ETV Bharat / state

16 ಮಂದಿ ಮನೆ ಭೋಗ್ಯದಾರರಿಗೆ ವಂಚನೆ ಆರೋಪ: ಮನೆ ಮಾಲೀಕರ ಬಂಧನ - House owner arrested for fraud - HOUSE OWNER ARRESTED FOR FRAUD

ವಂಚನೆಗೊಳಗಾದ ಮೊಹಮ್ಮದ್ ನಹೀಂ ಸೇರಿದಂತೆ 16 ಮಂದಿ ನೀಡಿದ ದೂರಿನ ಆಧಾರದಲ್ಲಿ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಧಾ ಎಂಬುವವನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

16 HOME BORROWERS DEFRAUDED OF MORE THAN 1 CRORE: HOUSE OWNER ARRESTED
16 ಮಂದಿ ಮನೆ ಭೋಗ್ಯದಾರರಿಗೆ 1 ಕೋಟಿಗೂ ಹೆಚ್ಚು ವಂಚನೆ: ಮನೆ ಮಾಲಕಿ ಬಂಧನ (ETV Bharat)
author img

By ETV Bharat Karnataka Team

Published : Jul 27, 2024, 6:01 PM IST

ಬೆಂಗಳೂರು: ಒಂದೇ ಕಟ್ಟಡದಲ್ಲಿ ವಾಸವಾಗಿದ್ದ 16 ಮಂದಿ ಮನೆ ಭೋಗ್ಯದಾರರಿಗೆ 1 ಕೋಟಿಗಿಂತ ಹೆಚ್ಚು ಹಣ ವಂಚಿಸಿದ ಆರೋಪದಡಿ ಮನೆ ಮಾಲೀಕಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಮೊಹಮ್ಮದ್ ನಹೀಂ ಸೇರಿದಂತೆ 16 ಮಂದಿ ನೀಡಿದ ದೂರಿನ ಮೇರೆಗೆ ಸುಧಾ (45) ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

ಸುಧಾ ಗಂಗೊಂಡನಹಳ್ಳಿಯ ಎಸ್.ಎನ್.ಲುಮಿನೋಸ್ ಅಪಾರ್ಟ್​ಮೆಂಟ್​ನ ಮಾಲೀಕರಾಗಿದ್ದರು. ಐದು ಮಹಡಿಗಳಿರುವ ಅಪಾರ್ಟ್​ಮೆಂಟ್​ನಲ್ಲಿ 16 ಮನೆಗಳನ್ನು ಭೋಗ್ಯಕ್ಕೆ ನೀಡಿದ್ದರು. ಕಳೆದ ಜುಲೈ 11ರಂದು ದಿ ಸಿಟಿ ಕೋಆಪರೇಟಿವ್ ಬ್ಯಾಂಕ್​ನನಲ್ಲಿ ಸುಧಾ ತೆಗೆದುಕೊಂಡಿದ್ದ ಸಾಲ ಪಾವತಿಸದ ಕಾರಣ ಬ್ಯಾಂಕ್ ಅಧಿಕಾರಿಗಳು ಅಪಾರ್ಟ್​ಮೆಂಟ್ ವಶಕ್ಕೆ ಪಡೆಯಲು ಬಂದಾಗ ತಾವು ವಂಚನೆಗೊಳಗಾಗಿರುವುದು ಭೋಗ್ಯದಾರರಿಗೆ ಗೊತ್ತಾಗಿದೆ. ಇದೀಗ ಭೋಗ್ಯದಾರರು ಲೀಸ್​ಗೆ ನೀಡಿದ ಹಣವೂ ಇಲ್ಲದೇ, ಇದ್ದ ಮನೆಯಲ್ಲಿಯೂ ಇರಲಾರದೇ ಅತಂತ್ರರಾಗಿದ್ದಾರೆ.

