ETV Bharat / business

ವಾಲ್​​ ಸ್ಟ್ರೀಟ್​​ನಲ್ಲಿ ಮಹಾ ಕುಸಿತ: ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಏನಾಗಲಿದೆ? - ಏರಿಕೆಯೋ -ಇಳಿಕೆಯೋ? - INDIAN STOCK MARKET FORECAST - INDIAN STOCK MARKET FORECAST

Indian Stock Market Forecast : ಅಮೆರಿಕದ ಷೇರುಮಾರುಕಟ್ಟೆಗಳ ದೈತ್ಯ ವಾಲ್ ಸ್ಟ್ರೀಟ್ ಶುಕ್ರವಾರ 18 ತಿಂಗಳುಗಳಲ್ಲೇ ಅತ್ಯಂತ ದೊಡ್ಡ ಕುಸಿತವನ್ನು ಕಂಡಿದೆ. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ದರದ ಕುಸಿತ ಮತ್ತು ತಂತ್ರಜ್ಞಾನ ಷೇರುಗಳಲ್ಲಿ ಕಂಡು ಬಂದ ಹಿಂಜರಿಕೆ ಈ ಪರಿಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಸೋಮವಾರ ಭಾರತೀಯ ಮಾರುಕಟ್ಟೆ ಮೇಲೆ ಅತಿದೊಡ್ಡ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯ ಆರ್ಥಿಕತೆ ಸದೃಢವಾಗಿದೆ ಎಂಬ ವಿಚಾರವೂ ಅತಿದೊಡ್ಡ ಕುಸಿತವನ್ನ ತಡೆಯುವುದಾ ಎಂಬುದನ್ನು ಸೋಮವಾರ ನೋಡಬೇಕಿದೆ.

wall-street-ended-with-heavy-losses-will-this-affect-indian-stock-markets
ವಾಲ್​​ ಸ್ಟ್ರೀಟ್​​ನಲ್ಲಿ ಮಹಾ ಕುಸಿತ: ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಏನಾಗಲಿದೆ? (Getty Images)
author img

By ETV Bharat Karnataka Team

Published : Sep 7, 2024, 7:46 PM IST

What happened in share market: ಶುಕ್ರವಾರ ಅಮೆರಿಕದ ಮಾರುಕಟ್ಟೆಗಳಲ್ಲಿ ಕಳೆದ 18 ತಿಂಗಳಲ್ಲೇ ಅತ್ಯಂತ ದೊಡ್ಡದಾದ ಕುಸಿತ ಕಂಡು ಬಂದಿದೆ. ಈ ಮೂಲಕ ಹೂಡಿಕೆದಾರರು ಲಕ್ಷ ಲಕ್ಷ ಕೋಟಿಗಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ನಾಸ್ಡಾಕ್ ಕಾಂಪೋಸಿಟ್ ಶೇ 2.6ರಷ್ಟು ನಷ್ಟ ಅನುಭವಿಸಿದೆ. S&P 500 ಸುಮಾರು 1.7 ಶೇಕಡಾರಷ್ಟು ಕೆಳಕ್ಕೆ ಇಳಿದಿದೆ. ಡೌ ಜೋನ್ಸ್ 410 ಅಂಕಗಳನ್ನು (1 ಶೇಕಡಾ) ಕಳೆದುಕೊಂಡಿದೆ. ಬ್ರಾಡ್‌ಕಾಮ್ ಮತ್ತು ಎನ್‌ವಿಡಿಯಾದಂತಹ ತಂತ್ರಜ್ಞಾನ ಷೇರುಗಳಲ್ಲಿ ಭಾರಿ ಕುಸಿತ ಮತ್ತು ಅಮೆರಿಕದ ಉದ್ಯೋಗ ಸೃಷ್ಟಿ ದರವು ತೀವ್ರವಾಗಿ ಕೆಳಕ್ಕೆ ಇಳಿದಿರುವುದು ಈ ಮಹಾ ನಷ್ಟಕ್ಕೆ ಕಾರಣ ಎಂದು ವರದಿಯೊಂದು ಹೇಳಿದೆ.

