ETV Bharat / business

IRCTC ಸೂಪರ್​ ಟೂರ್​ ಪ್ಯಾಕೇಜ್: ಕೈಗೆಟುಕುವ ದರದಲ್ಲಿ ಕೈಗೊಳ್ಳಿ ನೇಪಾಳ ಪ್ರವಾಸ! - IRCTC Hyderabad Nepal Tour

Tour to Nepal at an affordable price: ನೇಪಾಳದ ಮಂಜುಗಡ್ಡೆಗಳ ಸೌಂದರ್ಯವನ್ನು ನೋಡುವುದು ಒಂದು ಅನನ್ಯ ಅನುಭವವಾಗಿದೆ. ನಿಮಗೂ ಆ ಫೀಲಿಂಗ್ ಬರಬೇಕಾದರೆ, ನಿಮಗಾಗಿ ಸೂಪರ್ ಪ್ಯಾಕೇಜ್ ಲಭ್ಯವಿದೆ. IRCTC ಪ್ರವಾಸೋದ್ಯಮವು ಅತ್ಯುತ್ತಮ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಸ್ಟೋರಿಯಲ್ಲಿ ಟೂರ್​ನ ಸಂಪೂರ್ಣ ವಿವರಗಳನ್ನು ತಿಳಿಯೋಣ.

Nepal Tour  IRCTC  IRCTC Super Tour Package  Nepal Tour Package
IRCTC ಸೂಪರ್​ ಟೂರ್​ ಪ್ಯಾಕೇಜ್! ಕೈಗೆಟುಕುವ ದರದಲ್ಲಿ ಕೈಗೊಳ್ಳಿ ನೇಪಾಳ ಪ್ರವಾಸ (ETV Bharat)
author img

By ETV Bharat Karnataka Team

Published : Jun 29, 2024, 6:58 AM IST

ಮಂಜುಗಡ್ಡೆಗಳ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ನೆರೆಯ ದೇಶ ನೇಪಾಳಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು. IRCTC ನಿಮ್ಮನ್ನು ಸಂತೋಷಪಡಿಸಲು ಸೂಪರ್ ಟೂರ್​ ಪ್ಯಾಕೇಜೊಂದನ್ನು ಘೋಷಿಸಿದೆ. ನೇಪಾಳದ ಸೌಂದರ್ಯವನ್ನು ನೋಡಲು ಹೈದರಾಬಾದ್‌ನಿಂದ ಫ್ಲೈಟ್ ಜರ್ನಿ ಟೂರ್ ಕಾರ್ಯನಿರ್ವಹಿಸುತ್ತಿದೆ. ಮತ್ತು ಈ ಪ್ರವಾಸ ಯಾವಾಗ ಪ್ರಾರಂಭವಾಗುತ್ತದೆ? ಪ್ರವಾಸಕ್ಕೆ ತೆರಳಲು ನಿಗದಿಪಡಿಸಿದ ಬೆಲೆ ಏನು? ನೇಪಾಳದ ಯಾವ್ಯಾವ ಸ್ಥಳಗಳನ್ನು ನೋಡಬಹುದು ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ.

"ರಾಯಲ್ ನೇಪಾಲ್ ಎಕ್ಸ್ ಹೈದರಾಬಾದ್" ಎಂಬ ಹೆಸರಿನ ಈ ಪ್ರವಾಸದ ಪ್ಯಾಕೇಜ್ ಅನ್ನು IRCTC ಪ್ರವಾಸೋದ್ಯಮದಿಂದ ನಿರ್ವಹಿಸಲಾಗುತ್ತದೆ. ಈ ಪ್ರವಾಸದ ಒಟ್ಟು ಅವಧಿಯು 5 ರಾತ್ರಿಗಳು ಮತ್ತು 6 ದಿನಗಳು. ನೇಪಾಳದ ಕಠ್ಮಂಡು ಮತ್ತು ಪೋಖರಾ ಪ್ರದೇಶಗಳನ್ನು ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ. ನೇಪಾಳ ಪ್ರವಾಸಕ್ಕೆ ಹೋಗಲು ಬಯಸುವವರು ಪಾಸ್‌ಪೋರ್ಟ್ ಅಥವಾ ವೋಟರ್ ಐಡಿ ಹೊಂದಿರಬೇಕು.