"ಮನೆ ಮಾಲೀಕರಾದ ಸುಧಾ ಕಟ್ಟಡದ ಮೇಲೆ ಹೋಮ್ ಲೋನ್ ತೆಗೆದುಕೊಂಡಿದ್ದು, ಸಕಾಲಕ್ಕೆ ಹಣವನ್ನು ಪಾವತಿಸದ ಕಾರಣ ಬ್ಯಾಂಕ್ ಅಧಿಕಾರಿಗಳು ಮನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. 17 ಮಂದಿ ಭೋಗ್ಯದಾರರಿಂದ ಹಣ ಪಡೆದಿರುವುದಲ್ಲದೇ, ಸಾಲದ ವಿಚಾರವಾಗಿ ಬ್ಯಾಂಕ್​ನಿಂದ ನೋಟಿಸ್ ಬಂದಿರುವುದನ್ನು ತಿಳಿಸದೇ ವಂಚಿಸಲಾಗಿದೆ. ವಿಚಾರ ಗೊತ್ತಾಗಿ ಹಣ ಹಿಂತಿರುಗಿಸುವಂತೆ ಕೇಳಿದರೆ ಆಶ್ಲೀಲವಾಗಿ ನಿಂದಿಸಿ, ನಮ್ಮನ್ನು ರೌಡಿಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಸಿ ನಂಬಿಕೆದ್ರೋಹವೆಸಗಿದ್ದಾರೆ" ಎಂದು ದೂರಿದ್ದಾರೆ.

16 ಮಂದಿಗೆ 1 ಕೋಟಿಗಿಂತ ಹೆಚ್ಚು ವಂಚನೆ: ಕಟ್ಟಡದ ಹೆಸರಿನಲ್ಲಿ ಬ್ಯಾಂಕ್​ನಿಂದ ಲೋನ್ ಪಡೆದಿರುವುದು ತಿಳಿಸದೇ ಉದ್ದೇಶಪೂರ್ವಕವಾಗಿ ತಮಗೆ ವಂಚಿಸಿದ್ದಾರೆ. ಕಟ್ಟಡದಲ್ಲಿರುವ 16 ಮಂದಿ ಭೋಗ್ಯದಾರರು ಪ್ರತ್ಯೇಕವಾಗಿ 1 ಕೋಟಿಗಿಂತ ಹೆಚ್ಚು ಹಣ ನೀಡಿ ಮನೆಯನ್ನು ಲೀಸ್ ಪಡೆದುಕೊಂಡಿದ್ದೆವು. ಏಕಾಏಕಿ ಬ್ಯಾಂಕ್ ಅಧಿಕಾರಿಗಳು ಕಟ್ಟಡ ಜಪ್ತಿ ಮಾಡುವುದಾಗಿ ನೋಟಿಸ್ ನೀಡಿದ್ದರು. ಈ ಬಗ್ಗೆ ಮಾಲೀಕಿ ಸುಧಾರನ್ನು ಪ್ರಶ್ನಿಸಿದರೆ ಆರಂಭದಲ್ಲಿ ಹಣ ನೀಡುವುದಾಗಿ ಹೇಳಿದ್ದರು. ನಂತರ ವಿವಿಧ ಸಬೂಬುಗಳನ್ನು ಹೇಳಿದ್ದರು. ಈ ಬಗ್ಗೆ ಒತ್ತಾಯಿಸಿದಾಗ ಬೆದರಿಕೆ ಹಾಕಿದ್ದಾರೆ" ಎಂದು ದೂರುದಾರರು ಆರೋಪಿಸಿದ್ದಾರೆ. ಸದ್ಯ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಧಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ವಿಲ್ಲಾ, ಫ್ಲ್ಯಾಟ್‌ ಹೆಸರಲ್ಲಿ ₹60 ಕೋಟಿ ವಂಚನೆ ಆರೋಪ: GSR ಇನ್ಫ್ರಾ ಎಂಡಿ ಅರೆಸ್ಟ್​ - GSR Infra MD Arrested

ETV Bharat Logo

Copyright © 2025 Ushodaya Enterprises Pvt. Ltd., All Rights Reserved.