ETV Bharat / business

320 ಲಕ್ಷ ಟನ್ ಗೋಧಿ, 6 ಲಕ್ಷ ಟನ್ ಸಿರಿಧಾನ್ಯ ದಾಸ್ತಾನಿಗೆ ಕೇಂದ್ರ ನಿರ್ಧಾರ - ಗೋಧಿ ಸಂಗ್ರಹಣೆ

ಹಿಂಗಾರು ಮಾರುಕಟ್ಟೆ ಋತುವಿನಲ್ಲಿ 320 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಣೆ ಮಾಡಲು ಸರ್ಕಾರ ನಿರ್ಧರಿಸಿದೆ.

Centre fixes 320 lakh tonnes wheat procurement target, 6 lakh tonnes for millets

author img

By ETV Bharat Karnataka Team

Published : Feb 29, 2024, 1:31 PM IST

ನವದೆಹಲಿ: 2024-25ರ ಹಿಂಗಾರು ಮಾರುಕಟ್ಟೆ ಋತುವಿನಲ್ಲಿ 300 ರಿಂದ 320 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಣೆ ಮಾಡಿಟ್ಟುಕೊಳ್ಳುವ ಅಂದಾಜುಗಳನ್ನು ಕೇಂದ್ರವು ನಿಗದಿಪಡಿಸಿದೆ ಎಂದು ಆಹಾರ ಸಚಿವಾಲಯ ಗುರುವಾರ ತಿಳಿಸಿದೆ. ರಾಜ್ಯಗಳೊಂದಿಗೆ ಸಮಾಲೋಚಿಸಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹಾಗೆಯೇ, 2023-24 ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ರಾಬಿ ಬೆಳೆ) ಭತ್ತದ ಸಂಗ್ರಹಣೆಯ ಅಂದಾಜುಗಳನ್ನು 90 ರಿಂದ 100 ಲಕ್ಷ ಮೆಟ್ರಿಕ್ ಟನ್ ವ್ಯಾಪ್ತಿಯಲ್ಲಿ ನಿಗದಿಪಡಿಸಲಾಗಿದೆ.

2023-24 ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ರಾಬಿ ಬೆಳೆ) ರಾಜ್ಯಗಳು ಸುಮಾರು 6 ಲಕ್ಷ ಮೆಟ್ರಿಕ್ ಟನ್ ಒರಟು ಧಾನ್ಯಗಳು / ರಾಗಿಗಳನ್ನು ಸಂಗ್ರಹಿಸುವ ಅಂದಾಜು ಮಾಡಿವೆ. ಬೆಳೆಗಳ ವೈವಿಧ್ಯೀಕರಣ ಮತ್ತು ಆಹಾರ ಪದ್ಧತಿಯಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸಲು ಸಿರಿಧಾನ್ಯಗಳ ಸಂಗ್ರಹಣೆಯತ್ತ ಗಮನ ಹರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ.

ರಬಿ ಮತ್ತು ಖಾರಿಫ್ ಬೆಳೆಗಳ ಖರೀದಿ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಕೇಂದ್ರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ರಾಜ್ಯ ಆಹಾರ ಕಾರ್ಯದರ್ಶಿಗಳೊಂದಿಗೆ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಅಂದಾಜುಗಳನ್ನು ನಿರ್ಧರಿಸಲಾಗಿದೆ. ಹವಾಮಾನ ಪರಿಸ್ಥಿತಿಗಳ ಮುನ್ಸೂಚನೆ, ಉತ್ಪಾದನಾ ಅಂದಾಜುಗಳು ಮತ್ತು ರಾಜ್ಯಗಳ ಸಿದ್ಧತೆಯಂತಹ ಸಂಗ್ರಹಣೆಯ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ಇದಲ್ಲದೆ ತೆಲಂಗಾಣ ಸರ್ಕಾರವು ಪೂರೈಕೆ ಜಾಲ ಸರಳೀಕರಣಕ್ಕೆ ಸಂಬಂಧಿಸಿದಂತೆ ಅಳವಡಿಸಿಕೊಂಡ ಉತ್ತಮ ಕ್ರಮಗಳನ್ನು ಸಭೆಯಲ್ಲಿ ಹಂಚಿಕೊಂಡಿತು ಮತ್ತು ಕೇಂದ್ರ ಸರ್ಕಾರದ ಈ ಪರಿಸರ ಸ್ನೇಹಿ ಉಪಕ್ರಮದ ಮೂಲಕ ವಾರ್ಷಿಕವಾಗಿ 16 ಕೋಟಿ ರೂ.ಗಳ ಉಳಿತಾಯವಾಗಿರುವುದಾಗಿ ತಿಳಿಸಿತು. ಉತ್ತರ ಪ್ರದೇಶ ಸರ್ಕಾರವು ಇ-ಪಿಒಎಸ್ ಅನ್ನು ಎಲೆಕ್ಟ್ರಾನಿಕ್ ತೂಕದ ಮಾಪಕದೊಂದಿಗೆ ಸಂಪರ್ಕಿಸುವ ಯಶಸ್ವಿ ಯೋಜನೆಯನ್ನು ಸಭೆಯಲ್ಲಿ ಹಂಚಿಕೊಂಡಿತು. ಇದು ಫಲಾನುಭವಿಗಳಿಗೆ ಅವರ ಅರ್ಹ ಪ್ರಮಾಣಕ್ಕೆ ಅನುಗುಣವಾಗಿ ಆಹಾರ ಧಾನ್ಯಗಳ ಪೂರೈಕೆಯನ್ನು ಪರಿಣಾಮಕಾರಿಯಾಗಿ ಖಚಿತಪಡಿಸಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ರಾಜ್ಯ ಎಂಎಸ್ ಪಿ ಖರೀದಿ ಅರ್ಜಿಗಳ ಡಿಜಿಟಲ್ ಪರಿಪಕ್ವತೆಯ ಬಗ್ಗೆ ತಮ್ಮ ಮೌಲ್ಯಮಾಪನ ಅಧ್ಯಯನವನ್ನು ಸಭೆಯಲ್ಲಿ ಪ್ರಸ್ತುತಪಡಿಸಿತು. 2024-25 ರ ಖಾರಿಫ್ ಮಾರುಕಟ್ಟೆ ಋತುವಿನ ಪ್ರಾರಂಭದ ಮೊದಲು, ಖರೀದಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಅಳವಡಿಸಿಕೊಳ್ಳಲು ಅಗ್ರಿಸ್ಟಾಕ್ ಪೋರ್ಟಲ್ ನ ಮಾನದಂಡ ಮತ್ತು ಪ್ರಮುಖ ವೈಶಿಷ್ಟ್ಯಗಳಿಗೆ ಅನುಗುಣವಾಗಿ ತಮ್ಮ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್ ಗಳನ್ನು ಅಳವಡಿಸಿಕೊಳ್ಳಲು ಅಥವಾ ಸುಧಾರಿಸಲು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಯಿತು.

ಇದನ್ನೂ ಓದಿ : 10 ವರ್ಷಗಳಲ್ಲಿ $2 ಟ್ರಿಲಿಯನ್​ ತಲುಪಲಿದೆ ಭಾರತದ ರಿಟೇಲ್ ಮಾರುಕಟ್ಟೆ: ಸಂಶೋಧನಾ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.