ಅಮೆರಿಕದಲ್ಲಿ ಉತ್ಪಾದನಾ ವಲಯ ಸದ್ಯ ದುರ್ಬಲವಾಗಿದೆ. ಮತ್ತೊಂದೆಡೆ ಹಣದುಬ್ಬರ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಏರುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಅವರು ಪ್ರಸ್ತುತ ಯುಎಸ್​ ಉದ್ಯೋಗ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಆರ್ಥಿಕ ಹಿಂಜರಿತವನ್ನು ತಡೆಗಟ್ಟುವತ್ತ ತಮ್ಮ ಗಮನವನ್ನು ಹರಿಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಫೆಡರಲ್ ರಿಸರ್ವ್ ಸಭೆಯಲ್ಲಿ ಪ್ರಮುಖವಾಗಿ ಬಡ್ಡಿದರಗಳು ಎಷ್ಟರಮಟ್ಟಿಗೆ ಇಳಿಕೆಯಾಗಲಿವೆ ಎಂಬುದರ ಮೇಲೆ ಮಾರುಕಟ್ಟೆಯ ಭವಿಷ್ಯವೂ ನಿಂತಿದೆ.

ಪ್ರಮುಖವಾಗಿ ಬಡ್ಡಿದರಗಳನ್ನು ಕಡಿಮೆ ಮಾಡಿದರೆ, ಹೂಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಫೆಡ್​ ಈಗಾಗಲೇ ಈ ವಿಚಾರದಲ್ಲಿ ಸಾಕಷ್ಟು ವಿಳಂಬ ಮಾಡಿದೆ ಎಂಬ ವಾದಗಳು ಕೇಳಿ ಬರುತ್ತಿವೆ. ಅಮೆರಿಕ ಆರ್ಥಿಕ ಹಿಂಜರಿತದಿಂದ ಬಳಲುತ್ತಿದ್ದರೆ, ಕಾರ್ಪೊರೇಟ್ ಲಾಭಗಳು ಖಂಡಿತವಾಗಿಯೂ ಕಡಿಮೆಯಾಗುತ್ತವೆ. ಆಗ ಪ್ರಮುಖ ಬಡ್ಡಿದರಗಳನ್ನು ಕಡಿತಗೊಳಿಸಿದರೂ ಪ್ರಯೋಜನವಾಗುವುದಿಲ್ಲ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿದೆ. ಆದರೆ ಈ ಫೆಡರಲ್ ರಿಸರ್ವ್ ನಿರ್ಧಾರಗಳು ಮತ್ತು ಅಮೆರಿಕ ಮಾರುಕಟ್ಟೆಗಳ ಲಾಭ ಮತ್ತು ನಷ್ಟಗಳು ಭಾರತೀಯ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಾ ಇಲ್ಲವೇ ಎಂಬುದು ಇಲ್ಲಿ ಮುಖ್ಯವಾಗಿದೆ. ಆ ಬಗ್ಗೆ ನೋಡುವುದಾದರೆ,

