ETV Bharat / business

ಆರ್​ಬಿಐ ಅಕ್ಟೋಬರ್​ನಲ್ಲಿ ಬಡ್ಡಿದರ ಕಡಿತ ಮಾಡಲಾರಂಭಿಸಬಹುದು: ಕ್ರಿಸಿಲ್ ವರದಿ - Crisil report

author img

By ANI

Published : Aug 11, 2024, 12:30 PM IST

ಆರ್​ಬಿಐ ಅಕ್ಟೋಬರ್​ನಿಂದ ಬಡ್ಡಿದರಗಳನ್ನು ಕಡಿತ ಮಾಡಲು ಆರಂಭಿಸಬಹುದು ಎಂದು ಕ್ರಿಸಿಲ್ ಹೇಳಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ದೇಶದಲ್ಲಿನ ಹವಾಮಾನ ಪರಿಸ್ಥಿತಿಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ಸರಕುಗಳ ಬೆಲೆಗಳಂಥ ಬಾಹ್ಯ ಅಂಶಗಳಿಂದ ಯಾವುದೇ ಅಡೆತಡೆಗಳು ಎದುರಾಗದಿದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಅಕ್ಟೋಬರ್​ನಿಂದ ಬಡ್ಡಿದರಗಳನ್ನು ಕಡಿಮೆ ಮಾಡಲು ಪ್ರಾರಂಭಿಸಬಹುದು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ.

ಈ ಹಣಕಾಸು ವರ್ಷದಲ್ಲಿ ಎರಡು ಬಾರಿ ಬಡ್ಡಿದರ ಕಡಿತವಾಗಬಹುದು ಎಂದು ಕ್ರಿಸಿಲ್ ನಿರೀಕ್ಷಿಸಿದೆ. ಆಹಾರ ಹಣದುಬ್ಬರ ಹೆಚ್ಚಾಗಿದ್ದರಿಂದ ಆರ್​ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಇತ್ತೀಚಿನ ತನ್ನ ಸಭೆಯಲ್ಲಿ ಬಡ್ಡಿದರ ಕಡಿತ ಮಾಡುವ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿರುವ ಕ್ರಿಸಿಲ್, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ಬಗ್ಗೆ ಇನ್ನೂ ಕಾಯ್ದು ನೋಡಬೇಕಾಗಿದೆ ಎಂದು ತಿಳಿಸಿದೆ. ಆದಾಗ್ಯೂ ಸ್ಥೂಲ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿ ಮುಂದುವರೆಯುವುದರಿಂದ ಬಡ್ಡಿದರ ಕಡಿತಕ್ಕೆ ಅನುಕೂಲವಾಗಲಿದೆ ಎಂದು ಅದು ನಿರೀಕ್ಷಿಸಿದೆ.

ಈ ಬಾರಿ ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದರಿಂದ (ಆಗಸ್ಟ್ 7 ರ ಹೊತ್ತಿಗೆ ದೀರ್ಘಾವಧಿಯ ಸರಾಸರಿಗಿಂತ ಶೇಕಡಾ 7 ರಷ್ಟು ಹೆಚ್ಚಾಗಿದೆ) ಪ್ರಮುಖ ಆಹಾರ ಧಾನ್ಯಗಳ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕೃಷಿ ಇಳುವರಿಯು ಕಳೆದ ವರ್ಷಕ್ಕಿಂತ ಉತ್ತಮವಾಗಿರುವ ಸಾಧ್ಯತೆಗಳು ಕಂಡು ಬಂದಿದ್ದು, ಆಹಾರ ಹಣದುಬ್ಬರ ಕಡಿಮೆಯಾಗಬಹುದು ಮತ್ತು ಇದು ಬಡ್ಡಿದರ ಕಡಿತಕ್ಕೆ ಇರುವ ಅಡೆತಡೆಗಳನ್ನು ಕಡಿಮೆ ಮಾಡಬಹುದು. ಸೆಪ್ಟೆಂಬರ್​ ವೇಳೆಗೆ ದೇಶದ ಕೃಷಿ ಇಳುವರಿಯ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದ್ದು, ಇದು ಬಡ್ಡಿದರ ಕಡಿತಕ್ಕೆ ದಾರಿ ಮಾಡಕೊಡಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ.

ಪ್ರಸ್ತುತ ನಡೆಯುತ್ತಿರುವ ಆರ್ಥಿಕ ಅನಿಶ್ಚಿತತೆಗಳ ಮಧ್ಯೆ ಎಚ್ಚರಿಕೆಯ ಕ್ರಮವಾಗಿ ಆರ್​ಬಿಐ ರೆಪೊ ದರವನ್ನು ಬದಲಾಯಿಸದೆ ಈ ಹಿಂದಿನ ಶೇಕಡಾ 6.5ರ ದರದಲ್ಲಿಯೇ ಮುಂದುವರೆಸಿದೆ. ಪ್ರಸ್ತುತ ಹಣದುಬ್ಬರವು ಆರ್​ಬಿಐನ ನಿಗದಿತ ಮಿತಿಗಿಂತ ಹೆಚ್ಚಾಗಿರುವುದು ಕೂಡ ಆರ್​ಬಿಐ ರೆಪೊ ದರವನ್ನು ಮೊದಲಿನಂತೆಯೇ ಮುಂದುವರಿಸಲು ಕಾರಣವಾಗಿದೆ. ಆಹಾರ ಹಣದುಬ್ಬರ ಮತ್ತು ಇತರ ಆರ್ಥಿಕ ಅಂಶಗಳಿಂದಾಗಿ ಹಣದುಬ್ಬರವನ್ನು ತನ್ನ ಮಿತಿಯಾದ ಶೇ 4ರ ಒಳಗೆ ಹಿಡಿದಿಡಲು ಆರ್​ಬಿಐಗೆ ಅಡ್ಡಿಯುಂಟಾಗುತ್ತಿದೆ.

ಆಗಸ್ಟ್ 8 ರಂದು ಎಂಪಿಸಿಯ ನಿರ್ಧಾರವನ್ನು ಪ್ರಕಟಿಸಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, 2024-25ರ ಹಣಕಾಸು ವರ್ಷದಲ್ಲಿ ವಾಸ್ತವಿಕ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಶೇಕಡಾ 7.2 ರಷ್ಟಾಗಲಿದೆ ಎಂದು ನಿರೀಕ್ಷಿಸಿದ್ದಾರೆ. ರೆಪೋ ದರ ಬದಲಾವಣೆಗಳು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಕಡಿಮೆ ಬಡ್ಡಿದರಗಳು ವ್ಯವಹಾರಗಳಿಗೆ ಸಾಲ ಪಡೆಯುವುದನ್ನು ಅಗ್ಗವಾಗಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಇದನ್ನೂ ಓದಿ : ಜುಲೈನಲ್ಲಿ ದೇಶೀಯ ವಿಮಾನ ಪ್ರಯಾಣ ದಟ್ಟಣೆ ಶೇ 8.6ರಷ್ಟು ಹೆಚ್ಚಳ: 1 ಕೋಟಿ 31 ಲಕ್ಷ ಪ್ರಯಾಣಿಕರ ಸಂಚಾರ - Air Passenger Traffic

ETV Bharat Logo

Copyright © 2024 Ushodaya Enterprises Pvt. Ltd., All Rights Reserved.