ETV Bharat / business

ಬಾಲ್ಯದ ಆಸಕ್ತಿಯೇ ವೃತ್ತಿಯಾದಾಗ; ಕಲಾ ಜಗತ್ತಿನಲ್ಲಿ ಛಾಪು ಮೂಡಿಸುತ್ತಿರುವ ಶ್ರೀಜಾ - ಬಾಲ್ಯದ ಆಸಕ್ತಿಯೇ ವೃತ್ತಿಯಾದಾಗ

ಮಕ್ಕಳ ಬಾಲ್ಯದ ಆಸಕ್ತಿಗೆ ನೀರೆರದು ಪೋಷಿಸಿದಾಗ ಅವರು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಉದಾಹರಣೆ ಶ್ರೀಜಾ. ಈ ಶ್ರೀಜಾಳ ಸಾಧನೆ ಏನು. ಇಲ್ಲಿದೆ ಫುಲ್​ ಡೀಟೇಲ್ಸ್​.

Sreejas journey in the art world
Sreejas journey in the art world
author img

By ETV Bharat Karnataka Team

Published : Feb 13, 2024, 2:07 PM IST

ಹೈದರಾಬಾದ್​: ಮುತ್ತಿನ ನಗರಿಯಲ್ಲಿ ದಿನನಿತ್ಯದ ಬ್ಯುಸಿ ಜೀವನದಲ್ಲಿ ತಮ್ಮದೇ ಕುಂಚದ ಲೋಕದಲ್ಲಿ ಕಳೆದು ಹೋದ ಅನೇಕ ಯುವ ಜನರಿದ್ದಾರೆ. ಅವರ ಕಲೆ ಕುರಿತಾದ ತುಡಿತ, ಉತ್ಸಾಹ ಮತ್ತು ಕುಟುಂಬದ ಬೆಂಬಲದ ನಡುವೆ ಕೆಲವರು ಸದ್ದಿಲ್ಲದೇ ಸಾಧನೆ ಮಾಡುತ್ತಿದ್ದಾರೆ. ಅಂತಹ ಒಬ್ಬ ಯುವ ಕಲಾವಿದೆ ಶ್ರೀಜಾ ಕನುಮರಿ. ಬಾಲ್ಯದಿಂದಲೂ ಕಲೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಶ್ರೀಜಾಳ ಕಲೆ ಇದೀಗ ಅವಳನ್ನು ಸಿಂಗಾಪೂರದ ಭಾರತೀಯ ಹೈ ಕಮಿಷನ್​ನತ್ತ ಸಾಗುವಂತೆ ಮಾಡಿದೆ.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಶ್ರೀಜಾ ಕಲೆಗೆ ಪೋಷಕರಿಂದ ಸಿಕ್ಕ ಬೆಂಬಲ ಅಪಾರ. ತಂದೆ ಸೋಮರಾಜು ಗ್ರಾಮಗಳ ವಿದ್ಯುದೀಕರಣಕ್ಕೆ ನಿರಂತವಾಗಿ ಕೆಲಸ ಮಾಡಿದರೆ, ತಾಯಿ ಗೃಹಿಣಿಯಾಗಿದ್ದಾರೆ. ಶ್ರೀಜಾ ಬಾಲ್ಯದಲ್ಲಿಯೇ ಕಲೆ ಬಗ್ಗೆ ಆಸಕ್ತಿ ಹೊಂದಲು ಆಕೆಯ ತಾಯಿಯ ಪ್ರೋತ್ಸಾಹವೇ ಹೆಚ್ಚಿದೆ. ಮಗಳ ಕಲೆ ಕುರಿತ ಆಸಕ್ತಿ ತಿಳಿದ ತಾಯಿ, ಆಕೆಯ ಆಸಕ್ತಿಗೆ ನೀರೆರದು ಪೋಷಿಸಿದರು. ಮಗಳು ಇಂಜಿನಿಯರ್​ ಅಥವಾ ವೈದ್ಯೆಯಾಗಬೇಕು ಎಂಬ ಕನಸು ಬಿಟ್ಟು ತಮ್ಮ ಆಸಕ್ತಿ ಬೆನ್ನಟ್ಟುವಂತೆ ಬೆಂಬಲಿಸಿದರು.

ತನ್ನ ಆರಂಭದ ದಿನದಲ್ಲಿ ತಾಯಿಯ ಪಾತ್ರವನ್ನು ಆಕೆಯ ಪ್ರೋತ್ಸಾಹವನ್ನು ನೆನಪಿಸಿಕೊಂಡ ಶ್ರೀಜಾ, ನನ್ನ ತಾಯಿಗೆ ಯಾವುದೇ ಹವ್ಯಾಸಗಳು ಇರಲಿಲ್ಲ. ಇದೇ ಕಾರಣಕ್ಕೆ ಆಕೆ ನಮ್ಮ ಆಸಕ್ತಿ ವಿಚಾರಕ್ಕೆ ನೀರೆರದು ಪೋಷಿಸಿದಳು. ಅಷ್ಟೇ ಅಲ್ಲದೇ, ನಮ್ಮ ಹೃದಯದ ಮಾತು ಕೇಳುವಂತೆ ತಿಳಿಸಿದಳು. ಅದರಂತೆ ನಾನು ಕೂಡ ಮುಂದುವರಿದೆ. ಟೆಸ್ಟ್​​ಬುಕ್​ನ ಮಾರ್ಜಿನ್​ಗಳ ಅವಿಷ್ಕಾರದಿಂದ ಕುಚಿಪುಡಿ ನೃತ್ಯದವರೆಗೆ ಎಲ್ಲಾ ರೀತಿಯ ಕಲೆಗಳ ಅನಾವರಣ ಮಾಡಲು ಮುಂದಾದೆ ಎನ್ನುತ್ತಾರೆ ಅವರು.