ಇದು ಭಾರತದ ಮೇಲೆ ಪರಿಣಾಮ ಬೀರಲಿದೆಯೇ?: ಜಾಗತಿಕ ಮಾರುಕಟ್ಟೆಗಳ ಪ್ರಭಾವ ಖಂಡಿತವಾಗಿಯೂ ಭಾರತೀಯ ಷೇರು ಮಾರುಕಟ್ಟೆಗಳ ಮೇಲೆ ಇದ್ದೇ ಇರುತ್ತದೆ. ಅದಕ್ಕಿಂತ ಮುಖ್ಯವಾಗಿ ಅಮೆರಿಕದ ಫೆಡರಲ್ ರಿಸರ್ವ್ ತೆಗೆದುಕೊಳ್ಳುವ ನಿರ್ಧಾರಗಳು ಖಂಡಿತವಾಗಿಯೂ ಭಾರತೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಫೆಡ್ ಬಡ್ಡಿದರಗಳನ್ನು ಹೆಚ್ಚಿಸಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆಯು ಭಾರತದಿಂದ ಹೊರಬರುತ್ತದೆ. ಫೆಡರಲ್ ರಿಸರ್ವ್ ಪ್ರಮುಖ ಬಡ್ಡಿದರಗಳನ್ನು ಕಡಿತಗೊಳಿಸಿದರೆ ಭಾರತಕ್ಕೆ ವಿದೇಶಿ ಹೂಡಿಕೆ ಮತ್ತಷ್ಟು ಹೆಚ್ಚಾಗಲಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 621 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್ಚೇಂಜ್ ಡೇಟಾ ವರದಿ ಹೇಳುತ್ತಿದೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 2,121 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದು ಇನ್ನಷ್ಟು ಕುಸಿತವನ್ನು ತಡೆದಿದೆ. ಈಗೀಗ ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಹೂಡಿಕೆದಾರರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಅಪಾಯದಲ್ಲಿ ಟೆಕ್ ಷೇರುಗಳು :ತಂತ್ರಜ್ಞಾನದ ಷೇರುಗಳ ವಿಷಯಕ್ಕೆ ಬಂದರೆ, ಪ್ರಪಂಚದ ಬಹುತೇಕ ಎಲ್ಲಾ ಟೆಕ್ ಕಂಪನಿಗಳು ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೇಲೆ ಕೇಂದ್ರೀಕರಿಸುತ್ತಿವೆ. ಕೆಲವರು ಈಗಾಗಲೇ AI ನಿಂದ ಭಾರೀ ಲಾಭವನ್ನು ಗಳಿಸಿದ್ದಾರೆ. ಅವುಗಳಲ್ಲಿ ಎನ್ವಿಡಿಯಾ ಕೂಡ ಒಂದು. ಆದರೆ ಇತ್ತೀಚೆಗೆ ಈ ಕಂಪನಿಯ ಷೇರುಗಳು ಭಾರಿ ಕುಸಿತ ಕಂಡಿವೆ. ಮತ್ತೊಂದು ಟೆಕ್ ಕಂಪನಿ ಬ್ರಾಡ್‌ಕಾಮ್ ಕೂಡ ಭಾರೀ ನಷ್ಟವನ್ನು ಅನುಭವಿಸಿದೆ. ಭಾರತೀಯ ಟೆಕ್ ಕಂಪನಿಗಳ ಮೇಲೆ ಇದರ ಪರಿಣಾಮ ಆಗುವ ಸಾಧ್ಯತೆ ಇದೆ.

ಹೆಚ್ಚಿದ ವಿದೇಶೀ ವಿನಿಮಯ ಮೀಸಲು: ಭಾರತದಲ್ಲಿ ವಿದೇಶೀ ವಿನಿಮಯ ಮೀಸಲು ಗಣನೀಯವಾಗಿ ಹೆಚ್ಚಿದೆ. ನಮ್ಮ ವಿದೇಶಿ ವಿನಿಮಯ (ಫಾರೆಕ್ಸ್) ಮೀಸಲು $2.299 ಶತಕೋಟಿ (ಸುಮಾರು ರೂ. 19,000 ಕೋಟಿ) ಜೀವಮಾನದ ಗರಿಷ್ಠ $ 683.987 ಶತಕೋಟಿ (ಸುಮಾರು ರೂ. 56.80 ಲಕ್ಷ ಕೋಟಿ) ಗೆ ಏರಿಕೆಯಾಗಿದೆ ಎಂದು RBI ಹೇಳಿದೆ. ಕಳೆದ ವಾರ ವಿದೇಶೀ ವಿನಿಮಯ ಮೀಸಲು 681.688 ಬಿ.ಡಾಲರ್‌ಗಳಷ್ಟಿತ್ತು. ಇದು ಭಾರತಕ್ಕೆ ಅತ್ಯಂತ ಧನಾತ್ಮಕ ಅಂಶವಾಗಿದೆ.

