ETV Bharat / education-and-career

ಮಂಗಳೂರು: ರಬ್ಬರ್ ಮಂಡಳಿಯಲ್ಲಿ ಪದವಿ ಆದವರಿಗೆ ಉದ್ಯೋಗಾವಕಾಶ

ಈಶಾನ್ಯ ರಾಜ್ಯದಲ್ಲಿ ಒಟ್ಟು 40 ಹುದ್ದೆ ಹಾಗೂ ಅಸಾಂಪ್ರದಾಯಿಕ ಪ್ರದೇಶದಲ್ಲಿ ಒಟ್ಟು 10 ಹುದ್ದೆ ಭರ್ತಿ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.

young-progessionals-in-extension-services-recruitment-in-rubber-board
ಉದ್ಯೋಗ ಮಾಹಿತಿ (ಈಟಿವಿ ಭಾರತ್​)
author img

By ETV Bharat Karnataka Team

Published : Nov 4, 2024, 3:56 PM IST

ಮಂಗಳೂರು: ರಬ್ಬರ್ ಮಂಡಳಿ ರಬ್ಬರ್ ಉತ್ಪಾದನಾ ಇಲಾಖೆಯಲ್ಲಿ ಯಂಗ್​ ಪ್ರೊಫೆಷನಲ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಬ್ಬರ್ ಉತ್ಪಾದನಾ ಇಲಾಖೆಯಲ್ಲಿನ ವಿಸ್ತರಣಾ ಸೇವೆಗಳಿಗೆ ಈ ನೇಮಕಾತಿ ನಡೆಯಲಿದ್ದು, ಒಟ್ಟು 50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ವಿವರ: ಈಶಾನ್ಯ ರಾಜ್ಯದಲ್ಲಿ ಒಟ್ಟು 40 ಹುದ್ದೆ ಹಾಗೂ ಅಸಾಂಪ್ರದಾಯಿಕ ಪ್ರದೇಶದಲ್ಲಿ ಒಟ್ಟು 10 ಹುದ್ದೆ ಭರ್ತಿ ಮಾಡಲಾಗುವುದು.

ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ/ತೋಟಗಾರಿಕೆ/ಅರಣ್ಯಶಾಸ್ತ್ರದಲ್ಲಿ ಬಿ ಎಸ್ಸಿ ಪದವಿ ಅಥವಾ ಸಸ್ಯಶಾಸ್ತ್ರ / ಸಸ್ಯ ವಿಜ್ಞಾನದಲ್ಲಿ ಎಂಎಸ್​ಸಿ ಪದವಿಯನ್ನು ಹೊಂದಿರಬೇಕು. ಈಶಾನ್ಯ ಪ್ರದೇಶದ ಅಭ್ಯರ್ಥಿಗಳು ಮಾತ್ರ ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವೇತನ: ಈ ನೇಮಕಾತಿಯ ಸ್ವರೂಪ ತಾತ್ಕಾಲಿಕವಾಗಿದ್ದು, ತಿಂಗಳಿಗೆ ರೂ. 40,000 ವೇತನವಾಗಿರುತ್ತದೆ.

ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮಬಂಗಾಳ ರಾಜ್ಯಗಳ ಅಭ್ಯರ್ಥಿಗಳಿಗೆ ಸಾಂಪ್ರದಾಯಿಕವಲ್ಲದ ಪ್ರದೇಶದ ಹುದ್ದೆಗಳಿಗೆ ಆದ್ಯತೆ ನೀಡಲಾಗುವುದು. ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಅರ್ಜಿದಾರರ ಗರಿಷ್ಠ ವಯಸ್ಸಿನ ಮಿತಿ 2024 ಅಕ್ಟೋಬರ್​​ 30 ವರ್ಷ ಮೀರಿರಬಾರದು.

ಹುದ್ದೆ ಅವಧಿ: ಈ ಹುದ್ದೆಯ ಅವಧಿಯು 2026 ಮಾರ್ಚ್ 31ರ ವರೆಗೆ ಇರಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಂಪ್ರದಾಯಿಕವಲ್ಲದ ಪ್ರದೇಶ ಉತ್ಪಾದನಾ ಇಲಾಖೆಯ ವಿಸ್ತರಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿಯೋಜಿಸಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ರಬ್ಬರ್ ಬೋರ್ಡ್ ವೆಬ್ಸೈಟ್ www.rubberboard.org.in ನಲ್ಲಿ ಆನ್ಲೈನ್ ನೇಮಕಾತಿ ಅರ್ಜಿ ಲಿಂಕ್ ಅನ್ನು ಬಳಸಿಕೊಂಡು ಆನ್ಲೈನ್ನಲ್ಲಿ ಅರ್ಜಿ ನಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 13 ಕೊನೆಯ ದಿನ.

ಈ ಹುದ್ದೆಗಳಿಗೆ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕ ಲೋಕಾಯುಕ್ತದಲ್ಲಿದೆ ಟೈಪಿಸ್ಟ್​​ ಕಂ ಕ್ಲರ್ಕ್​ ಹುದ್ದೆ; ಪಿಯುಸಿ ಆದವರಿಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.