ಪ್ರಯಾಣದ ವಿವರ:

  • IRCTC "ರಾಯಲ್ ನೇಪಾಳ" ಪ್ರವಾಸವು ಹೈದರಾಬಾದ್‌ನಲ್ಲಿ ಪ್ರಾರಂಭವಾಗುತ್ತದೆ. ಬೆಳಗ್ಗೆ ವಿಮಾನ ಹತ್ತಿದರೆ ಸಂಜೆ ನೇಪಾಳದ ರಾಜಧಾನಿ ಕಠ್ಮಂಡು ತಲುಪುತ್ತೀರಿ. ಸ್ಥಳೀಯ ಪ್ರದೇಶಗಳನ್ನು ಸಂಜೆ ಬಿಡುವಿನ ವೇಳೆಯಲ್ಲಿ ನೋಡಬಹುದು. ಕಠ್ಮಂಡುವಿನಲ್ಲಿ ರಾತ್ರಿಯ ತಂಗುವಿಕೆ.
  • ಎರಡನೇ ದಿನದ ಉಪಹಾರದ ನಂತರ, ನೀವು ಪಶುಪತಿನಾಥ ದೇವಾಲಯ, ಬುದ್ಧನಾಥ ಸ್ತೂಪ, ಪಠಾಣ್, ದರ್ಬಾರ್ ಚೌಕ, ಸ್ವಯಂಭುನಾಥ ಸ್ತೂಪಕ್ಕೆ ಭೇಟಿ ನೀಡಬಹುದು. ಊಟದ ನಂತರ ಕಠ್ಮಂಡುವಿನಲ್ಲಿ ಉಳಿಯಬೇಕು.
  • ಮೂರನೇ ದಿನ, ಉಪಹಾರದ ನಂತರ, ಪೋಖರಾಗೆ ಹೊರಡಬೇಕು. ದಾರಿಯಲ್ಲಿ ಮನಕಾಮನ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಸಂಜೆ ನೀವು ಸ್ಥಳೀಯ ಪ್ರದೇಶಗಳಲ್ಲಿ ಶಾಪಿಂಗ್ ಮಾಡಬಹುದು. ಪೋಖರಾದಲ್ಲಿ ರಾತ್ರಿಯ ವಾಸ್ತವ್ಯ ಹೂಡಬೇಕಾಗುತ್ತದೆ.
  • ನಾಲ್ಕನೇ ದಿನ, ಮುಂಜಾನೆ ಸುರಂಗಕೋಟ್‌ಗೆ ಹೊರಡಬೇಕು. ಅಲ್ಲಿ ಸೂರ್ಯೋದಯವನ್ನು ನೋಡಬಹುದು. ನಂತರ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ನಡೆಯಲಿದೆ. ಬಿಂಧ್ಯಾಬಾಸಿ ಮಂದಿರ, ಡೆವಿಲ್ಸ್ ಫಾಲ್, ಗುಪ್ತೇಶ್ವರ ಮಹಾದೇವ್ ಗುಹೆಗೆ ಭೇಟಿ ನೀಡಬಹುದು. ಪೋಖರಾದಲ್ಲಿ ರಾತ್ರಿ ಕಳೆಯಬೇಕಾಗುತ್ತದೆ.
  • ಐದನೇ ದಿನದ ಉಪಹಾರದ ನಂತರ, ಕಠ್ಮಂಡುವಿಗೆ ಹೊರಡಬೇಕು. ಹೋಟೆಲ್‌ನಲ್ಲಿ ಊಟ ಮಾಡಿದ ನಂತರ.. ಅಲ್ಲಿನ ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಬಹುದು. ಕಠ್ಮಂಡುವಿನಲ್ಲಿ ರಾತ್ರಿ ಉಳಿದುಕೊಳ್ಳಬೇಕಿದೆ
  • ಆರನೇ ದಿನ, ಉಪಹಾರದ ನಂತರ, ಕಾಠ್ಮಂಡು ವಿಮಾನ ನಿಲ್ದಾಣವನ್ನು ತಲುಪಿ ಮತ್ತು ರಾತ್ರಿ 10:50ಕ್ಕೆ ಪ್ರವಾಸವು ಹೈದರಾಬಾದ್ ತಲುಪುವುದರೊಂದಿಗೆ ಕೊನೆಗೊಳ್ಳುತ್ತದೆ.

