ETV Bharat / business

ಅಡೆತಡೆ ಇಲ್ಲದೆ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿ: ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ - Self Help Groups - SELF HELP GROUPS

ಸ್ವಸಹಾಯ ಗುಂಪುಗಳಿಗೆ ಯಾವುದೇ ಅಡೆತಡೆ ಇಲ್ಲದೆ ಸಾಲ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕೆಂದು ಬ್ಯಾಂಕುಗಳಿಗೆ ಆರ್​ಬಿಐ ಸೂಚಿಸಿದೆ.

RBI directs banks to step up hassle-free loans to Self Help Groups

author img

By ETV Bharat Karnataka Team

Published : Apr 1, 2024, 2:28 PM IST

ಮುಂಬೈ: ಸ್ವಸಹಾಯ ಗುಂಪುಗಳಿಗೆ (ಎಸ್ಎಚ್​ಜಿ) ಹಣಕಾಸು ಒದಗಿಸುವಲ್ಲಿ ತಮ್ಮ ಶಾಖೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುವಂತೆ ಮತ್ತು ಹಣಕಾಸು ಒದಗಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಗುಂಪುಗಳೊಂದಿಗೆ ಸಂಪರ್ಕ ಸಾಧಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

"ಸ್ವ ಸಹಾಯ ಗುಂಪುಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಅಗತ್ಯವಿಲ್ಲ ಅಥವಾ ಔಪಚಾರಿಕ ರಚನೆಗಳನ್ನು ಹೇರಬೇಕಾಗಿಲ್ಲ ಅಥವಾ ಒತ್ತಾಯಿಸಬೇಕಾಗಿಲ್ಲ. ಎಸ್​ಎಚ್​ಜಿಗಳಿಗೆ ಹಣಕಾಸು ಒದಗಿಸುವ ವಿಧಾನವು ಸಂಪೂರ್ಣವಾಗಿ ತೊಂದರೆ ರಹಿತವಾಗಿರಬೇಕು ಮತ್ತು ಬಳಕೆಯ ವೆಚ್ಚಗಳನ್ನು ಸಹ ಒಳಗೊಂಡಿರಬಹುದು. ಹಾಗೆಯೇ ಎಸ್​ಎಚ್​ಜಿಗಳನ್ನು ಬ್ಯಾಂಕಿಂಗ್ ವಲಯದೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸಲು ಅನುವು ಮಾಡಿಕೊಡಲು ಮಾರ್ಗಸೂಚಿಗಳನ್ನು ಅನುಸರಿಸಬೇಕು" ಎಂದು ಆರ್​ಬಿಐ ಎಲ್ಲಾ ಬ್ಯಾಂಕುಗಳಿಗೆ ತನ್ನ ಮಾಸ್ಟರ್ ಸುತ್ತೋಲೆಯಲ್ಲಿ ತಿಳಿಸಿದೆ.

25,000 ವರೆಗಿನ ಆದ್ಯತಾ ವಲಯದ ಸಾಲಗಳಿಗೆ ಯಾವುದೇ ಸಾಲ ಸಂಬಂಧಿತ ಮತ್ತು ತಾತ್ಕಾಲಿಕ ಸೇವಾ ಶುಲ್ಕಗಳು ಅಥವಾ ತಪಾಸಣೆ ಶುಲ್ಕಗಳನ್ನು ವಿಧಿಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಎಸ್​ಎಚ್​ಜಿ ಗಳು / ಜೆಎಲ್​ಜಿಗಳಿಗೆ ಅರ್ಹ ಆದ್ಯತಾ ವಲಯದ ಸಾಲಗಳ ಸಂದರ್ಭದಲ್ಲಿ ಈ ಮಿತಿಯು ಪ್ರತಿ ಸದಸ್ಯರಿಗೆ ಅನ್ವಯಿಸುತ್ತದೆ ಮತ್ತು ಒಟ್ಟಾರೆ ಗುಂಪಿಗೆ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲಗಳನ್ನು ಕೃಷಿ, ಎಂಎಸ್ಎಂಇ ಮುಂತಾದ ಆಯಾ ವರ್ಗಗಳ ಅಡಿಯಲ್ಲಿ ಆದ್ಯತೆಯ ವಲಯದ ಸಾಲ (ಪಿಎಸ್ಎಲ್) ಅಡಿಯಲ್ಲಿ ವರ್ಗೀಕರಿಸಲು ಅವಕಾಶವಿದೆ ಎಂದು ಆರ್​ಬಿಐ ತಿಳಿಸಿದೆ. ತಮ್ಮ ಸದಸ್ಯರಲ್ಲಿ ಉಳಿತಾಯದ ಅಭ್ಯಾಸವನ್ನು ಉತ್ತೇಜಿಸುವಲ್ಲಿ ತೊಡಗಿರುವ ನೋಂದಾಯಿತ ಅಥವಾ ನೋಂದಾಯಿಸದ ಸ್ವಸಹಾಯ ಗುಂಪುಗಳು ಬ್ಯಾಂಕುಗಳಲ್ಲಿ ಉಳಿತಾಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಅರ್ಹವಾಗಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಎಸ್​ಎಚ್​ಜಿಗಳಿಗೆ ಬ್ಯಾಂಕ್ ಸಾಲವನ್ನು ಶಾಖೆ ಸಾಲ ಯೋಜನೆ, ಬ್ಲಾಕ್ ಕ್ರೆಡಿಟ್ ಯೋಜನೆ, ಜಿಲ್ಲಾ ಸಾಲ ಯೋಜನೆ ಮತ್ತು ಪ್ರತಿ ಬ್ಯಾಂಕಿನ ರಾಜ್ಯ ಸಾಲ ಯೋಜನೆಯಲ್ಲಿ ಸೇರಿಸಬೇಕು. ಈ ಯೋಜನೆಗಳನ್ನು ತಯಾರಿಸುವಲ್ಲಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದು ಬ್ಯಾಂಕಿನ ಕಾರ್ಪೊರೇಟ್ ಸಾಲ ಯೋಜನೆಯ ಅವಿಭಾಜ್ಯ ಅಂಗವಾಗಿರಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಲಿಂಕ್ ಯೋಜನೆಯಲ್ಲಿ ಗಮನಿಸಲಾದ ಮತ್ತೊಂದು ಗಮನಾರ್ಹ ಲಕ್ಷಣವೆಂದರೆ, ಬ್ಯಾಂಕುಗಳೊಂದಿಗೆ ಸಂಪರ್ಕ ಹೊಂದಿದ ಸುಮಾರು 85 ಪ್ರತಿಶತದಷ್ಟು ಗುಂಪುಗಳು ಕೇವಲ ಮಹಿಳೆಯರಿಂದಲೇ ರಚಿತವಾಗಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ : ದಾಖಲೆಯ 420 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಿಸಿದ ಅದಾನಿ ಪೋರ್ಟ್ಸ್​ - Adani Ports

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.