ETV Bharat / business

ಪ್ರತಿ ಆರ್ಡರ್​ಗೆ 2 ರೂ. ಪ್ಲಾಟ್​ಫಾರ್ಮ್ ಫೀ ವಿಧಿಸಲಾರಂಭಿಸಿದ Zepto

author img

By ETV Bharat Karnataka Team

Published : Mar 13, 2024, 4:13 PM IST

ತ್ವರಿತ ದಿನಸಿ ಡೆಲಿವರಿ ಮಾಡುವ ಜೆಪ್ಟೊ ಇನ್ನು ಮುಂದೆ ಪ್ರತಿ ಆರ್ಡರ್​ಗೆ 2 ರೂ. ಪ್ಲಾಟ್​ ಫಾರ್ಮ್ ಶುಲ್ಕ ಪಡೆಯಲಿದೆ.

Zepto becomes first quick-commerce firm to levy platform fee of Rs 2

ನವದೆಹಲಿ: ತ್ವರಿತವಾಗಿ ದಿನಸಿ ಡೆಲಿವರಿ ಮಾಡುವ ಕ್ವಿಕ್ ಕಾಮರ್ಸ್ ಪ್ಲಾಟ್​ಫಾರ್ಮ್ ಜೆಪ್ಟೊ ಇನ್ನು ಮುಂದೆ ಪ್ರತಿ ಆರ್ಡರ್​ಗೆ 2 ರೂ. ಪ್ಲಾಟ್​ಫಾರ್ಮ್ ಫೀ ವಿಧಿಸಲು ನಿರ್ಧರಿಸಿದೆ. ಈ ಮೂಲಕ ಪ್ಲಾಟ್ ಫಾರ್ಮ್ ಫೀ ವಿಧಿಸಲಾರಂಭಿಸಿದ ದೇಶದ ಮೊದಲ ಕ್ವಿಕ್ ಕಾಮರ್ಸ್ ಪ್ಲಾಟ್​ಫಾರ್ಮ್ ಆಗಲಿದೆ ಜೆಪ್ಟೊ. ಆರಂಭದಲ್ಲಿ ಈ ಪ್ಲಾಟ್ ಫಾರ್ಮ್ ಶುಲ್ಕವನ್ನು ಆಯ್ದ ಬಳಕೆದಾರರಿಗೆ ವಿಧಿಸಲಾಗುವುದು.

ಪ್ರಸ್ತುತ ಜೆಪ್ಟೋದ ಪ್ರತಿಸ್ಪರ್ಧಿಗಳಾದ ಜೊಮಾಟೊ ಒಡೆತನದ ಬ್ಲಿಂಕಿಟ್ ಮತ್ತು ಸ್ವಿಗ್ಗಿ ಇನ್ ಸ್ಟಾಮಾರ್ಟ್ ದಿನಸಿ ಆರ್ಡರ್​ಗಳಿಗೆ ಯಾವುದೇ ಪ್ಲಾಟ್​ಫಾರ್ಮ್ ಫೀ ವಿಧಿಸುತ್ತಿಲ್ಲ. ಬದಲಿಗೆ ಇವು ತಮ್ಮ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ಗಳಲ್ಲಿ ಮಾತ್ರ ಇಂಥ ಶುಲ್ಕ ವಿಧಿಸುತ್ತಿವೆ.

