ETV Bharat / state

ಹುಬ್ಬಳ್ಳಿ - ಧಾರವಾಡ ಬಂದ್ ವಾಪಸ್​ ಪಡೆದುಕೊಳ್ಳದಿದ್ರೆ ಬಿಜೆಪಿಯಿಂದ ಪ್ರತಿಯಾಗಿ ಹೋರಾಟ - ಅರವಿಂದ ಬೆಲ್ಲದ್ ಎಚ್ಚರಿಕೆ - ARVIND BELLAD

ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು ಅವಳಿ ನಗರದ ಬಂದ್ ವಾಪಸ್ ಪಡೆಯುವಂತೆ ಕಾಂಗ್ರೆಸ್​ನವರಿಗೆ ಎಚ್ಚರಿಸಿದ್ದಾರೆ.

arvind-bellad
ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ (ETV Bharat)
author img

By ETV Bharat Karnataka Team

Published : 23 hours ago

ಹುಬ್ಬಳ್ಳಿ : ಈಗಾಗಲೇ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ನಡುವೆಯೂ ಕೆಲವರು ಈ ರೀತಿ ಬಂದ್ ಮಾಡುವ ಮೂಲಕ ಜನರಿಗೆ ಸಂಕಷ್ಟ ಎದುರಾಗುವಂತೆ ಮಾಡುತ್ತಿದ್ದಾರೆ. ಈ ಕೂಡಲೇ ಈ ಬಂದ್ ವಾಪಸ್ ಪಡೆಯಬೇಕು. ಅವಳಿನಗರ ಬಂದ್ ವಾಪಸ್ ಪಡೆಯದೇ ಹೋದಲ್ಲಿ ಅದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಬಂದ್ ಕರೆ ನೀಡಬೇಕಾಗುತ್ತದೆ. ಇದರಿಂದಾಗುವ ಸಾರ್ವಜನಿಕ ಸಮಸ್ಯೆಗೆ ಕಾಂಗ್ರೆಸ್​ನವರೇ ನೇರ ಹೊಣೆಯನ್ನ‌ ಹೊರಬೇಕಾಗುತ್ತೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹೇಳಿದರು.

ನಗರದಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ.‌ ಬಿ. ಆರ್ ಅಂಬೇಡ್ಕರ್ ಹೆಸರಿನ‌ ಮೂಲಕ‌ ದಲಿತರ ಮತ ಪಡೆಯುವ ತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಮತ ಬ್ಯಾಂಕ್ ರಾಜಕೀಯದ ಕೆಲಸ‌ವನ್ನ ಕಾಂಗ್ರೆಸ್​ನವರು ಮಾಡುತ್ತಿದ್ದಾರೆ. ಜ. 9 ರಂದು ಅವಳಿ ನಗರ ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗೆ ಕಾಂಗ್ರೆಸ್ ಸಮಸ್ಯೆ ತಂದೊಡ್ಡುತ್ತಿದೆ ಎಂದು ಆರೋಪಿಸಿದರು.

ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಮಾತನಾಡಿದರು (ETV Bharat)

ಕಳೆದ ಡಿಸೆಂಬರ್​ನಲ್ಲಿ ನಡೆದ ಸಂಸತ್​ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ್​ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳು ಜ. 9 ರಂದು ಹುಬ್ಬಳ್ಳಿ-ಧಾರವಾಡ ಬಂದ್​ಗೆ ಕರೆ ನೀಡಿವೆ. ಅಲ್ಲದೆ, ಅಮಿತ್​ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್​ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಕಾಂಗ್ರೆಸ್​ ನಾಯಕರ ಔತಣಕೂಟ ಕುರಿತು ಬೆಲ್ಲದ್​ ಟೀಕೆ : ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ನಡುವೆ ಒಳ ಜಗಳ ಆರಂಭವಾಗಿದೆ. ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಅದು ಕನಸಾಗಿಯೇ ಉಳಿದು ಹೋಗಲಿದೆ. ಸಿದ್ದರಾಮಯ್ಯನವರ ಅಧಿಕಾರದ ಅವಧಿ ಮುಗಿಯುವ ಹಂತಕ್ಕೆ ಬಂದಿದೆ. ಹೀಗಾಗಿ ಕಾಂಗ್ರೆಸ್​ನ ಒಬ್ಬೊಬ್ಬ ನಾಯಕರು ಔತಣ ಕೂಟವನ್ನ ಏರ್ಪಡಿಸುತ್ತಿದ್ದಾರೆ ಎಂದು ಬೆಲ್ಲದ್​ ಟೀಕಿಸಿದರು.

ಎಸ್‌. ಎಂ ಕೃಷ್ಣ ಅವರ ಮನೆ ಬಾಗಿಲು ಒದ್ದು ಅಧಿಕಾರ ಪಡೆದುಕೊಂಡಿದ್ದೆ ಎಂದು ಡಿಕೆಶಿ ಹೇಳಿದ್ದಾರೆ. ಅದರಂತೆ ಡಿ. ಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಮನೆ ಬಾಗಿಲು ಒದ್ದು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ ಎಂದು ಕಾಲೆಳೆದರು.

ಇದನ್ನೂ ಓದಿ : ಅಮಿತ್ ಶಾ ಹೇಳಿಕೆ ಖಂಡಿಸಿ ಜ. 9 ರಂದು ಹುಬ್ಬಳ್ಳಿ-ಧಾರವಾಡ ಬಂದ್ ; ದಲಿತ ಸಂಘಟನೆಗಳಿಂದ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.