ETV Bharat / business

ಉತ್ತರ ಭಾರತದಲ್ಲಿ ತಗ್ಗದ ಬಿಸಿಲ ಧಗೆ; ಎಸಿಗಳಿಗೆ ಭಾರೀ ಬೇಡಿಕೆ - Boom In AC Sales - BOOM IN AC SALES

ಸಾಮಾನ್ಯವಾಗಿ, ಮೇ ತಿಂಗಳಲ್ಲಿ ಎಸಿಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಆದರೆ, ಈ ಬಾರಿ ಜೂನ್​ ಮೂರನೇ ವಾರ ಬಂದರೂ ಬೇಡಿಕೆ ತಗ್ಗಿಲ್ಲ ಎಂದರೆ ತಾಪಮಾನ ಹೇಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು.

scorching heat in North India, the demand for AC has increased tremendously
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jun 21, 2024, 4:25 PM IST

ಹೈದರಾಬಾದ್​​: ಉತ್ತರ ಭಾರತದಲ್ಲಿ ಬಿಸಿಲ ಧಗೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಏರ್ ಕಂಡಿಷನರ್‌(ಎಸಿ)ಗಳಿಗೆ ಭಾರೀ ಬೇಡಿಕೆ ಬಂದಿದೆ. ಕಂಪನಿಗಳು ಎಸಿ ಸ್ಟಾಕ್​ಗಾಗಿ ದಕ್ಷಿಣ ರಾಜ್ಯಗಳತ್ತ ಮುಖ ಮಾಡಿವೆ.

ಎಸಿಗಳ ತಯಾರಿಕೆ ಶೀಘ್ರದಲ್ಲಾಗುವ ಕೆಲಸವಲ್ಲ. ತ್ವರಿತ ತಯಾರಿಕೆಗೆ ಬೇಕಿರುವ ಬಿಡಿಭಾಗಗಳನ್ನು ವಿದೇಶದಿಂದ ವಿಮಾನಗಳ ಮೂಲಕ ಆಮದು ಮಾಡಿಕೊಳ್ಳಬೇಕು. ಇದಕ್ಕೆ ಸಾರಿಗೆ ಶುಲ್ಕವೂ ಹೆಚ್ಚಾಗುತ್ತದೆ. ಇದರೊಂದಿಗೆ ಎಸಿ ತಯಾರಿಕೆಗೆ ಬೇಕಾದ ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕು​ ಅಗತ್ಯವಿದೆ. ಈ ವರ್ಷಾರಂಭಕ್ಕೆ ಹೋಲಿಸಿದರೆ, ಒಟ್ಟಾರೆ ಎಸಿ ಬೆಲೆ ಶೇ 4 ರಿಂದ 8ರಷ್ಟು ಏರಿಕೆಯಾಗಿದೆ ಎಂದು ಎಸಿ ಕಂಪನಿಯೊಂದರ ಮ್ಯಾನೇಜರ್ ತಿಳಿಸಿದರು.

ಸಾಮಾನ್ಯವಾಗಿ, ಜನವರಿಯಿಂದ ಮೇ ತಿಂಗಳವರೆಗೆ ಎಸಿಗೆ ಬೇಡಿಕೆ ಹೆಚ್ಚು. ಈ ಹಿನ್ನೆಲೆಯಲ್ಲಿ ತಯಾರಿಕ ಕಂಪನಿಗಳು ಬಿಡಿಭಾಗ ಮತ್ತು ಕಚ್ಛಾ ವಸ್ತುಗಳನ್ನು ಅಕ್ಟೋಬರ್​ ಮತ್ತು ಡಿಸೆಂಬರ್​ನಲ್ಲಿ ತಯಾರಿಸುತ್ತವೆ. ಹಡಗಿನಲ್ಲಿ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರಿಂದ ಸಾರಿಗೆ ವೆಚ್ಚ ಕೂಡ ನಿಯಂತ್ರಣದಲ್ಲಿರುತ್ತದೆ.

