ಮುಂಬೈ: ಇಂದೂ ಕೂಡಾ ಷೇರುಪೇಟೆಯಲ್ಲಿ ಹಿಂಜರಿತ ಕಂಡು ಬಂದಿದೆ. ಮಾರುಕಟ್ಟೆಯ ಲೀಡರ್ ಕಂಪನಿಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಸಿಐಸಿಐ ಬ್ಯಾಂಕ್‌ನ ಇಕ್ವಿಟಿ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹೀಗಾಗಿ ಇಂದು ಮಾರುಕಟ್ಟೆಯಲ್ಲಿ ಹಿಂಜರಿತ ಕಂಡು ಬಂದಿದೆ. ಬಿಎಸ್ಸಿಯ ಟಾಪ್ 30 ಷೇರುಗಳ ಇಂಡೆಕ್ಸ್ 383.69 ಪಾಯಿಂಟ್ ಅಥವಾ 0.52 ರಷ್ಟು ಕುಸಿತ ಕಾಣುವ ಮೂಲಕ 73,511.85 ಕ್ಕೆ ಸ್ಥಿರವಾಯಿತು. ಇದಕ್ಕೂ ಮುನ್ನ ಸೆನ್ಸಕ್ಸ್ನಲ್ಲಿ ಇಂದು ಭಾರಿ ಏರಿಳಿತ ಕಂಡು ಬಂತು ಒಂದು ಹಂತದಲ್ಲಿ ಬಿಎಸ್ಸಿ 636.28 ಪಾಯಿಂಟ್‌ಗಳು ಅಥವಾ 0.86 ಶೇಕಡಾ ಕುಸಿದು 73,259.26 ಕ್ಕೆ ತಲುಪಿತ್ತು. ಅಂತಿಮವಾಗಿ ಅರ್ಧದಷ್ಟು ಏರಿಕೆ ಕಂಡು ತುಸು ನೆಮ್ಮದಿಗೂ ಕಾರಣವಾಯಿತು.
ಇನ್ನು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 140.20 ಪಾಯಿಂಟ್‌ಗಳಷ್ಟು ಅಂದರೆ ಶೇ 0.62 ರಷ್ಟು ಕುಸಿದು 22,302.50 ಕ್ಕೆ ವ್ಯವಹಾರ ಕೊನೆಗೊಳಿಸಿತು. ಬಿಎಸ್ಸಿಯಲ್ಲಿ ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಷೇರುಗಳಲ್ಲಿ ಭಾರಿ ಕುಸಿತ ಕಂಡು ಬಂತು.
ಈ ಷೇರುಗಳಲ್ಲಿ ಏರಿಕೆ: ಪ್ರಮುಖ ಷೇರುಗಳ ಇಳಿಕೆ ನಡುವೆ ಹಿಂದೂಸ್ತಾನ್ ಯೂನಿಲಿವರ್ ಶೇಕಡಾ 5 ರಷ್ಟು ಏರಿಕೆ ದಾಖಲಿಸಿ ಅದರ ಹೂಡಿಕೆದಾರರಿಗೆ ಖುಷಿ ಕೊಟ್ಟಿತು. ಅದರಂತೆ ಟೆಕ್ ಮಹೀಂದ್ರಾ, ನೆಸ್ಲೆ, ಐಟಿಸಿ, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಇತರ ಪ್ರಮುಖ ಲಾಭಗಳಿಸಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ ಮತ್ತು ಶಾಂಘೈ ಮಾರುಕಟ್ಟೆಗಳು ಲಾಭದೊಂದಿಗೆ ವ್ಯವಹಾರವನ್ನು ಕೊನೆಗೊಳಿಸಿದವು. ಹಾಂಕಾಂಗ್ ಮಾತ್ರ ತುಸು ಕುಸಿತ ಕಂಡಿತು. ಯುರೋಪಿಯನ್ ಮತ್ತು ವಾಲ್ಸ್ಟ್ರೀಟ್ ಸಂವೇದಿ ಸೂಚ್ಯಂಕಗಳು ಏರಿಕೆಯೊಂದಿಗೆ ಇಂದಿನ ವಹಿವಾಟು ಮುಕ್ತಾಯಗೊಳಿಸಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.23 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ USD 83.51 ಕ್ಕೆ ತಲುಪಿದೆ.
ಇದನ್ನು ಓದಿ: ಅಲ್ಪ ಏರಿಕೆ ಕಂಡ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 17 & ನಿಫ್ಟಿ 33 ಅಂಕ ಹೆಚ್ಚಳ - STOCK MARKET