ನವದೆಹಲಿ: ವಿಶ್ವದ ಅತಿ ದೊಡ್ಡ ಇ- ಕಾರ್ಮಸ್ ಫ್ಲಾಟ್ಫಾರ್ಮ್ ಭಾರತೀಯ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಹೊಸ ಆನ್ಲೈನ್ ಮಾರುಕಟ್ಟೆ ಫ್ಲಾಟ್ಫಾರ್ಮ್ ಉದ್ಘಾಟನೆಗೆ ಸಜ್ಜಾಗಿದೆ. ಬಜಾರ್ ಎಂಬ ಹೊಸ ಫ್ಲಾಟ್ ಫಾರ್ಮ್ ಮೂಲಕ ಕಡಿಮೆ ವೆಚ್ಚದ, ಬ್ರಾಂಡೆಡ್ ಅಲ್ಲದ ಫ್ಯಾಷನ್ ಉಡುಪುಗಳ ಮಾರಾಟಕ್ಕೆ ಸಜ್ಜಾಗಿದೆ.
ಅಮೆಜಾನ್ ಬಜಾರ್ ನಲ್ಲಿ 600ಕ್ಕಿಂತ ಕಡಿಮೆ ವೆಚ್ಚದಲ್ಲೂ ಫ್ಯಾಷನ್ ಉತ್ಪನ್ನಗಳ ಮಾರಾಟ ಮಾಡಲಾಗುವುದು. ಕಡಿಮೆ ಬಜೆಟ್ನಲ್ಲಿರುವ ಬಟ್ಟೆ, ಲಗೇಜ್, ವಾಚ್, ಶೂ ಮತ್ತು ಆಭರಣ ಸೇರಿದಂತೆ ಹಲವು ವಸ್ತುಗಳನ್ನು ಗ್ರಾಹಕರು ಖರೀದಿ ಮಾಡಬಹುದಾಗಿದೆ.
ಅಷ್ಟೇ ಅಲ್ಲದೇ ಈ ಫ್ಲಾಟ್ಫಾರ್ಮ್ಗೆ ಬ್ರಾಂಡೆಡ್ ಹೊರತಾದ ಫ್ಯಾಷನ್ ಮತ್ತು ಲೈಫ್ಸ್ಟೈಲ್ ಉತ್ಪನ್ನಗಳನ್ನು ಪೂರೈಕೆ ಮಾಡುವ ವ್ಯಾಪಾರಿಗಳಿಗೆ ಯಾವುದೇ ಹೆಚ್ಚುವರಿ ಚಾರ್ಜ್ ಅನ್ನು ಕೂಡ ವಿಧಿಸಲಾಗುವುದಿಲ್ಲ. ವ್ಯಾಪಾರಿಗಳು ಉತ್ಪನ್ನವನ್ನು ಅಮೆಜಾನ್ ಬಜಾರ್ನಲ್ಲಿ ವಿಶೇಷ ಸ್ಟೋರ್ನಲ್ಲಿ ಕಾಣಬಹುದಾಗಿದೆ. ಇದರಿಂದ ಗ್ರಾಹಕರು ತಮ್ಮ ಆಯ್ಕೆಯ ವಸ್ತುಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹತ್ತಾರು ಮಿಲಿಯನ್ ಗ್ರಾಹಕರಿಗೆ ಮಾರಾಟಗಾರರಿಗೆ ಪ್ರವೇಶವನ್ನು ನೀಡುತ್ತದೆ. ಉದ್ಯಮಿಗಳಿಗೆ ಯಾವುದೇ ತೊಂದರೆ ಇಲ್ಲದೇ ಶೂನ್ಯ ರೆಫ್ರಲ್ ಶುಲ್ಕ ವಿಧಿಸಲಾಗಿದೆ. ಪ್ರೈಮ್ ಮೆಂಬರ್ನಂತೆ ಶೀಘ್ರ ಡೆಲಿವರಿಯನ್ನು ಇದು ಹೊಂದಿಲ್ಲ. ಇಲ್ಲಿ ಗ್ರಾಹಕರಿಗೆ ಉತ್ಪನ್ನಗಳು ತಲುಪಲು ಮೂರು ನಾಲ್ಕು ದಿನ ಸಮಯ ತೆಗೆದುಕೊಳ್ಳಲಿದೆ.
ಫ್ಯಾಷನ್ ಆನ್ಲೈನ್ ಮಾರುಕಟ್ಟೆಯಲ್ಲಿ ಮಿಶೋ ಕಡಿಮೆ ವೆಚ್ಚದಲ್ಲಿ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಪರಿಣಾಮಕಾರಿಯಾಗಿ ಗ್ರಾಹಕರನ್ನು ತಲುಪಿದೆ. ಜೊತೆಗೆ ವಾಲ್ಮಾರ್ಟ್ ಒಡೆತನದ ಶೊಪ್ಸೆ ಕೂಡ ವಿವಿಧ ಆ್ಯಪ್ಗಳ ಮೂಲಕ ಗಮನಾರ್ಹವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ರಿಲಯನ್ಸ್ ಉದ್ಯಮದ ಅಜಿಯೋ ಸ್ಟ್ರೀಟ್ ಕೂಡ ಕಡಿಮೆ ವೆಚ್ಚದಲ್ಲಿ ಗ್ರಾಹಕರನ್ನು ತುಪುತ್ತಿದೆ.
ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ಉದ್ದೇಶದಿಂದ ಅಮೆಜಾನ್ ಕೂಡ ಬಜಾರ್ ಅನ್ನು ಪರಿಚಯಿಸಲು ಮುಂದಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಮಾರಾಟ ನಡೆಸಲು ನಿರ್ಧರಿಸಿದೆ.
ಈ ನಡುವೆ ಅಮೆಜಾನ್ ಒಟ್ಟಾರೆ ಮಾರಾಟದಲ್ಲಿ ಶೇ 14ರಷ್ಟು ಹೆಚ್ಚಳವನ್ನು ಕಂಡಿದೆ. 2022ರ ನಾಲ್ಕನೇ ತ್ರೈಮಾಸಿಕದಲ್ಲಿ 149.2 ಬಿಲಿಯನ್ ವಹಿವಾಟು ನಡೆಸಿತ್ತು. ಇದಕ್ಕೆ ಹೋಲಿಕೆ ಮಾಡಿದಾಗ 2023 ಡಿಸೆಂಬರ್ 31 ರಜೆ ತ್ರೈಮಾಸಿಕದಲ್ಲಿ 170 ಬಿಲಿಯನ್ ವಹಿವಾಟು ನಡೆಸಿದೆ. ಕಳೆದ ರಜೆಯ ಋತುಮಾನ ರೇಕಾರ್ಡ್ ಬ್ರೇಕಿಂಗ್ ಆಗಿದೆ ಎಂದು ಅಮೆಜಾನ್ ಸಿಇಒ ಆ್ಯಂಡೆ ಜಸ್ಸೆ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಬೈ ವಿತ್ ಪ್ರೈಮ್ ವಿಭಾಗದಲ್ಲಿ ಶೇ 5ರಷ್ಟು ಉದ್ಯೋಗ ಕಡಿತಕ್ಕೆ ಮುಂದಾದ ಅಮೆಜಾನ್