ETV Bharat / business

ನಾಳೆಯಿಂದ ಅಮೆಜಾನ್​​​ ಸಮ್ಮರ್​ ಸೇಲ್​​ ಧಮಾಕಾ: ಈ ಎಲ್ಲ ವಸ್ತುಗಳ ಮೇಲೆ ಭಾರಿ ರಿಯಾಯಿತಿ, ಫ್ರೈಮ್​​ ಗ್ರಾಹಕರಿಗೆ ಡಬಲ್​ ಲಾಭ - deals discounts and offers - DEALS DISCOUNTS AND OFFERS

ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಒಳ್ಳೆಯ ಸುದ್ದಿ. ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಬಂದಿದೆ. ಈ ಮೆಗಾ ಸೇಲ್ Amazon Great Summer Sale 2024 : ಮೇ 2 ರಿಂದ ದೊಡ್ಡ ರಿಯಾಯಿತಿಗಳು ಮತ್ತು ಕೊಡುಗೆಗಳೊಂದಿಗೆ ಪ್ರಾರಂಭವಾಗಲಿದೆ. ಸಂಪೂರ್ಣ ವಿವರಗಳು ನಿಮಗಾಗಿ.

amazon-great-summer-sale-2024-deals-discounts-and-offers
ನಾಳೆಯಿಂದ ಅಮೆಜಾನ್​​​ ಸಮ್ಮರ್​ ಸೇಲ್​​ ಧಮಾಕಾ: ಈ ಎಲ್ಲ ವಸ್ತುಗಳ ಮೇಲೆ ಭಾರಿ ರಿಯಾಯಿತಿ, ಫ್ರೈಮ್​​ ಗ್ರಾಹಕರಿಗೆ ಡಬಲ್​ ಲಾಭ
author img

By ETV Bharat Karnataka Team

Published : May 1, 2024, 7:36 AM IST

ಬೆಂಗಳೂರು: ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಮತ್ತೊಂದು ಮೆಗಾ ಸೇಲ್‌ಗೆ ಸಿದ್ಧವಾಗಿದೆ. ಕಂಪನಿ ಇತ್ತೀಚೆಗೆ ವಾರ್ಷಿಕ ಗ್ರೇಟ್ ಸಮ್ಮರ್ ಸೇಲ್‌ನ ದಿನಾಂಕಗಳನ್ನು ಪ್ರಕಟಿಸಿದೆ. ಮೇ 2ರ ಮಧ್ಯಾಹ್ನದಿಂದ ಈ ಸೇಲ್ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ದೊಡ್ಡ ಮಾರಾಟ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಮಾತ್ರ ಅಮೆಜಾನ್ ಇನ್ನೂ ಬಹಿರಂಗಪಡಿಸಿಲ್ಲ. ಮತ್ತೊಂದು ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಕೂಡ 'ಬಿಗ್ ಸೇವಿಂಗ್ ಡೇಸ್ ಸೇಲ್' ದಿನಾಂಕಗಳನ್ನು ಪ್ರಕಟಿಸಿದೆ. ಈ ಸೇಲ್ ಮೇ 3 ರಿಂದ ಮೇ 9 ರವರೆಗೆ ನಡೆಯಲಿದೆ.

ಇಂದಿನ ತಡರಾತ್ರಿಯಿಂದಲೇ ಸೇಲ್​ ಆರಂಭ: ಅಮೆಜಾನ್ ಪ್ರೈಮ್ ಸದಸ್ಯರಿಗೆ ಮೇ 1 ರ ಮಧ್ಯರಾತ್ರಿ 12 ರಿಂದಲೇ ಆಫರ್​ ಲಭ್ಯವಿರುತ್ತದೆ. ಇದರರ್ಥ ಪ್ರೈಮ್ ಚಂದಾದಾರರು ಈ ಮಾರಾಟದಲ್ಲಿ ನೀಡುವ ರಿಯಾಯಿತಿಗಳು, ಕೊಡುಗೆಗಳು ಮತ್ತು ಡೀಲ್‌ಗಳನ್ನು ಎಲ್ಲರಿಗಿಂತ ಒಂದು ದಿನ ಮುಂಚಿತವಾಗಿ ಪಡೆಯಬಹುದು.

ಅತ್ಯುತ್ತಮ ಆಫರ್​ಗಳಿವು: ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ICICI ಬ್ಯಾಂಕ್, ಒನ್​ ಕಾರ್ಡ್ ಮತ್ತು ಬ್ಯಾಂಕ್ ಆಫ್ ಬರೋಡಾ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ 10 ರಷ್ಟು ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ.

  • ಖರೀದಿದಾರರಿಗೆ EMI ಸೌಲಭ್ಯವನ್ನು ಸಹ ಒದಗಿಸಲಾಗಿದೆ.
  • ಈ ಮಾರಾಟದ ಸಮಯದಲ್ಲಿ ಮಾಡಿದ ಮೊದಲ ಆರ್ಡರ್‌ನಲ್ಲಿ ಉಚಿತ ಡೆಲಿವರಿ ಸೌಲಭ್ಯ ನೀಡಲಾಗಿದೆ. ಇದಲ್ಲದೇ, ಸ್ವಾಗತ ಬಹುಮಾನದ ಹೆಸರಿನಲ್ಲಿ ಶೇ 20ರಷ್ಟು ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತದೆ.
  • ಸ್ಮಾರ್ಟ್ ವಾಚ್‌ಗಳು, ಪುಸ್ತಕಗಳು, ಉಡುಪುಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳ ಮೇಲೆ ದೊಡ್ಡ ಕೊಡುಗೆಗಳು ಮತ್ತು ರಿಯಾಯಿತಿಗಳಿವೆ.
  • ಈ ಸೇಲ್‌ನಲ್ಲಿ ಅಮೆಜಾನ್ ಅಲೆಕ್ಸಾ ಸಾಧನಗಳು, ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳ ಮೇಲೆ ಭಾರಿ ರಿಯಾಯಿತಿಗಳು ಮತ್ತು ಕೊಡುಗೆಗಳು ಇರುತ್ತವೆ ಎಂದು ವರದಿಯಾಗಿದೆ.

ಈ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ Apple, Samsung, OnePlus, Redmi, Narzo, iCoo, Poco, Honor ಮತ್ತು Tecno ನಂತಹ ಟಾಪ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

ಆದರೆ ಎಷ್ಟು ಡಿಸ್ಕೌಂಟ್ ನೀಡುವುದಾಗಿ ಕಂಪನಿ ಇನ್ನೂ ಹೇಳಿಲ್ಲ. ಈ ಆಫರ್‌ಗಳು ಮತ್ತು ಡೀಲ್‌ಗಳ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

ಇದನ್ನು ಓದಿ:ಬೆಂಗಳೂರು, ಬೆಳಗಾವಿಯಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಗೊತ್ತಾ? - Gold Rate

ETV Bharat Logo

Copyright © 2025 Ushodaya Enterprises Pvt. Ltd., All Rights Reserved.