ETV Bharat / business

ಆನ್​ಲೈನ್​ ವಹಿವಾಟಿನಲ್ಲಿ ಈ ವಿಷಯಗಳನ್ನು ಎಂದಿಗೂ ಮರೆಯದಿರಿ! - Digital Transactions

ಗೌಪ್ಯ ಮಾಹಿತಿ ಕದಿಯುವುದು ಸೇರಿದಂತೆ ಮತ್ತಿತರೆ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಯಾವೆಲ್ಲಾ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

author img

By ETV Bharat Karnataka Team

Published : Jul 7, 2024, 1:21 PM IST

Confidential Information  Digital transactions  online transactions  security measures
ಸಾಂದರ್ಭಿಕ ಚಿತ್ರ (ETV Bharat)

ಇಂದು ಹಣಕಾಸು ವಹಿವಾಟುಗಳನ್ನು ನಡೆಸುವುದು ಡಿಜಿಟಲ್ ವೇದಿಕೆಗಳ ಮೂಲಕ ಅತ್ಯಂತ ಸುಲಭವಾಗಿದೆ. ಇದೇ ಸಂದರ್ಭದಲ್ಲಿ ಡಿಜಿಟಲ್ ಆರ್ಥಿಕತೆಯಲ್ಲಿ ಭದ್ರತೆ ಕೂಡಾ ನಿರ್ಣಾಯಕವಾಗುತ್ತಿದೆ. ಏಕೆಂದರೆ, ಸೈಬರ್ ಅಪರಾಧಿಗಳು ಮೋಸಗೊಳಿಸಲು ಹೊಂಚುಹಾಕಿ ಕುಳಿತಿರುತ್ತಾರೆ. ಗೌಪ್ಯ ಮಾಹಿತಿಯನ್ನು ಕದಿಯುವುದೂ ಸೇರಿದಂತೆ ಇತರೆ ಹಣ ವಂಚನೆಗೆ ಒಳಗಾಗುವುದನ್ನು ತಡೆಯಲು ಇಲ್ಲಿವೆ ಕೆಲವು ರಕ್ಷಣಾತ್ಮಕ ಕ್ರಮಗಳು.

