ETV Bharat / entertainment

ಒಲಿಂಪಿಕ್ಸ್ 2024: ದೀಪಿಕಾ, ರಾಮ್​ಚರಣ್​​ ಸೇರಿದಂತೆ ಸೆಲೆಬ್ರಿಟಿಗಳಿಂದ ಬೆಂಬಲ - Celebrities Cheer on Athletes

ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ 'ಪ್ಯಾರಿಸ್ ಒಲಿಂಪಿಕ್ಸ್ 2024' ಪ್ರಾರಂಭಗೊಂಡಿದೆ. ನಟಿ ದೀಪಿಕಾ ಪಡುಕೋಣೆ, ನಟ ಅಜಯ್​ ದೇವ್​ಗನ್​ ಸೆರಿದಂತೆ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಕ್ರೀಡಾಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Celebrities Cheer on Athletes at 2024 Olympics
ಒಲಿಂಪಿಕ್ಸ್ 2024, ಸೆಲೆಬ್ರಿಟಿಗಳಿಂದ ಪ್ರೋತ್ಸಾಹ (ANI/IANS)
author img

By ETV Bharat Karnataka Team

Published : Jul 27, 2024, 5:36 PM IST

2024ರ ಬಹುನಿರೀಕ್ಷಿತ 'ಒಲಿಂಪಿಕ್ಸ್ ಕ್ರೀಡಾಕೂಟ' ನಿನ್ನೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್​​ನಲ್ಲಿ ಆರಂಭವಾಗಿದೆ. ಶುಕ್ರವಾರದಂದು ಅದ್ಧೂರಿ ಉದ್ಘಾಟನಾ ಸಮಾರಂಭ ನೆರವೇರಿತು. ಆಗಸ್ಟ್ 11ರ ವರೆಗೆ ಈ ಕ್ರೀಡಾಕೂಟ ನಡೆಯಲಿದೆ. ಭಾರತೀಯ ಚಿತ್ರರಂಗದ ಖ್ಯಾತನಾಮರು ದೇಶದ ಕ್ರೀಡಾಪಟುಗಳನ್ನು ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಬೆಂಬಲಿಸಿದ್ದಾರೆ.

ಕಳೆದ ದಿನ, ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಭಾರತೀಯ ಅಥ್ಲೀಟ್‌ಗಳಾದ ಪಿವಿ ಸಿಂಧು ಮತ್ತು ಶರತ್ ಕಮಲ್, ಸೀನ್ ನದಿಯ ಉದ್ದಕ್ಕೂ ಪರೇಡ್​​ ಅನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ವಿಡಿಯೋ ಶೇರ್ ಮಾಡಿದ ನಟಿ ಒಲಿಂಪಿಕ್ಸ್ 2024 ಎಂದು ಬರೆದುಕೊಂಡು ಭಾರತೀಯರಿಗೆ ಬೆಂಬಲ ಸೂಚಿಸಿದ್ದಾರೆ.

ದೀಪಿಕಾ ಅವರ ತಂದೆ, ಹೆಸರಾಂತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೂಡ ಭಾರತೀಯ ತಂಡದ ಭಾಗವಾಗಿದ್ದರು. ದೀಪಿಕಾ ಅವರ ಇನ್​ಸ್ಟಾ ಸ್ಟೋರಿ #ಒಲಿಂಪಿಕ್ಸ್2024 ಎಂಬ ಹ್ಯಾಶ್‌ಟ್ಯಾಗ್ ಅನ್ನು ಹೊಂದಿತ್ತು. ಜೊತೆಗೆ, ಕಬೀರ್ ಖಾನ್ ಅವರ '83' ಚಿತ್ರದ "ಲೆಹ್ರಾ ದೋ" ಹಾಡನ್ನು ಒಳಗೊಂಡಿತ್ತು.

ದೀಪಿಕಾ ನಟನೆಯ ಬಹುನಿರೀಕ್ಷಿತ ಚಿತ್ರ ಸಿಂಗಮ್​​ ಎಗೇನ್​ನ ಸಹನಟ ಅಜಯ್ ದೇವ್​​​​ಗನ್ ಕ್ರೀಡಾಪಟುಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಕ್ರೀಡಾಪಟುಗಳನ್ನು "ನಮ್ಮ ರಾಷ್ಟ್ರದ ಹೆಮ್ಮೆ" ಎಂದು ಬಣ್ಣಿಸಿದ್ದಾರೆ. ಜೊತೆಗೆ ಅವರ ಪರ್ಫಾಮೆನ್ಸ್​ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಬೆಂಬಲದ ಜೊತೆಗೆ ರಾಷ್ಟ್ರಾದ್ಯಂತದ ಬೆಂಬಲದ ಭರವಸೆ ನೀಡಿದರು.

ಬಾಲಿವುಡ್​ ನಟರ ಜೊತೆಗೆ ತೆಲುಗು ಸೂಪರ್‌ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೂಡ ತಮ್ಮ ಬೆಂಬಲ ಸೂಚಿಸಿದ್ದಾರೆ. ಚಿರಂಜೀವಿ ಕುಟುಂಬ ಪ್ಯಾರಿಸ್​​ಗೆ ತೆರಳಿದೆ. ಈವೆಂಟ್‌ನ ಕ್ಷಣಗಳನ್ನು ಜನಪ್ರಿಯ ದಂಪತಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್​​ ಆರಂಭ: ಭದ್ರತೆಗಾಗಿ ಭಾರತ ಸೇರಿ 40 ದೇಶಗಳ ಸಿಬ್ಬಂದಿ ನಿಯೋಜನೆ - Olympics opening ceremony

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿನ ಭಾರತೀಯ ಕ್ರೀಡಾಪಟುಗಳ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಬಾಲಿವುಡ್​ ನಟ ಸುನೀಲ್ ಶೆಟ್ಟಿ ಕೂಡ ತಮ್ಮ ಬೆಂಬಲ ಸಂತಸ ವ್ಯಕ್ತಪಡಿಸಿದ್ದಾರೆ. ನಟ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಹೆಮ್ಮೆ ವ್ಯಕ್ತಪಡಿಸಿದರು. "ಗೋ ಫಾರ್ ಗ್ಲೋರಿ" ಎಂದು ಪ್ರೋತ್ಸಾಹಿಸಿದರು.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ 'ದ್ವಾಪರ' ಸಾಂಗ್​​ ಟ್ರೆಂಡಿಂಗ್​​​ನಲ್ಲಿ: ಸಿನಿಮಾ ನೋಡುವ ಕಾತರ ಹೆಚ್ಚಳ - Dwapara Song

ಒಲಿಂಪಿಕ್ಸ್ 2024ರ ಗ್ರ್ಯಾಂಡ್ ಓಪನಿಂಗ್ ನಿನ್ನೆ ಅಂದರೆ ಜುಲೈ 26ರಂದು ನಡೆದಿದ್ದು, ಆಗಸ್ಟ್ 11 ರಂದು ಕ್ರೀಡೆಗಳು ಮುಕ್ತಾಯಗೊಳ್ಳಲಿದೆ. ಸೀನ್ ನದಿಯ ದಡದಲ್ಲಿ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ನೆರವೇರಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ವಿಡಿಯೋಗಳು ಸದ್ದು ಮಾಡುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.