ಕಚ್ಚಾ ತೈಲದ ಮೀಸಲು: ಪ್ರಸ್ತುತ, ಭಾರತದಲ್ಲಿ ಕಚ್ಚಾ ತೈಲ ನಿಕ್ಷೇಪಗಳು 862 ಮಿಲಿಯನ್ ಡಾಲರ್‌ಗಳಿಂದ 61.859 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ದೇಶದ ವಿಶೇಷ ಡ್ರಾಯಿಂಗ್ ರೈಟ್ಸ್ (SDRs) $9 ಮಿಲಿಯನ್‌ನಿಂದ $18.468 ಶತಕೋಟಿಗೆ ಏರಿಕೆ ಕಂಡಿದೆ. ಇದು ಕೂಡ ಸಕಾರಾತ್ಮಕ ಅಂಶವಾಗಿದೆ. ಆದಾಗ್ಯೂ, ಆರ್‌ಬಿಐ ಅಂಕಿ - ಅಂಶಗಳು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ನಮ್ಮ ದೇಶದ ಮೀಸಲು 58 ಮಿಲಿಯನ್ ಡಾಲರ್‌ಗಳಿಂದ 4.622 ಬಿಲಿಯನ್ ಡಾಲರ್‌ಗಳಿಗೆ ಇಳಿದಿದೆ ಎಂದು ತೋರಿಸುತ್ತದೆ.

ಇಳಿಯುವುದೂ ಇಲ್ಲ!: ಜಾಗತಿಕ ಮಾರುಕಟ್ಟೆಗಳ ಹೊರತಾಗಿಯೂ, ಭಾರತೀಯ ಹೂಡಿಕೆದಾರರು ಬಹಳ ಆಶಾವಾದಿಗಳಾಗಿದ್ದಾರೆ. ಮುಖ್ಯವಾಗಿ ಯುವಕರು ಷೇರುಪೇಟೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳು ಆಶಾವಾದಿ, ಸ್ಥಿರ ಸರ್ಕಾರ, ಕೈಗಾರಿಕೆಗಳು, ಹೂಡಿಕೆದಾರರು ಮತ್ತು ಸ್ಟಾರ್ಟ್-ಅಪ್‌ಗಳಿಗೆ ಪ್ರೋತ್ಸಾಹ - ಇವೆಲ್ಲವೂ ಹೂಡಿಕೆದಾರರ ಭಾವನೆಯನ್ನು ಬಲಪಡಿಸಲು ಸೇರಿಸುತ್ತವೆ.

ಫಿಚ್ ರೇಟಿಂಗ್ಸ್ 2024-25 ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆ ದರವನ್ನು ಶೇಕಡಾ 7.2 ಕ್ಕೆ ಏರಿಸಿದೆ. ಅಲ್ಲದೇ, 2024ರ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.7.5ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ರಾಷ್ಟ್ರೀಯ ಅಂಕಿ - ಅಂಶ ಕಚೇರಿ (NSO) ಪ್ರಕಾರ, ಭಾರತವು ಕಳೆದ ಹಣಕಾಸು ವರ್ಷದಲ್ಲಿ (2023-24) 8.2 ಶೇಕಡಾ GDP ಬೆಳವಣಿಗೆ ದರವನ್ನು ಸಾಧಿಸಿದೆ. ಭವಿಷ್ಯದಲ್ಲಿಯೂ ಇದೇ ವೇಗ ಮುಂದುವರಿಯಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ವ್ಯಕ್ತಪಡಿಸಿದ್ದಾರೆ. ಇವೆಲ್ಲವೂ ಭಾರತದ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತವೆ. ಮತ್ತು ಈ ಎಲ್ಲಾ ಸಾಧಕ-ಬಾಧಕಗಳ ಹಿನ್ನೆಲೆಯಲ್ಲಿ, ಸೋಮವಾರ ಭಾರತೀಯ ಷೇರು ಮಾರುಕಟ್ಟೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ನಾವು ನೋಡಬೇಕು.

ಇದನ್ನು ಓದಿ: ನೀವು ಈ ಬ್ಯಾಂಕ್​ಗಳ ಖಾತೆದಾರರೇ?: ಯುಪಿಐ ಬಳಸಿ ದಿನಕ್ಕೆ ಎಷ್ಟು ಸಲ ಪಾವತಿ ಮಾಡಬಹುದು?, ಯಾವ್​ ಬ್ಯಾಂಕ್​ ಎಷ್ಟು ಮಿತಿ? - HOW MUCH UPI TRANSACTIONS IN BANKS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.