"ಕಂಪನಿಯನ್ನು ಲಾಭದಾಯಕವಾಗಿಸಲು ವಿತರಣಾ ಶುಲ್ಕದ ಮೇಲೆಯೇ ಅತಿಯಾಗಿ ಅವಲಂಬಿತವಾಗಿರುವುದು ಸರಿಯಲ್ಲ ಎಂಬುದು ನಮ್ಮ ಭಾವನೆ. ನಾವು ಕೋರ್ ಆಪರೇಟಿಂಗ್ ದಕ್ಷತೆ ಮತ್ತು ವೆಚ್ಚ ಕಡಿತವನ್ನು ಲಾಭದಾಯಕ ಎಂದು ನಂಬುತ್ತೇವೆ. ಕಡಿಮೆ ವಿತರಣಾ ಶುಲ್ಕ ವಿಧಿಸುತ್ತಿದ್ದರೂ ನಾವು ಇಬಿಐಟಿಡಿಎ ಸಕಾರಾತ್ಮಕ ಮೈಲಿಗಲ್ಲನ್ನು ಸಾಧಿಸುವ ಹಾದಿಯಲ್ಲಿದ್ದೇವೆ. ಜೆಪ್ಟೋ ಪಾಸ್ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ಲಾಟ್ ಫಾರ್ಮ್ ಫೀ ಮಾತ್ರವಲ್ಲದೇ ಇನ್ನೂ ಕೆಲ ಶುಲ್ಕಗಳನ್ನು ಜೆಪ್ಟೊ ಗ್ರಾಹಕರಿಗೆ ಹೆಚ್ಚುವರಿಯಾಗಿ ವಿಧಿಸುತ್ತಿದೆ. ಕೆಲ ಸಂದರ್ಭಗಳಲ್ಲಿ ರಾತ್ರಿ 11 ಗಂಟೆಯ ನಂತರ ಮಾಡಿದ ಆರ್ಡರ್​​ಗಳಿಗೆ ಕಂಪನಿಯು 15 ರೂ.ಗಳ 'ತಡರಾತ್ರಿ ನಿರ್ವಹಣಾ ಶುಲ್ಕ' ವಿಧಿಸುತ್ತದೆ. ಏತನ್ಮಧ್ಯೆ, ಜೆಪ್ಟೊ ಹಣಕಾಸು ವರ್ಷ 2023 ರಲ್ಲಿ ಶೇಕಡಾ 1,339 ರಷ್ಟು ಆದಾಯದ ಬೆಳವಣಿಗೆಯನ್ನು (ವರ್ಷದಿಂದ ವರ್ಷಕ್ಕೆ) ಸಾಧಿಸಿದೆ. ಆದರೆ, ಅದರ ನಷ್ಟವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿದೆ.

ಎರಡು ವರ್ಷಗಳ ಹಿಂದೆ ಮುಂಬೈನಲ್ಲಿ ತನ್ನ ಮೊದಲ ಡಾರ್ಕ್ ಸ್ಟೋರ್ ಪ್ರಾರಂಭಿಸಿದ ಜೆಪ್ಟೋದ ಆದಾಯವು 14 ಪಟ್ಟು ಏರಿಕೆಯಾಗಿ 2,024 ಕೋಟಿ ರೂ.ಗೆ ತಲುಪಿದೆ (ಹಣಕಾಸು ವರ್ಷ 222 ರಲ್ಲಿ 142.36 ಕೋಟಿ ರೂ.ಗಳಿಂದ). ಆದರೆ, ನಷ್ಟವು ಮೂರು ಪಟ್ಟು ಹೆಚ್ಚಾಗಿ 1,272 ಕೋಟಿ ರೂ.ಗೆ ತಲುಪಿದೆ. ಜುಲೈ 2021 ರಲ್ಲಿ ಸ್ಥಾಪನೆಯಾದ ಜೆಪ್ಟೊ ಮುಂದಿನ 2 ರಿಂದ 3 ವರ್ಷಗಳಲ್ಲಿ ಐಪಿಒ ಮೂಲಕ ಶೇರು ಬಂಡವಾಳ ಸಂಗ್ರಹಿಸಲು ಯೋಜಿಸಿದೆ.

ಇದನ್ನೂ ಓದಿ : ನೈಸರ್ಗಿಕ ರಬ್ಬರ್ ಉತ್ಪಾದನೆ ಶೇ 2ರಷ್ಟು ಹೆಚ್ಚಳ: ಬಳಕೆ ಶೇ 5.4ರಷ್ಟು ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.