ETV Bharat / education-and-career

NCC ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ವಿಶೇಷ ನೇಮಕಾತಿ: ಹುದ್ದೆ, ವಿದ್ಯಾರ್ಹತೆ, ವೇತನ ವಿವರ ಹೀಗಿದೆ - NCC Special Entry Scheme

author img

By ETV Bharat Karnataka Team

Published : Jul 13, 2024, 3:53 PM IST

ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ 57ನೇ ಕೋರ್ಸ್​ ಮೂಲಕ ಭಾರತೀಯ ಸೇನೆ ಸೇರಲು ಎಸ್​ಎಸ್​ಸಿ ಅಧಿಸೂಚನೆ ಪ್ರಕಟಿಸಿದೆ.

NCC Special Entry Scheme 57th Course in Indian Army
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಬೆಂಗಳೂರು: ಎನ್​ಸಿಸಿ (ನ್ಯಾಷನಲ್​ ಕ್ರೆಡಿಟ್​​ ಕಾರ್ಪ್​​) ಸಿ ಸರ್ಟಿಫಿಕೇಟ್​ ಪಡೆದ ಅಭ್ಯರ್ಥಿಗಳು ಇದೀಗ ದೇಶ ಸೇವೆಗೆ ಭಾರತೀಯ ಸೇನೆ ಸೇರುವ ಅವಕಾಶಬಂದಿದೆ. ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ 57ನೇ ಕೋರ್ಸ್​ ಮೂಲಕ ಭಾರತೀಯ ಸೇನೆ ಸೇರಲು ಎಸ್​ಎಸ್​ಸಿ ಅಧಿಸೂಚನೆ ಪ್ರಕಟಿಸಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ: ಎನ್​ಸಿಸಿ ವಿಶೇಷ ಪ್ರವೇಶಾತಿ ಯೋಜನೆ ಅಡಿ ಭಾರತೀಯ ಸೇನೆಯಲ್ಲಿ ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಒಟ್ಟು 76 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಪುರುಷ ಅಭ್ಯರ್ಥಿಗಳಿಗೆ 70 ಸ್ಥಾನ ಮೀಸಲಿರಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ 6 ಸ್ಥಾನ ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು. ಈ ಅಭ್ಯರ್ಥಿಗಳು ಎನ್​ಸಿಸಿಯಲ್ಲಿ ಕನಿಷ್ಠ ಎರಡು ಅಥವಾ ಮೂರು ವರ್ಷದ ಎನ್​ಸಿಸಿ ಸಿ ಪ್ರಮಾಣ ಪತ್ರ ಹೊಂದಿರಬೇಕು. ಅಂತಿಮ ಪದವಿ ಹಂತದ ವಿದ್ಯಾರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 19 ವರ್ಷ, ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯಿದ್ದು ಭಾರತೀಯ ಸೇನೆ ಇಲಾಖೆ ನಿಯಮದಂತೆ ನಡೆಸಲಾಗುವುದು.

NCC Special Entry Scheme 57th Course in Indian Army
ಅಧಿಸೂಚನೆ (ಎಸ್​ಎಸ್​ಸಿ, ಭಾರತೀಯ ಸೇನೆ)

ವೇತನ: ಈ ಹುದ್ದೆಗಳಿಗೆ ತರಬೇತಿ ವೇಳೆ ಮಾಸಿಕ 56,100 ರೂ. ಸ್ಟೈಫಂಡ್​ ನೀಡಲಾಗುವುದು. ಚೆನ್ನೈನ ಆಫೀಸರ್​ ಟ್ರೈನಿಂಗ್​ ಅಕಾಡೆಮಿಯಲ್ಲಿ 49 ವಾರಗಳ ಕಾಲ ಈ ತರಬೇತಿ ನಡೆಯಲಿದೆ. ತರಬೇತಿ ಬಳಿಕ ಭಾರತೀಯ ಸೇನೆಯ ವಿವಿಧ ಹುದ್ದೆಗಳ ಸ್ತರಗಳಿಗೆ ಅನುಗುವಾಗಿ 56,100ರೂ. ನಿಂದ 2,50,000 ರೂ.ವರೆಗೆ ವೇತನ ನಿಗದಿ ಮಾಡಲಾಗಿದೆ.

ಈ ಹುದ್ದೆಗಳನ್ನು ಶಾರ್ಟ್​ ಸರ್ವೀಸ್​ ಕಮಿಷನ್​ ಅಡಿ 14 ವರ್ಷಗಳ ಅವಧಿಗೆ ನೇಮಕಾತಿ ನಡೆಸಲಾಗುವುದು. ಹುದ್ದೆಯ ಆರಂಭಿಕ ಅವಧಿ 10 ವರ್ಷ ಆಗಿದ್ದು, ಇದಾದ ಬಳಿಕ 4 ವರ್ಷ ವಿಸ್ತರಣೆ ನಡೆಸಲಾಗುವುದು. ಮೊದಲ ಆರು ತಿಂಗಳ ಸಮಯ ಪ್ರೊಬೆಷನರಿ ಆಗಿರಲಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಮೆಡಿಕಲ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಆರಂಭ ಜುಲೈ 11ರಿಂದ ಆಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 9 ಆಗಿದೆ.

ಈ ಹದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಈ https://www.joinindianarmy.nic.in/ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಆಫೀಸರ್​ ಎಂಟ್ರಿ ಅಪ್ಲಿಕೇಷನ್​/ಲಾಗಿನ್​ಗೆ ಭೇಟಿ ನೀಡಿ, ರಿಜಿಸ್ಟ್ರೇಷನ್​ ನಡೆಸಿ. ಬಳಿಕ ಅರ್ಜಿಯಲ್ಲಿ ಸರಿಯಾದ ದಾಖಲೆ, ವಿವರಗಳನ್ನು ನೀಡಿ ಭರ್ತಿ ಮಾಡಿ. ಅರ್ಜಿ ಸಲ್ಲಿಕೆಗೆ ಆಧಾರ್​ ಅಥವಾ 10ನೇ ತರಗತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ಇದನ್ನೂ ಓದಿ: SSLC ಆಗಿದ್ರೆ ಅರ್ಜಿ ಸಲ್ಲಿಕೆ: ರಾಮನಗರದ ಕಾನೂನು ಸೇವಾ ಪ್ರಾಧಿಕಾರದಲ್ಲಿದೆ ಉದ್ಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.