ETV Bharat / education-and-career

ವಿದ್ಯಾರ್ಥಿಗಳೇ, ಅಯ್ಯೊ ಓದಲು ಟೈಂ ಸಾಕಾಗುತ್ತಿಲ್ಲ ಎಂದು ಕೊರಗುವ ಬದಲು ಹೀಗೆ ಮಾಡಿ! - how to mange time - HOW TO MANGE TIME

ಅಯ್ಯೋ ನಮಗೆ ಸಮಯವೇ ಸಾಕಾಗುತ್ತಿಲ್ಲ ಎಂಬ ಮಾತುಗಳನ್ನು ಹೇಳುವ ಬದಲು ಹೇಗೆ ಈ ಸಮಯ ನಿರ್ವಹಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಅರಿಯುವುದು ಅವಶ್ಯವಾಗಿದೆ. ಸಮಯದ ನಿರ್ವಹಣೆ ಕಲಿತರೆ ಅರ್ಧ ಕೆಲಸ ಮುಗಿದಂತೆ. ಅದಕ್ಕಾಗಿ ಇಲ್ಲಿವೆ ಕೆಲ ಬೆಸ್ಟ್​ ಟಿಪ್ಸ್​.

student-must-know-how-to-mange-time-for-study-here-is-some-tips
ಸಮಯ ನಿರ್ವಹಣೆ (ಈಟಿವಿ ಭಾರತ್​)
author img

By ETV Bharat Karnataka Team

Published : Jun 24, 2024, 2:21 PM IST

ಹೈದರಾಬಾದ್​: ಪ್ರತಿಯೊಬ್ಬರಿಗೂ ಇರುವುದು 24 ಗಂಟೆ. ಈ ಸಮಯವನ್ನು ಕೆಲಸಗಳಿಗೆ ಹೇಗೆ ಬಳಕೆ ಹಾಗೂ ನಿರ್ವಹಣೆ ಮಾಡುತ್ತೇವೆ ಎಂಬುದರ ಮೇಲೆ ನಿಮ್ಮ ಟೈಂ ಮ್ಯಾನೇಜ್​​ಮೆಂಟ್​ ನಿಂತಿದೆ. ಇದರ ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆ ಅನೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ಯಶಸ್ಸಿನಲ್ಲಿ ಎಡವುತ್ತಾರೆ. ಅಯ್ಯೋ ನಮಗೆ ಸಮಯವೇ ಸಾಕಾಗುತ್ತಿಲ್ಲ ಎಂಬ ಮಾತುಗಳನ್ನು ಹೇಳುವ ಬದಲು ಹೇಗೆ ಈ ಸಮಯ ನಿರ್ವಹಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಅರಿಯುವುದು ಅವಶ್ಯವಾಗಿದೆ. ಇದರಿಂದ ಪರೀಕ್ಷೆ ಸೇರಿದಂತೆ ಮುಂದಿನ ತಯಾರಿಗೆ ಸಿದ್ಧತೆ ನಡೆಸಿ, ಯಶಸ್ವಿಯಾಗಬಹುದು. ಹಾಗಾದರೆ ಇದಕ್ಕೇನು ಮಾಡಬೇಕು ಎನ್ನುತ್ತಿದ್ದರೆ ಇಲ್ಲಿವೆ ಕೆಲವು ಪ್ರಮುಖ ಅಂಶಗಳು.

