ETV Bharat / business

ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಹಿಂಜರಿತ: 23,500 ಅಂಕಗಳಿಂದ ಕೆಳಗಿಳಿದ ನಿಫ್ಟಿ: ಸೆನ್ಸೆಕ್ಸ್​ 241 ಪಾಯಿಂಟ್ ಕುಸಿತ​​ - STOCK MARKET

ಸೋಮವಾರದಂದು ಭಾರತೀಯ ಷೇರು ಮಾರುಕಟ್ಟೆ ಇಳಿಕೆಯೊಂದಿಗೆ ಕೊನೆಗೊಂಡಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)
author img

By ETV Bharat Karnataka Team

Published : Nov 18, 2024, 5:42 PM IST

ಮುಂಬೈ: ಐಟಿ, ಫಾರ್ಮಾ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿನ ಷೇರುಗಳ ಭಾರಿ ಮಾರಾಟದಿಂದ ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಇಳಿಕೆಯೊಂದಿಗೆ ಕೊನೆಗೊಂಡಿತು. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 241.30 ಪಾಯಿಂಟ್ ಅಥವಾ ಶೇಕಡಾ 0.31 ರಷ್ಟು ಕುಸಿದು 77,330.01 ರಲ್ಲಿ ಕೊನೆಗೊಂಡಿತು ಮತ್ತು ನಿಫ್ಟಿ 78.90 ಪಾಯಿಂಟ್ ಅಥವಾ ಶೇಕಡಾ 0.34 ರಷ್ಟು ಕುಸಿದು 23,453.80 ರಲ್ಲಿ ಕೊನೆಗೊಂಡಿತು.

ಷೇರುಪೇಟೆಯಲ್ಲಿ ಮುಂದುವರಿದ ಕುಸಿತ: ನಿಫ್ಟಿ ಬ್ಯಾಂಕ್ 184.25 ಪಾಯಿಂಟ್ ಅಥವಾ ಶೇಕಡಾ 0.37 ರಷ್ಟು ಏರಿಕೆಯಾಗಿ 50,363.80 ಕ್ಕೆ ತಲುಪಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ವಹಿವಾಟಿನ ಅಂತ್ಯದಲ್ಲಿ 1.70 ಪಾಯಿಂಟ್ ಅಥವಾ ಶೇಕಡಾ 0.00 ರಷ್ಟು ನಾಮಮಾತ್ರದ ಲಾಭದ ನಂತರ 54,044.80 ರಲ್ಲಿ ಕೊನೆಗೊಂಡಿತು.

ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು 93.80 ಪಾಯಿಂಟ್ ಅಥವಾ ಶೇಕಡಾ 0.53 ರಷ್ಟು ಕುಸಿದು 17,507.25 ರಲ್ಲಿ ಕೊನೆಗೊಂಡಿತು.

ಈ ಸ್ಟಾಕ್​ಗಳಲ್ಲಿ ಭರ್ಜರಿ ಮಾರಾಟ: ನಿಫ್ಟಿಯಲ್ಲಿ ಇಂದು ಐಟಿ, ಫಾರ್ಮಾ, ಮಾಧ್ಯಮ, ಇಂಧನ, ಇನ್ ಫ್ರಾ, ಪಿಎಸ್​ಸಿ, ಹೆಲ್ತ್ ಕೇರ್ ಮತ್ತು ಹೆಲ್ತ್ ಕೇರ್ ಕ್ಷೇತ್ರಗಳಲ್ಲಿ ಭಾರಿ ಮಾರಾಟ ಕಂಡುಬಂದಿತು. ಇನ್ನು ಆಟೋ, ಪಿಎಸ್​ಯು ಬ್ಯಾಂಕ್, ಫೈನಾನ್ಷಿಯಲ್ ಸರ್ವೀಸಸ್, ಎಫ್ಎಂಸಿಜಿ, ಮೆಟಲ್, ರಿಯಾಲ್ಟಿ ಮತ್ತು ಖಾಸಗಿ ಬ್ಯಾಂಕ್ ವಲಯಗಳಲ್ಲಿ ಖರೀದಿ ಕಂಡುಬಂದಿತು.

ಈ ಕಂಪನಿ ಷೇರುಗಳಲ್ಲಿ ನಷ್ಟ:

ಸೆನ್ಸೆಕ್ಸ್ ಪ್ಯಾಕ್​​ನಲ್ಲಿ ಟಿಸಿಎಸ್, ಇನ್ಫೋಸಿಸ್, ಎನ್​​ಟಿಪಿಸಿ, ಎಚ್​ಸಿಎಲ್ ಟೆಕ್, ಆಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ, ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ಇಂಡಸ್ಇಂಡ್ ಬ್ಯಾಂಕ್ ಮತ್ತು ರಿಲಯನ್ಸ್ ಅತಿ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ಕುಸಿತದ ನಡುವೆ ಏರಿಕೆ ಕಂಡ ಷೇರುಗಳಿವು: ಟಾಟಾ ಸ್ಟೀಲ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ನೆಸ್ಲೆ ಇಂಡಿಯಾ, ಎಂ & ಎಂ, ಎಸ್ ಬಿಐ ಮತ್ತು ಅದಾನಿ ಪೋರ್ಟ್ಸ್ ಹೆಚ್ಚು ಲಾಭ ಗಳಿಸಿದವು.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​​ನಲ್ಲಿ (ಬಿಎಸ್ಇ) ನಲ್ಲಿ 1,617 ಷೇರುಗಳು ಏರಿಕೆಯೊಂದಿಗೆ, 2,479 ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡವು. 128 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಡಿಸೆಂಬರ್ ನಲ್ಲಿ ಯುಎಸ್ ಫೆಡ್ ದರ ಕಡಿತದ ನಿರೀಕ್ಷೆ ಕಡಿಮೆಯಾದ ಕಾರಣ ಐಟಿ ಷೇರುಗಳು ಇಂದು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದವು. ಮಹಾರಾಷ್ಟ್ರದಲ್ಲಿ ಮುಂಬರುವ ರಾಜ್ಯ ಚುನಾವಣೆಗಳಿಂದಾಗಿ ಮಾರಾಟದ ಒತ್ತಡ ಸೀಮಿತವಾಗಿರಲಿದೆ ಎಂದು ಎಲ್ ಕೆಪಿ ಸೆಕ್ಯುರಿಟೀಸ್ ನ ಜತಿನ್ ತ್ರಿವೇದಿ ಹೇಳಿದರು.

ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಮೂಲಕ ಈ ವಹಿವಾಟು ನಡೆಸಿದರೆ ಐಟಿ ನೋಟಿಸ್ ಗ್ಯಾರಂಟಿ!; ಏಕೆ ಮತ್ತು ಹೇಗೆ?

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.