಸ್ಟರ್ ಮಾಡಿಸೋದಕ್ಕೆ ಕೆಲ ನಿರ್ಮಾಪಕರು ಬಂದಿದ್ದಾರೆ. ಆದರೆ ಈ ಹೆಸರಿನಲ್ಲಿ ಟೈಟಲ್ ಕೊಡಲು ಬರೋದಿಲ್ಲ. ಕಾರಣ ಇದು ಕಾನೂನು ಅಡಿಯಲ್ಲಿ ತನಿಖೆ ಆಗುತ್ತಿದೆ ಎಂದು ಪ್ರತಿಕಿಯೆ ನೀಡಿದ್ದಾರೆ. ಡಿ ಗ್ಯಾಂಗ್ ಮತ್ತು ಕೈದಿ ನಂಬರ್ 6016 ಟೈಟಲ್ಗಳನ್ನು ಕೂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಇದನ್ನೂ ಓದಿ: 'ದರ್ಶನ್ ನಾಚಿಕೆ ಸ್ವಭಾವದ ವ್ಯಕ್ತಿ, ವಿವಾದಗಳು ಹೊಸತೇನಲ್ಲ': ನಟಿ ಭಾವನಾ ರಾಮಣ್ಣ - Bhavana Ramanna on Darshan Case