Watch.. ಸೋನಪ್ರಯಾಗದಲ್ಲಿ ಗುಡ್ಡಕುಸಿತ, ಹೆದ್ದಾರಿ ಬಂದ್: ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ - landslide in Uttarakhand - LANDSLIDE IN UTTARAKHAND
🎬 Watch Now: Feature Video
Published : Jul 27, 2024, 5:39 PM IST
ರುದ್ರಪ್ರಯಾಗ (ಉತ್ತರಾಖಂಡ): ಇಲ್ಲಿನ ಸೋನಪ್ರಯಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಲ್ಲುಮಣ್ಣನಿಂದ ಆವೃತವಾಗಿದ್ದು, ಅವಶೇಷಗಳನ್ನು ತೆಗೆದುಹಾಕಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಹೀಗಾಗಿ, ಈ ಭಾಗದ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆಯ ಪ್ರಮುಖ ನಿಲ್ದಾಣವಾದ ಸೋನಪ್ರಯಾಗ ಮತ್ತು ಗೌರಿಕುಂಡದ ನಡುವಿನ ಗುಡ್ಡ ಬಿರುಕು ಬಿಟ್ಟಿತ್ತು. ಅಪಾಯದ ಮನ್ಸೂಚನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ಶುಕ್ರವಾರ ಹಠಾತ್ ಆಗಿ ಗುಡ್ಡದ ಒಂದು ಪಾರ್ಶ್ವ ಕುಸಿದು ಮಣ್ಣು, ಕಲ್ಲು ರಸ್ತೆಯ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಸಂಚಾರ ಬಂದ್ ಮಾಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ರಾಜ್ಯದಲ್ಲಿ ಅನಾಹುತಕಾರಿ ಮಳೆಯಾಗುತ್ತಿದೆ. ಮಳೆಯ ನಂತರ ಭೂಕುಸಿತದ ಘಟನೆಗಳೂ ಹೆಚ್ಚಿವೆ. ಮಳೆ ನಿಂತ ಮೇಲೂ ಗುಡ್ಡಗಳು ಬಿರುಕು ಬಿಡುತ್ತಿವೆ. ಅಪಾಯವನ್ನು ಗ್ರಹಿಸಿದ್ದ ಸ್ಥಳೀಯ ಆಡಳಿತವು ಪ್ರಯಾಣಿಕರ ಸಂಚಾರವನ್ನು ನಿಲ್ಲಿಸಿದ್ದು ಅಪಾಯ ತಪ್ಪಿಸಲಾಗಿದೆ. ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ಬೀಡು ಬಿಡಲಾಗಿದೆ. ಹವಾಮಾನ ಸ್ಪಷ್ಟವಾದ ನಂತರವೇ ಯಾತ್ರೆ ಮರು ಆರಂಭಿಸಲು ಮನವಿ ಮಾಡಲಾಗಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಮುಳುಗುತಜ್ಞ ಈಶ್ವರ ಮಲ್ಪೆ ತಂಡದಿಂದ ಶೋಧ ಕಾರ್ಯಾಚರಣೆ - Shiruru Hill Collapse Operation