ETV Bharat / entertainment

ಸ್ಟೈಲಿಶ್​ ಲುಕ್​ನಲ್ಲಿ ಆ್ಯಕ್ಷನ್​ ಕಿಂಗ್​: ವಿಡಾಮುಯರ್ಚಿ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹವಾ - Arjun Sarja in Vidaamuyarchi

author img

By ETV Bharat Karnataka Team

Published : Jul 29, 2024, 10:07 PM IST

ಮಂಗತ ಸಿನಿಮಾದಲ್ಲಿ ಅಜಿತ್​ ಕುಮಾರ್​ ಜೊತೆಗೆ ಅಭಿನಯಿಸಿದ್ದ ಅರ್ಜುನ್​ ಸರ್ಜಾ ಅವರು ಇದೀಗ ಮತ್ತೊಮ್ಮೆ ಅಜಿತ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

Arjun Sarja First Look Poster
ಅರ್ಜುನ್​ ಸರ್ಜಾ ಫಸ್ಟ್​ ಲುಕ್​ ಪೋಸ್ಟರ್​ (ETV Bharat)

ಕಾಲಿವುಡ್ ಚಿತ್ರರಂಗದ 'ವಿಡಾಮುಯರ್ಚಿ' ತಲಾ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಅಡಿ ಬಹಳ ಅದ್ಧೂರಿಯಾಗಿ ಈ ಚಿತ್ರ ಮೂಡಿ ಬರುತ್ತಿದೆ. ಅದರಲ್ಲಿಯೂ ಅಜಿತ್ ಡೇಂಜರಸ್ ಸ್ಟಂಟ್ ವಿಡಿಯೋ ವೈರಲ್ ಆದ್ಮೇಲಂತೂ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿದೆ. ಇದೀಗ ವಿಡಾಮುಯರ್ಚಿ ಸಿನಿಮಾದಲ್ಲಿ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅರ್ಜುನ್ ಸರ್ಜಾ, 'ವಿಡಾಮುಯರ್ಚಿ' ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ವಿಡಾಮುಯರ್ಚಿ ಸಿನಿಮಾದಲ್ಲಿ ಆ್ಯಕ್ಷನ್ ಕಿಂಗ್ ಲುಕ್​ ಹೇಗಿರಲಿದೆ ಎನ್ನುವುದಕ್ಕೆ ಇದೀಗ ಫಸ್ಟ್​ ಲುಕ್ ರಿಲೀಸ್​ ಆಗಿದೆ. ಪೋಸ್ಟರ್​ನಲ್ಲಿ ಅರ್ಜುನ್​ ಸರ್ಜಾ ರಸ್ತೆಯ ಮೇಲೆ ಸ್ಟೈಲಿಶ್ ಆಗಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಅಜಿತ್ ಅವರ ನಿಗೂಢತೆ ಮತ್ತು ನಿರೀಕ್ಷೆಯ ಭಾವವಿರುವ ಇಮೇಜ್​ ಇದೆ. 'ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ' ಎಂಬ ಕುತೂಹಲ ಕೆರಳಿಸುವ ಅಡಿಬರಹವು ಚಿತ್ರದ ಸುತ್ತಲಿನ ಕುತೂಹಲವನ್ನು ಹೆಚ್ಚಿಸಿದೆ.

ಅಜಿತ್ ಅವರ ವೃತ್ತಿಜೀವನದಲ್ಲಿ, ಬ್ಲಾಕ್​ಬಸ್ಟರ್ ಚಲನಚಿತ್ರಗಳಲ್ಲಿ ಒಂದಾದ 'ಮಂಗತ' ಸಿನಿಮಾದಲ್ಲಿ ಅಜಿತ್ ಕುಮಾರ್, ತ್ರಿಶಾ ಮತ್ತು ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಈಗ ಮತ್ತೊಮ್ಮೆ ಈ ಮೂರೂ ಕಲಾವಿದರು ಪ್ರೇಕ್ಷಕರ ಕಾಂಬಿನೇಷನ್​ನಲ್ಲಿ ವಿಡಾಮುಯರ್ಚಿ ಬರ್ತಿದೆ. ಅಲ್ಲದೆ, ಆರವ್, ರೆಜಿನಾ ಕಸ್ಸಂದ್ರ, ನಿಖಿಲ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಾಗಿಲ್ ತಿರುಮೇನಿ ನಿರ್ದೇಶನದ ಈ ಚಿತ್ರಕ್ಕೆ ಕಾಲಿವುಡ್ ಮ್ಯೂಸಿಕಲ್ ರಾಕ್ ಸ್ಟಾರ್ ಅನಿರುದ್ಧ್ ಈಗಾಗಲೇ ಚಾರ್ಟ್ ಬಸ್ಟರ್ ಆಲ್ಬಂ ಅನ್ನು ಸಿದ್ಧಪಡಿಸುತ್ತಿದ್ದಾರೆ. ಓಂ ಪ್ರಕಾಶ್ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಎನ್.ಬಿ.ಶ್ರೀಕಾಂತ್ ಸಂಕಲನಕಾರರಾಗಿ ಮತ್ತು ಮಿಲನ್ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸುಂದರ್ ಸಾಹಸ ಸಂಯೋಜನೆ ಮಾಡಿದ್ದರೆ, ಅನು ವರ್ಧನ್ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಸುಬ್ರಮಣಿಯನ್ ನಾರಾಯಣನ್ ಕಾರ್ಯಕಾರಿ ನಿರ್ಮಾಪಕರಾಗಿ, ಜೆ.ಗಿರಿನಾಥನ್ ಮತ್ತು ಕೆ.ಜಯಶೀಲನ್ ನಿರ್ಮಾಣ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ.

ಅಜಿತ್ ಕುಮಾರ್ ಅಭಿನಯದ ವಿಡಾಮುಯರ್ಚಿ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಸನ್ ಟಿವಿ ಪಡೆದುಕೊಂಡಿದ್ದರೆ, OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಈ ಚಿತ್ರವನ್ನು ಅಕ್ಟೋಬರ್ 31 ರಂದು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 'ದಿ ರಾಜಾಸಾಬ್'; ಡಾರ್ಲಿಂಗ್ ಡ್ಯಾಶಿಂಗ್‌ ಲುಕ್​ಗೆ ಅಭಿಮಾನಿಗಳು ಫಿದಾ - The Raja Saab Movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.