ETV Bharat / education-and-career

ಶಿವಮೊಗ್ಗ: ಪಶು ಇಲಾಖೆಯಿಂದ ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ - Application for Training - APPLICATION FOR TRAINING

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ.

ಪಶು ಇಲಾಖೆ
ಪಶು ಇಲಾಖೆ (ಕೃಪೆ: ಪಶು ಇಲಾಖೆ)
author img

By ETV Bharat Karnataka Team

Published : May 27, 2024, 9:48 PM IST

ಶಿವಮೊಗ್ಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೇಂದ್ರ ಸರ್ಕಾರ ಪುರಸ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಡಿ ಸ್ಥಳೀಯ ಮೈತ್ರಿ ಕೇಂದ್ರ / ಮೈತ್ರಿ ಹಳ್ಳಿಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸ್ವಯಂ ಉದ್ಯೋಗವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಆಸಕ್ತರಿಂದ ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ 1 ತಿಂಗಳ ಕ್ಲಾಸ್ ರೂಮ್ ಬೋಧನಾ ತರಬೇತಿ ಕೇಂದ್ರದಲ್ಲಿ ಹಾಗೂ 2 ತಿಂಗಳ ಪ್ರಾಯೋಗಿಕಾ ತರಬೇತಿಯನ್ನು ಇಲಾಖೆಯ ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯಗಳಲ್ಲಿ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಮತ್ತು ನಂತರ ನಿರ್ವಹಿಸುವ ಕೆಲಸಕ್ಕೆ ಅನುಗುಣವಾಗಿ ಪ್ರೋತ್ಸಾಹ ಧನ ನೀಡಲಾಗುವುದು.

ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿಯಾಗಿದ್ದು, ಕನಿಷ್ಠ ಎಸ್​​ಎಸ್​​ಎಲ್​​ಸಿ ತೇರ್ಗಡೆ ಹೊಂದಿರಬೇಕು. ಮೈತ್ರಿ ತರಬೇತಿ ಪಡೆದ ನಂತರ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಆಸಕ್ತರಾಗಿರಬೇಕು.

ಮೈತ್ರಿ ಕೇಂದ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೃತಕ ಗರ್ಭಧಾರಣ ಕಾರ್ಯನಿರ್ವಹಿಸುವುದು. ಇದಕ್ಕೆ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಲು ಇಚ್ಛಿಸಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ಅರ್ಜಿ, ಎಸ್ಎಸ್ಎಲ್​​​ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್ ಪ್ರತಿ, 2 ಪಾಸ್ ಪೋರ್ಟ್ ಸೈಜ್ ಫೋಟೋ, ಜಾತಿ ಪ್ರಮಾಣ ಪತ್ರ, 100 ರೂ. ಇ-ಸ್ಟಾಂಪ್ ಪೇಪರ್​ನಲ್ಲಿ ಅಫಿಡವಿಟ್, ದೂರವಾಣಿ ಸಂಖ್ಯೆ, ದಾಖಲಾತಿ ವಿವರ ಸಲ್ಲಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಿವಯೋಗಿ ಬಿ. ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ/ಉಪ ನಿರ್ದೇಶಕರ ಕಛೇರಿ ಪಶುಪಾಲನಾ ಇಲಾಖೆಗಳನ್ನು ಸಂಪರ್ಕಿಸುವುದು.

ಇದನ್ನೂ ಓದಿ: '10ನೇ' ಕ್ಲಾಸ್​​ ಪಾಸ್​ ಆದವರಿಗೆ ಗುಡ್ ನ್ಯೂಸ್: ಶಿಷ್ಯವೇತನಕ್ಕೆ ಈಗಲೇ ಅರ್ಜಿ ಹಾಕಿ - Vidyadhan Scholarship Apply Process

ETV Bharat Logo

Copyright © 2025 Ushodaya Enterprises Pvt. Ltd., All Rights Reserved.