ಸರಿಯಾಗಿ ಯೋಜಿಸಿ: ಇಂದಿನ ಡಿಜಿಟಲ್​ ಜಗತ್ತಿನಲ್ಲಿ ಯೋಜನೆಯಿಲ್ಲದೇ ಮುಂದೆ ಸಾಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಅಧ್ಯಯನದ ವಿಷಯಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ಅಗತ್ಯ. ಯಾವಾಗ ಅಧ್ಯಯನ ಮಾಡಬೇಕು. ಹೇಗೆ, ಎಷ್ಟು ಹೊತ್ತು, ಯಾವುದನ್ನು ಅಧ್ಯಯನ ಮಾಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಬೇಕು. ಅದರ ಅನುಸರಣೆಗೆ ಮುಂದಾಗಬೇಕು. ಅಷ್ಟೇ ಅಲ್ಲದೆ, ಎಂತಹ ಪರಿಸ್ಥಿತಿಗಳಲ್ಲೂ ಈ ಯೋಜನೆಗಳನ್ನು ನಾಳೆಗೆ ಮುಂದೂಡಬಾರದು. ಕಾರಣ ನಾಳೆಗೆ ಏನು ಓದಬೇಕು ಎಂಬುದರ ಯೋಜನೆ ಕೂಡ ನಿಗದಿ ಮಾಡಿಕೊಂಡಿರಬೇಕು. ಇಂದಿನ ಯೋಜನೆ ತಪ್ಪಿಸುವ ಮೂಲಕ ನಾಳೆಯ ಯೋಜನೆಯನ್ನು ಹಾಳು ಮಾಡಬಾರದು ಎಂಬುದನ್ನು ಅರಿಯಬೇಕು. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಅಗತ್ಯವಾಗಿ ಕಲಿಯಬೇಕಿರುವ ಅಂಶವನ್ನು ಪೂರ್ಣಗೊಳಿಸಬೇಕು. ಈ ರೀತಿ ನಿರ್ವಹಣೆಯಿಂದ ಸಮಯದ ಕೊರತೆ, ವ್ಯರ್ಥದ ಪ್ರಶ್ನೆ ಉದ್ಬವಿಸುವುದಿಲ್ಲ.

ಪ್ರತಿ ನಿಮಿಷವೂ ಅಮೂಲ್ಯ: ಸಮಯ ಎಂಬುದು ಬಹಳ ಅಮೂಲ್ಯವಾಗಿದ್ದು, ಅನಗತ್ಯವಾಗಿ ವ್ಯಯ ಮಾಡಿದರೆ ನಮಗೆ ನಷ್ಟ. ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಸಮಯ ವ್ಯರ್ಥ ಮಾಡಿದರೆ, ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬುದು ಮರೆಯಬಾರದು. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಸಮಯದಲ್ಲಿ ಪ್ರತಿ ನಿಮಿಷವೂ ಗುರಿ ಸಾಧನೆಗೆ ಸಿಕ್ಕ ಅಮೂಲ್ಯ ಕ್ಷಣ. ಇದನ್ನು ಅರ್ಥೈಸಿಕೊಂಡು ಮೊದಲ ಹೆಜ್ಜೆ ಇಡಬೇಕು. ಸಣ್ಣ ಕೆಲಸಕ್ಕೆ ಸಮಯ ವ್ಯರ್ಥವಾಗುತ್ತಿದೆ ಎಂದರೆ, ಕುಟುಂಬದ ಸಹಾಯ ಪಡೆಯಿರಿ.

ಏಕಾಗ್ರತೆ ಕಳೆದುಕೊಳ್ಳಬೇಡಿ: ಒಂದು ಸಣ್ಣ ಪಾಠವನ್ನು ಓದಲು ವಿದ್ಯಾರ್ಥಿಗಳು ಗಂಟೆಗಳ ಕಾಲ ಸಮಯ ವ್ಯರ್ಥ ಮಾಡುತ್ತಾರೆ. ಕಾರಣ, ಒಂದು ಕಡೆ ಓದುತ್ತಾ, ಮತ್ತೊಂದು ಕಡೆ ಹರಟೆ ಹೊಡೆಯುತ್ತಿರುತ್ತಾರೆ. ಮೊಬೈಲ್​, ಕಂಪ್ಯೂಟರ್​, ಟ್ಯಾಬ್​ಗಳು ಅವರ ಏಕಾಗ್ರತೆಗೆ ಭಂಗ ಉಂಟು ಮಾಡುತ್ತದೆ. ಇದು ಓದುವ ಹುಮ್ಮಸ್ಸನ್ನು ಹತ್ತಿಕ್ಕುತ್ತದೆ. ಈ ಹಿನ್ನಲೆಯಲ್ಲಿ ಓದುವಾಗ ಗಮನ ಓದಿನತ್ತ ಇರಲಿ.