ಪ್ರವಾಸದ ಬೆಲೆಗಳ ಮಾಹಿತಿ: IRCTC 'ರಾಯಲ್ ನೇಪಾಳ್' ಪ್ರವಾಸದ ಪ್ಯಾಕೇಜ್‌ನಲ್ಲಿನ ಟಿಕೆಟ್ ದರಗಳನ್ನು ನೀವು ನೋಡಿದರೆ, ಸೌಕರ್ಯದಲ್ಲಿ ಸಿಂಗಲ್ ಆಕ್ಯುಪೆನ್ಸಿ ಬೆಲೆ ₹55,630, ಡಬಲ್ ಆಕ್ಯುಪೆನ್ಸಿ ಬೆಲೆ ₹46,550 ಮತ್ತು ಟ್ರಿಪಲ್ ಆಕ್ಯುಪೆನ್ಸಿ ಬೆಲೆ ₹45,250 ಮತ್ತು 5 ರಿಂದ 11 ವರ್ಷದ ಮಕ್ಕಳಿಗೆ ಬೆಡ್ ₹40,110 ಹಾಗೂ 2 ರಿಂದ 11 ವರ್ಷದ ಮಕ್ಕಳಿಗೆ ₹35,190 ದರ ನಿಗದಿಪಡಿಸಲಾಗಿದೆ.

ಈ ಪ್ರವಾಸದ ಪ್ಯಾಕೇಜ್ ವಿಮಾನ ಟಿಕೆಟ್‌ಗಳು, ಹೋಟೆಲ್ ವಸತಿ, ಉಪಹಾರ, ರಾತ್ರಿಯ ಊಟ, AC ಬಸ್‌ನಲ್ಲಿ ವೀಕ್ಷಣೆ, ಪ್ರಯಾಣ ವಿಮೆಯನ್ನು ಒಳಗೊಂಡಿದೆ. ಈ ಪ್ಯಾಕೇಜ್ ಅನ್ನು ಬುಕ್ ಮಾಡುವ ಪ್ರವಾಸಿಗರು ನೇಪಾಳ ನೀಡಿರುವ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ ಅನ್ನು ಅನುಸರಿಸಬೇಕು. ಈ ಪ್ಯಾಕೇಜ್‌ನ ಸಂಪೂರ್ಣ ವಿವರಗಳು ಮತ್ತು ಬುಕಿಂಗ್‌ಗಾಗಿ ಈ https://www.irctctourism.com ವೆಬ್​ಸೈಟ್​ಗೆ ಭೇಟಿ ನೀಡಬಹುದು.

ಇದನ್ನೂ ಓದಿ: IRCTC ಸೂಪರ್ ಪ್ಯಾಕೇಜ್: ₹6 ಸಾವಿರದೊಳಗೆ ತಿಮ್ಮಪ್ಪನ ದರ್ಶನ, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಅವಕಾಶ - IRCTC Sapthagiri Tour Package

ETV Bharat Logo

Copyright © 2024 Ushodaya Enterprises Pvt. Ltd., All Rights Reserved.