ಶ್ರೀಜಾ ಈ ಕಲಾ ಪ್ರಯಾಣವೂ ಆತ್ಮತೃಪ್ತಿಯನ್ನು ಹೊಂದುವ ಗುರಿಯನ್ನು ಹೊಂದಿದೆ. ಸಾಂಪ್ರದಾಯಿಕ ವೃತ್ತಿಯನ್ನು ಹೊಂದುವಂತಹ ಸಾಮಾಜಿಕ ಜಗತ್ತಿನ ಒತ್ತಡದ ಹೊರತಾಗಿ ಶ್ರೀಜಾ ಕಲಾ ಜಗತ್ತಿನಲ್ಲಿ ತಮ್ಮ ಆತ್ಮತೃಪ್ತಿಯನ್ನು ಪಡೆಯುತ್ತಿದ್ದು, ಸಾಧನೆಯನ್ನೂ ಮಾಡುತ್ತಿದ್ದಾರೆ.

ಸಿಂಗಾಪೂರದಲ್ಲಿ ಪದವಿಗೆ ಪಡೆಯುವ ವೇಳೆ ಶ್ರೀಜಾ ಪ್ರತಿಭೆಯನ್ನು ಭಾರತೀಯ ಹೈ ಕಮಿಷನ್​ ಗುರುತಿಸಿದೆ. ಭಾರತೀಯ ಸೊಬಗನ್ನು ಹೊಂದಿರುವ ಭಿತ್ತಿಚಿತ್ರವನ್ನು ನಿರ್ಮಿಸುವ ಕಾರ್ಯವನ್ನು ಅವರು ನಿರ್ವಹಿಸಿದರು. ಸಾಂಸ್ಕೃತಿಕತೆ ಬೇರಿನೊಂದಿಗೆ ತಮ್ಮ ಕಲಾ ಪ್ರಕಾರವನ್ನು ರಚಿಸುವ ಮೂಲಕ ಆಕೆ ಹೊಸ ಎತ್ತರಕ್ಕೆ ಏರಿದರು. 75 ಜನರ ತಂಡದ ಪ್ರಾಜೆಕ್ಟ್​​ ಮ್ಯಾನೇಜರ್​ ಪಾತ್ರವನ್ನು ನಿರ್ವಹಣೆ ಮಾಡಿ, ತಮ್ಮ ದೃಷ್ಟಿ ಮತ್ತು ನಾಯಕತ್ವದ ಮೂಲಕ ರಾಜತಾಂತ್ರಿಕತೆ ಮೂಲಕ ಅಳಿಸಲಾಗದ ಗುರುತನ್ನು ಸ್ಥಾಪಿಸಿದ್ದಾರೆ.

ತಮ್ಮ ಈ ಸಾಧನೆಯ ಸಂಪೂರ್ಣ ಪಾಲನ್ನು ಶ್ರೀಜಾ ಕುಟುಂಬ, ಸ್ನೇಹಿತರು ಮತ್ತು ಜೊತೆಗಾರರಿಗೆ ನೀಡಿದ್ದಾರೆ. ಇಂದು ನಾನು ಎಲ್ಲಿದ್ದೇನೋ ಅದಕ್ಕೆ ಅವರ ಪ್ರೋತ್ಸಾಹವೇ ಕಾರಣ. ನನ್ನ ಪ್ಯಾಷನ್​ ಬಗ್ಗೆ ಅವರಿಗೆ ಇರುವ ನಂಬಿಕೆ ಇಂದು ಇಲ್ಲಿಗೆ ಕರೆತಂದಿದೆ ಎಂದಿದ್ದಾರೆ.

ಮಗಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಅತಿ ದೊಡ್ಡ ಖುಷಿ ಎಂಬುದಾಗಿ ಶ್ರೀಜಾ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಯಾವುದೇ ಪರಿಸ್ಥಿತಿ ಇರಲಿ ನಾವು ಆಕೆಯ ಜೊತೆಗೆ ನಿಂತಿದ್ದೇವೆ ಎಂದು ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ತಮ್ಮ ಈ ಅದ್ಬುತ ಕಲೆ ಮೂಲಕ ಶ್ರೀಜಾ ಇತರರನ್ನು ಪ್ರೇರಣೆ ಮಾಡುತ್ತಿದ್ದಾರೆ. ಈ ಮೂಲಕ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವವರಿಗೆ ಸ್ಪೂರ್ತಿಯಾಗುತ್ತಿದ್ದಾರೆ.

ಇದನ್ನೂ ಓದಿ: ಕಿರುಧಾನ್ಯ ಬೆಳೆಯಲ್ಲಿ ಆವಿಷ್ಕಾರ: ವಿಲೇಜ್ ಇನ್ನೋವೇಶನ್ ಪ್ರಶಸ್ತಿಗೆ ಭಾಜನರಾದ ಯುವ ವಿಜ್ಞಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.