ETV Bharat / bharat

ಆಂಧ್ರ ಸಿಎಂ ಜಗನ್​ಗೆ ಹಿನ್ನಡೆ: ಮತ್ತೊಬ್ಬ ಸಂಸದ ರಾಜೀನಾಮೆ, ಸಚಿವೆ ರೋಜಾ ಮೇಲೆ ವಂಚನೆ ಆರೋಪ

author img

By ETV Bharat Karnataka Team

Published : Jan 23, 2024, 6:25 PM IST

ವೈಎಸ್​ಆರ್​ಸಿಪಿ ಪಕ್ಷದಲ್ಲಿನ ನಡವಳಿಕೆಗೆ ಬೇಸತ್ತು ಮತ್ತೊಬ್ಬ ಸಂಸದ ರಾಜೀನಾಮೆ ನೀಡಿದ್ದಾರೆ. ಇತ್ತ, ಸಚಿವೆ ರೋಜಾ ಮೇಲೆ ವಂಚನೆ ಆರೋಪ ಕೇಳಿಬಂದಿದೆ.

ಸಚಿವೆ ರೋಜಾ ಮೇಲೆ ವಂಚನೆ ಆರೋಪ
ಸಚಿವೆ ರೋಜಾ ಮೇಲೆ ವಂಚನೆ ಆರೋಪ

ಅಮರಾವತಿ (ಆಂಧ್ರಪ್ರದೇಶ) : ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಪಕ್ಷದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳಿಂದ ಬೇಸತ್ತಿರುವ ಸಂಸದ ಲಾವು ಶ್ರೀಕೃಷ್ಣ ದೇವರಾಯ ಅವರು ಪಕ್ಷ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ. ಇನ್ನೊಂದೆಡೆ ಸಚಿವೆ ರೋಜಾ ಅವರ ಮೇಲೆ 40 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪ ಕೇಳಿಬಂದಿದೆ.

ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿರುವ ಸಿಎಂ ಜಗನ್​ಮೋಹನ್​ರೆಡ್ಡಿ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಇತ್ತ ಅವರದ್ದೇ ಪಕ್ಷದ ಕೆಲ ನಾಯಕರು ಬೇಸರಿಸಿಕೊಂಡು ಪಕ್ಷದಿಂದ ಹೊರಬರುತ್ತಿದ್ದಾರೆ. ಇನ್ನೂ ಕೆಲವರು ತಮಗೆ ಮುಂದಿನ ಬಾರಿ ಅವಕಾಶ ಸಿಗುವುದಿಲ್ಲ ಎಂದರಿತು ಈಗಲೇ ಮತ್ತೊಂದು ಪಕ್ಷಕ್ಕೆ ಜಂಪ್​ ಆಗುತ್ತಿದ್ದಾರೆ. ಇದು ವೈಎಸ್​ಆರ್​ಸಿಗೆ ಹಿನ್ನಡೆ ತರುತ್ತಿದೆ.

ಸಂಸದ ಲಾವು ಶ್ರೀಕೃಷ್ಣ ರಾಜೀನಾಮೆ: ವೈಎಸ್‌ಆರ್‌ಸಿಪಿ ಸಂಸದ ಲಾವು ಶ್ರೀಕೃಷ್ಣ ದೇವರಾಯ ಅವರು ಸಂಸದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದಲ್ಲಿ ಕೆಲ ಕಾಲದಿಂದ ಬದಲಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ನೀಡಿದ್ದಾಗಿ ಅವರು ಹೇಳಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಸದ್ಯ ರಾಜಕೀಯ ಅನಿಶ್ಚಿತತೆ ಇದೆ. ಸಂಸದ ಸ್ಥಾನಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷ ಚಿಂತನೆ ನಡೆಸಿದೆ. ಹೀಗಾಗಿ ನಾನು ಪಕ್ಷದಿಂದ ಹೊರಬಂದಿದ್ದೇನೆ ಎಂದು ದೇವರಾಯಲು ತಿಳಿಸಿದ್ದಾರೆ.

ಸಚಿವೆ ರೋಜಾ ಮೇಲೆ ₹40 ಲಕ್ಷ ವಂಚನೆ ಆರೋಪ: ಪ್ರವಾಸೋದ್ಯಮ ಸಚಿವೆ, ನಟಿ ರೋಜಾ ಮೇಲೆ ವಂಚನೆ ಆರೋಪ ಕೇಳಿಬಂದಿದೆ. ನಗರಸಭೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ತಮಗೆ ಮೋಸ ಮಾಡಿದ್ದಾರೆ ಎಂದು ಪುರಸಭಾ ಸದಸ್ಯೆ ಭುವನೇಶ್ವರಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪುರಸಭೆ ಅಧ್ಯಕ್ಷ ಸ್ಥಾನವನ್ನು ಕೊಡಿಸುವುದಾಗಿ ಸಚಿವೆ ರೋಜಾ ಅವರು ಭರವಸೆ ನೀಡಿದ್ದರು. ಅದರಂತೆ ಅವರಿಗೆ ಹಲವು ಕಂತುಗಳಲ್ಲಿ 40 ಲಕ್ಷ ರೂಪಾಯಿ ಸಂದಾಯ ಮಾಡಿದ್ದೇವೆ. ಆದರೆ, ಈವರೆಗೂ ಅಧಿಕಾರ ಕೊಡಿಸಿಲ್ಲ ಎಂದು ದೂರಿದರು.

ಎಲ್ಲ ಅರ್ಹತೆ ಇರುವ ನನಗೆ ಅಧಿಕಾರ ನೀಡದೆ ಹಣ ವಸೂಲಿ ಮಾಡಿ ವಂಚಿಸಲಾಗಿದೆ. 2 ವರ್ಷಗಳ ಹಿಂದೆಯೇ ಹಣವನ್ನು ನೀಡಿದ್ದೇವೆ. ಈ ಬಗ್ಗೆ ಎಲ್ಲೂ ಮಾಹಿತಿ ಹಂಚಿಕೊಂಡಿರಲಿಲ್ಲ. ಈಗ ಅಧಿಕಾರ ಕೊಡಿಸಲು ಸಾಧ್ಯವಾಗದ ಕಾರಣ, ತಮಗೆ ನೀಡಿದ ಹಣ ವಾಪಸ್​ ಕೊಡಿಸಬೇಕು ಎಂದು ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸೀತಾಮಾತೆಯನ್ನು ಸ್ಮರಿಸದ ಬಿಜೆಪಿ ಮಹಿಳಾ ವಿರೋಧಿ: ಮಮತಾ ಬ್ಯಾನರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.