  • ಕೆಲವೇ ಕ್ಷಣಗಳಲ್ಲಿ ಪಾವತಿ ಮಾಡಲು UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಬಹಳ ಜನಪ್ರಿಯ. ಡಿಜಿಟಲ್​ ವಹಿವಾಟುಗಳನ್ನು ನಿರ್ವಹಿಸಲು ಹಲವು ಅಪ್ಲಿಕೇಶನ್‌ಗಳು ಲಭ್ಯ. ಇವುಗಳನ್ನು ಆಯ್ಕೆ ಮಾಡುವಾಗ ಅಧಿಕೃತ ಆ್ಯಪ್ ಸ್ಟೋರ್‌ಗಳಿಂದಲೇ ಡೌನ್‌ಲೋಡ್ ಮಾಡಿ ಮತ್ತು ಇನ್‌​ಸ್ಟಾಲ್​ ಮಾಡಿಕೊಳ್ಳಬೇಕು. ಯಾವಾಗಲೂ ದೃಢೀಕೃತ ಅಪ್ಲಿಕೇಶನ್‌ಗಳನ್ನೇ ಬಳಸುವುದು ಉತ್ತಮ.
  • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಯಾವಾಗ ಮತ್ತು ಹೇಗೆ ಬಳಸುತ್ತೇವೆ ಎಂಬುದು ಗೊತ್ತಿರಬೇಕು. ಬ್ಯಾಂಕ್ ಅಪ್ಲಿಕೇಶನ್ ಅಥವಾ ನಿಮ್ಮ ಕಾರ್ಡ್ ಒದಗಿಸಿದ ವೆಬ್‌ಸೈಟ್‌ನಲ್ಲಿಯೇ ಬಳಕೆ ಮಾಡಬೇಕು. ಆದಷ್ಟು ಕಾರ್ಡ್​ಗಳನ್ನು ಆನ್‌ಲೈನ್‌ನಲ್ಲಿ ಬಳಸುವುದನ್ನು ಮಿತಿಗೊಳಿಸಿ. ಪಾಯಿಂಟ್ ಆಫ್ ಸೇಲ್ ಟರ್ಮಿನಲ್ಸ್ ಅಥವಾ ಟ್ಯಾಪ್ ಮಾಡಿ, ಪಾವತಿಸಿ. ಈ ಕ್ರಮವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಯಾರಾದರೂ ಅನಧಿಕೃತವಾಗಿ ಬಳಸಿದಾಗ ಅದು ರಾಜಿಯಾಗುವುದನ್ನು ತಡೆಯುತ್ತದೆ. ಅಂತಾರಾಷ್ಟ್ರೀಯ ವಹಿವಾಟುಗಳನ್ನು ತಡೆಹಿಡಿಯುವುದು ಯಾವಾಗಲೂ ಉತ್ತಮ.
  • ಕ್ರೆಡಿಟ್ ಕಾರ್ಡ್ ವಿವರಗಳು, ಪಿನ್, ಲಾಗಿನ್ ಪಾಸ್‌ವರ್ಡ್‌ಗಳಂತಹ ಗೌಪ್ಯ ಮಾಹಿತಿಯನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದನ್ನು ತಪ್ಪಿಸಿರಿ. ಉಚಿತ ವೈ-ಫೈ ಬಳಸುವುದು ಕೂಡ ಒಳ್ಳೆಯದಲ್ಲ. ಇವುಗಳನ್ನು ಬಳಸುವಾಗ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಲೇಬೇಡಿ.
  • ಪ್ರತಿ ವಹಿವಾಟಿಗೆ ಸೂಕ್ತ ಮಾಹಿತಿ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೂಲ ಮತ್ತು ಆಡ್-ಆನ್ ಕಾರ್ಡ್‌ಗಳನ್ನು ಬಳಸುವಾಗ ಸಂದೇಶಗಳನ್ನು ಇ-ಮೇಲ್ ಮತ್ತು SMS ರೂಪದಲ್ಲಿ ಸ್ವೀಕರಿಸಬೇಕು. ಅನಧಿಕೃತ ವಹಿವಾಟುಗಳಿಗಾಗಿ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು.
  • ಕಾರ್ಡ್‌ಗಳೊಂದಿಗೆ ಬಿಲ್‌ಗಳನ್ನು ಪಾವತಿಸುವಾಗ ಜಾಗರೂಕರಾಗಿರಬೇಕು. ಕಾರ್ಡ್‌ನೊಂದಿಗೆ ಬಿಲ್ ಪಾವತಿಸುವಾಗ, ನೀವೇ PIN ನಮೂದಿಸಿ. ಪಿಒಗಳಲ್ಲಿ ಏನಾದರೂ ಅನುಮಾನ ಕಂಡುಬಂದರೆ, ತಕ್ಷಣವೇ ಪರಿಶೀಲಿಸಬೇಕು.
  • ಸುರಕ್ಷಿತ ಪಾವತಿ ಗೇಟ್‌ವೇಗಳನ್ನು ಒದಗಿಸುವ ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿ ಮಾತ್ರ ಖರೀದಿಗಳನ್ನು ಮಾಡಿ. ಹೆಚ್ಚುವರಿ ಭದ್ರತೆಗಾಗಿ ನಿಮ್ಮ ಖಾತೆಗೆ ಎರಡು ಹಂತದ ವೆರಿಫೈ ಮಾಡುವ ವಿಧಾನವನ್ನು ಆಯ್ಕೆ ಮಾಡಿ.
  • ವಿಮಾ ಪಾಲಿಸಿಗಳ ಪ್ರೀಮಿಯಂ ಪಾವತಿಸಬೇಕು, ನಿಮಗೆ ಬರಬೇಕಾದ ಪಾರ್ಸೆಲ್ ನಮ್ಮ ಬಳಿಯೇ ಉಳಿದಿದೆ ಮತ್ತು ಷೇರುಗಳನ್ನು ಖರೀದಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ತಿಳಿಸುವ ಫೋನ್ ಕರೆಗಳನ್ನು ನಂಬಲೇಬೇಡಿ. ತಕ್ಷಣ ಫೋನ್ ಸ್ಥಗಿತಗೊಳಿಸಿ. ವಂಚನೆಯ ವ್ಯವಹಾರಗಳ ಸಂದರ್ಭದಲ್ಲಿ, ತಕ್ಷಣವೇ ಬ್ಯಾಂಕ್​ಗೆ ತಿಳಿಸಬೇಕು.ಸೈಬರ್ ಪೊಲೀಸರಿಗೂ ದೂರು ನೀಡಬೇಕು.

ಇದನ್ನೂ ಓದಿ: ಜುಲೈನಲ್ಲಿ ಹರಿದು ಬಂತು ₹7,900 ಕೋಟಿ: ₹1.16 ಲಕ್ಷ ಕೋಟಿ ತಲುಪಿದ ಎಫ್​ಪಿಐ ಬಂಡವಾಳ - FPI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.