ETV Bharat / education-and-career

ITI ಅಭ್ಯರ್ಥಿಗಳಿಗೆ ಅವಕಾಶ: ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಯಲ್ಲಿದೆ ಉದ್ಯೋಗ - ITI Apprenticeship Recruitment - ITI APPRENTICESHIP RECRUITMENT

ಚೆನ್ನೈನ ಇಂಟಿಗ್ರಲ್​ ಕೋಚ್​ ಫ್ಯಾಕ್ಟರಿ ಮತ್ತು ಎಚ್​ಎಎಲ್​ನಲ್ಲಿ ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳಿವೆ.

ITI Apprenticeship recruitment by Integral Coach Factory Chennai  and HAL
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : May 28, 2024, 11:44 AM IST

ಬೆಂಗಳೂರು: ರೈಲು ಕೋಚ್​ಗಳ ತಯಾರಿಕಾ ಘಟಕವಾದ ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಯಲ್ಲಿ ಅಪ್ರೆಂಟಿಸ್​ಶಿಪ್​ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಪದವೀಧರರು ಅರ್ಜಿ ಸಲ್ಲಿಸಬಹುದು. ಒಟ್ಟು 1,010 ಹುದ್ದೆಗಳಿವೆ.

ಹುದ್ದೆಗಳ ವಿವರ: ಕೇಂದ್ರ ಸರ್ಕಾರದ ಅಪ್ರೆಂಟಿಸ್​ ಕಾಯ್ದೆ 1961ರ ಅಡಿ ನೇಮಕಾತಿ ನಡೆಯಲಿದೆ.

  • ಕಾರ್ಪೆಂಟರ್​​ - 90
  • ಎಲೆಕ್ಟ್ರಿಷಿಯನ್​ - 200
  • ಫಿಟ್ಟರ್​ - 260
  • ಮೆಕ್ಯಾನಿಕ್​ - 90
  • ಪೇಂಟರ್​​ - 90
  • ವೆಲ್ಡರ್​​ - 260
  • ಎಂಎಲ್​ಟಿ ರೇಡಿಯಾಲಜಿ - 5
  • ಎಂಎಲ್​ಟಿ ರೇಡಿಯಾಲಜಿ - 5
  • ಪಿಎಎಸ್​ಎಎ - 10

ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿ ಬಳಿಕ ಎರಡು ವರ್ಷದ ಐಟಿಐ ಪದವಿ.

ವಯೋಮಿತಿ: ಕನಿಷ್ಠ 15 ವರ್ಷ, 24 ವರ್ಷ ಮೀರಿರಬಾರದು. ​

ITI Apprenticeship recruitment by Integral Coach Factory Chennai  and HAL
ಅಧಿಸೂಚನೆ (ಇಂಟಿಗ್ರಲ್​ ಕೋಚ್​ ಫ್ಯಾಕ್ಟರಿ ಚೆನ್ನೈ)

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 100 ರೂ ಜೊತೆಗೆ ಸೇವಾ ಶುಲ್ಕವನ್ನು ಅಭ್ಯರ್ಥಿಗಳು ಭರಿಸಬೇಕು. ಪ.ಜಾ, ಪ.ಪಂ, ವಿಶೇಷಚೆತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ವಿಶೇಷ ಸೂಚನೆ: ಈ ಹುದ್ದೆಗಳನ್ನು 1 ವರ್ಷದ ಅವಧಿಗೆ ನೇಮಕ ಮಾಡಲಾಗುತ್ತಿದೆ. ಮಾಸಿಕ 7,000 ರೂ ಸ್ಟೈಫಂಡ್​ ನೀಡಲಾಗುತ್ತದೆ.

ಮೇ 22ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜೂನ್​ 21. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ pb.icf.gov.in ಇಲ್ಲಿಗೆ ಭೇಟಿ ನೀಡಿ.

ಎಚ್​ಎಎಲ್​ನಲ್ಲಿ ಅಪ್ರೆಂಟಿಸ್​ ಹುದ್ದೆಗಳು: ಹಿಂದೂಸ್ತಾನ್​ ಏರೋನಾಟಿಕಲ್​ ಲಿಮಿಟೆಡ್​ನಲ್ಲಿ ಅಪ್ರೆಂಟಿಸ್​​ಶಿಪ್​ ಟ್ರೈನಿಂಗ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫಿಟ್ಟರ್​​, ಟರ್ನರ್​​, ಮೆಕ್ಯಾನಿಸ್ಟ್​​, ವೆಲ್ಡರ್​, ಸಿಒಎಪಿ, ಫೌಂಡ್ರೆ-ಮ್ಯಾನ್​, ಶೀಟ್​ ಮೆಟಲ್​ ವರ್ಕ್​, ಟೂಲ್​ ಆ್ಯಂಡ್​ ಡೈ ಮೇಕರ್​, ಎಲೆಕ್ಟ್ರಿಷಿಯನ್​ ಅಡ್ವಾನ್ಸ್ಡ್​​ ಸಿಎನ್​ಸಿ ಮೆಷಿಂಗ್​ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ನೇಮಕಾತಿ ನಡೆಯಲಿದೆ.

ಐಟಿಐ ಪದವಿ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ಆಯ್ಕೆಯಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 7,000-7,700 ರೂ.ವರೆಗೆ ಗೌರವಧನ ನೀಡಲಾಗುತ್ತದೆ. ನೇರ ಸಂದರ್ಶನ ಜೂನ್​ 17ರಿಂದ ಜೂನ್​ 22ರವರೆಗೆ ಟೆಕ್ನಿಕಲ್​ ಟ್ರೈನಿಂಗ್​​ ಇನ್ಸುಟಿಟ್ಯೂಟ್​, ಸುರಂಜನ್​ ದಾಸ್​ ರಸ್ತೆ, ಬೆಂಗಳೂರು -560017 ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ hal-india.co.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: DRDO ನೇಮಕಾತಿ: 150 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - DRDO Apprentice Job

ETV Bharat Logo

Copyright © 2025 Ushodaya Enterprises Pvt. Ltd., All Rights Reserved.