ETV Bharat / business

ತಲೆ ಕೆಳಗಾದ ಲೋಕಸಭಾ ಚುನಾವಣಾ ಫಲಿತಾಂಶದ ಲೆಕ್ಕಾಚಾರ: ಅದಾನಿ ಷೇರುಗಳ ಮೌಲ್ಯ ಕುಸಿತ - Adani Group Shares Tumble - ADANI GROUP SHARES TUMBLE

ಲೋಕಸಭೆ ಚುನಾವಣೆಯ ಅನಿರೀಕ್ಷಿತ ಫಲಿತಾಂಶದ ಹಿನ್ನೆಲೆಯಲ್ಲಿ ಇಂದು ಅದಾನಿ ಸಮೂಹದ ಷೇರುಗಳು ಕುಸಿತ ಕಂಡಿವೆ. ಮತದಾನೋತ್ತರ ಸಮೀಕ್ಷೆಗಳು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಗಳಿಸಿರುವುದು ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ.

ADANI GROUP SHARES  SHARES TUMBLE  LOK SABHA ELECTION RESULT 2024
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jun 4, 2024, 4:37 PM IST

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬಂದ ಹಿನ್ನೆಲೆಯಲ್ಲಿ ಇಂದು ಅದಾನಿ ಸಮೂಹದ ಷೇರುಗಳು ಕುಸಿತ ಕಂಡಿವೆ. ಅದಾನಿ ಕಂಪೆನಿಯ ಷೇರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಎನ್‌ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಇಂದಿನ ದಿನದ ವಹಿವಾಟಿನ ಒಂದು ಹಂತದಲ್ಲಿ ಅದಾನಿ ಪೋರ್ಟ್ಸ್ ಷೇರುಗಳು ಶೇ.20ರಷ್ಟು ಕುಸಿದರೆ, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ.19.80ರಷ್ಟು, ಅದಾನಿ ಪವರ್ ಶೇರುಗಳು ಶೇ.19.76ರಷ್ಟು, ಅಂಬುಜಾ ಸಿಮೆಂಟ್ಸ್ ಶೇ.19.20ರಷ್ಟು ನಷ್ಟ ಕಂಡವು. ಅದಾನಿ ಗ್ರೂಪ್‌ನ ಮೂಲ ಕಂಪೆನಿಯಾದ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.19.13ರಷ್ಟು ಕುಸಿದಿವೆ. ಅದಾನಿ ಟೋಟಲ್ ಗ್ಯಾಸ್ ಶೇ.18.55, ಅದಾನಿ ಗ್ರೀನ್ ಎನರ್ಜಿ ಶೇ.18.31, ಎನ್​ಡಿಟಿವಿ ಶೇ.15.65, ಎಸಿಸಿ ಶೇ.14.49 ಮತ್ತು ಅದಾನಿ ವಿಲ್ಮರ್ ಶೇ.9.81 ಹಣ ಕಳೆದುಕೊಂಡಿವೆ.

ಎಕ್ಸಿಟ್ ಪೋಲ್‌ಗಳ ಪರಿಣಾಮ ನಿನ್ನೆಯ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದವು. ಇಂದು ಬಿಎಸ್‌ಇ ಸೆನ್ಸೆಕ್ಸ್ 4,389.73 ಅಂಕ ಕಳೆದುಕೊಂಡು 72,079.05ಕ್ಕೆ ವಹಿವಾಟು ನಡೆಸಿತು. ನಿಫ್ಟಿ 1,379.4 ಅಂಕಗಳ ಕುಸಿತದೊಂದಿಗೆ 21884.50 ಸಮೀಪ ವಹಿವಾಟು ನಡೆಸಿತು. ಅದಾನಿ ಗ್ರೂಪ್ ಕಂಪೆನಿಗಳ ಷೇರುಗಳು ನಿನ್ನೆಯ ವಹಿವಾಟಿನಲ್ಲಿ ಉತ್ತಮ ಗಳಿಕೆ ಕಂಡಿದ್ದವು.

ಇದನ್ನೂ ಓದಿ: ನಿರೀಕ್ಷೆಗಿಂತ ಬಿಜೆಪಿಗೆ ಹಿನ್ನಡೆ: ಷೇರು ಮಾರುಕಟ್ಟೆ ಭಾರಿ ಕುಸಿತ: 3 ಸಾವಿರ ಅಂಕ ಕಳೆದುಕೊಂಡ ಸೆನ್ಸೆಕ್ಸ್​ - Lok Sabha Election Results 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.