ಮೇ ತಿಂಗಳಲ್ಲಿ ಎಸಿಗಳ ಬೇಡಿಕೆ ತಗ್ಗುತ್ತದೆ. ಆದರೆ, ಈ ಸಲ ಜೂನ್​ ಮೂರನೇ ವಾರ ಬಂದರೂ ಬೇಡಿಕೆ ಮಾತ್ರ ಕುಗ್ಗಿಲ್ಲ. ಬಿಸಿಲ ಬೇಗೆ ಇಳಿಕೆಯಾಗದ ಕಾರಣ ಇಷ್ಟೊಂದು ಬೇಡಿಕೆ ಬಂದಿದೆ. ದಕ್ಷಿಣ ರಾಜ್ಯಗಳಲ್ಲಿ ಜೂನ್​ ಮೊದಲ ವಾರ ಮಾನ್ಸೂನ್​ ಆರಂಭವಾಗುತ್ತದೆ. ಆದರೆ, ಪ್ರಸ್ತುತ ವರ್ಷ ಅನೇಕ ರಾಜ್ಯದಲ್ಲಿ ಸೂರ್ಯನ ಶಾಖ ಇನ್ನೂ ಹೆಚ್ಚಿರುವ ಕಾರಣ ಇಲ್ಲೂ ಕೂಡ ಎಸಿಗೆ ಬೇಡಿಕೆ ಇದೆ ಎನ್ನುತ್ತಿದ್ದಾರೆ ಮಾರಾಟಗಾರರು.

ನಮ್ಮ ದೇಶದಲ್ಲಿ ಎಸಿಗಳನ್ನು ತಯಾರಿಸಲಾಗುತ್ತಿದ್ದರೂ ಕಂಪ್ರೆಸರ್‌ಗಳು, ಮೈಕ್ರೊಪ್ರೊಸೆಸರ್‌ಗಳು ಮತ್ತು ಕ್ರಾಸ್ ಫ್ಲೋ ಫ್ಯಾನ್‌ಗಳಂತಹ ಕೆಲವು ಭಾಗಗಳನ್ನು ಚೀನಾ, ತೈವಾನ್, ಥೈಲ್ಯಾಂಡ್, ಮಲೇಷ್ಯಾ ಮತ್ತು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈಗಂತೂ ಎಸಿಗೆ ದಿಢೀರ್​ ಬೇಡಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಇವುಗಳ ದಾಸ್ತಾನು ಕಡಿಮೆ ಇದೆ. ವಿದೇಶದಿಂದ ವಿಮಾನಗಳ ಮೂಲಕ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಸಾರಿಗೆ ವೆಚ್ಚವೂ ತೀವ್ರವಾಗಿ ಏರಿಕೆಯಾಗಿದೆ.

ಈ ನಡುವೆ ಕಂಪನಿಗಳು ಎಸಿಗಳನ್ನು ಕಚೇರಿಗಳಲ್ಲಿ ಅಳವಡಿಸಬೇಕಾದ ಸಿಬ್ಬಂದಿ ಕೂಡ ಮೂರು ನಾಲ್ಕು ದಿನವಾದರೂ ಬರುತ್ತಿಲ್ಲ. ಸಿಬ್ಬಂದಿ ಕೊರತೆ ಎಸಿ ಅಳವಡಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಕಂಪನಿಗಳು ಹೇಳಿವೆ.

ಇದನ್ನೂ ಓದಿ: ಭಾರತದಲ್ಲಿ ರಾತ್ರಿ ಹೊತ್ತು ಏರುತ್ತಿದೆ ತಾಪಮಾನ: ನಿದ್ರೆ, ಆರೋಗ್ಯದ ಮೇಲೆ ಆಗ್ತಿದೆ ಗಂಭೀರ ಪರಿಣಾಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.