ಪದೇ ಪದೇ ಸ್ಥಳ ಬದಲಾಯಿಸಬೇಡಿ: ಓದುವ ಸ್ಥಳ ಕೂಡ ಸಮಯ ನಿರ್ವಹಣೆಯಲ್ಲಿ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಗಾಳಿ ಮತ್ತು ಬೆಳಕನ್ನು ಹೊಂದಿರುವ ಸ್ಥಳವನ್ನು ಆಯ್ಕೆ ಮಾಡಿ. ಜೊತೆಗೆ ದೀರ್ಘಕಾಲ ಕುಳಿತುಕೊಳ್ಳಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಹಾಸಿಗೆ ಅಥವಾ ಸೋಫಾ ಮೇಲೆ ಕುಳಿತು ಓದುವುದರರಿಂದ ತೂಕಡಿಕೆ ಬರಬಹುದು. ಈ ಹಿನ್ನೆಲೆಯಲ್ಲಿ ಚೇರ್​, ಟೇಬಲ್​ ಆಯ್ಕೆ ಉತ್ತಮ. ಹಾಗೇ ನಿಮ್ಮ ಎದುರು ಗಡಿಯಾರವನ್ನು ಕೂಡ ಹಾಕಿಕೊಳ್ಳುವುದು ಉತ್ತಮವಾದ ಮಾರ್ಗ. ಇದರಿಂದ ಯಾವ ವಿಷಯಕ್ಕೆ ಎಷ್ಟು ಸಮಯ ನೀಡುತ್ತಿದ್ದೀರಾ ಎಂಬುದು ತಿಳಿಯಲಿದೆ. ಅಗತ್ಯ ಅಂಶಗಳನ್ನು ಮನವರಿಗೆಗೆ ಪೆನ್​, ಮಾರ್ಕರ್​ ಬಳಕೆ ಮಾಡಿ.

ಏನು ಓದಬೇಕು ಎಂದು ಮೊದಲೇ ನಿರ್ಧರಿಸಿ: ಓದುವ ಮುನ್ನ ಅವುಗಳನ್ನು ಎಷ್ಟು ದಿನ, ವಾರ, ತಿಂಗಳಿನಲ್ಲಿ ಮುಗಿಸಬೇಕು ಎಂದು ನಿರ್ಧರಿಸಿ. ಇದನ್ನು ಒಂದು ದಿನದ ಮುಂಚೆ ಯೋಚಿಸುವುದು ಕಷ್ಟ. ಕೆಲಸವನ್ನು ವಿಭಾಗಿಸುವುದು ಕೂಡ ಮುಖ್ಯ. ಈ ಹಿನ್ನೆಲೆಯಲ್ಲಿ ಯಾವ ಸಮಯದೊಳಗೆ ಎಷ್ಟು ಓದಬೇಕು ಎಂಬುದನ್ನು ನಿರ್ಧರಿಸಿ, ಮುಗಿಸಿ.

ನಿದ್ರೆ ಸಮಯ ಬದಲಾಯಿಸಬೇಡಿ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ನಿದ್ರೆ ಅಗತ್ಯವಾಗಿದೆ. ಕೆಲವು ವಿದ್ಯಾರ್ಥಿಗಳು ಮಧ್ಯರಾತ್ರಿವರೆಗೆ ಓದಿ ಮಧ್ಯಾಹ್ನದವರೆಗೆ ಮಲಗುತ್ತಾರೆ, ಕೆಲವರು ಮುಂಜಾನೆ ಓದುತ್ತಾರೆ. ನಿಮಗೆ ಯಾವ ಸಮಯದಲ್ಲಿ ಓದು ಸೂಕ್ತ ಎಂದು ಅರಿತು ಅದಕ್ಕೆ ತಕ್ಕಂತೆ ನಿದ್ರೆ ರೂಢಿಸಿಕೊಳ್ಳಿ. ಅಲ್ಲದೇ, ಈ ಸಮಯದಲ್ಲಿ ಯಾವ ವ್ಯತ್ಯಯ ಆಗದಂತೆ ನೋಡಿಕೊಳ್ಳಿ. ಇದರಿಂದ ಓದಿಗೆ ತೊಂದರೆ ಆಗುವುದಿಲ್ಲ. ಓದಿನಂತೆ ನಿದ್ರೆ ಸಮಯಕ್ಕೂ ಗಮನ ನೀಡಿ. ಆದರೆ, ಸಮಯ ವ್ಯರ್ಥವಾಗದಂತೆ ಹೆಚ್ಚು ನಿದ್ರೆ ಬೇಡ. ಆರುಗಂಟೆಗಳ ನಿದ್ರೆಯಿಂದ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಸಿಗಲಿದೆ.

ಇದನ್ನೂ ಓದಿ: ಉದ್ಯೋಗ ಮಾರ್ಗಸೂಚಿ: ಕೆಲಸ ಹುಡುಕುವ ಅಭ್ಯರ್ಥಿಗಳು ವ್ಯಕ್ತಿಗತವಾಗಿ ರೂಢಿಸಿಕೊಳ್ಳಬೇಕಾದ ಕೌಶಲ್ಯಗಳಿವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.