ಅಲಿಗಢ(ಉತ್ತರ ಪ್ರದೇಶ): ಮದುವೆ ಕಾರ್ಯಕ್ರಮಕ್ಕೆ ತೆರಳಲು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಗುಟ್ಕಾ ತಿಂದು ಕಿಟಕಿಯಿಂದ ಉಗುಳುತ್ತಿದ್ದಾಗ ತಲೆಗೆ ವಿದ್ಯುತ್ ಕಂಬ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದ ಅಲಿಘಡದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ.
ಸಹ ಪ್ರಯಾಣಿಕರು ದುರ್ಘಟನೆಗೂ ಮುನ್ನ ಯುವಕನಿಗೆ ಎಚ್ಚರಿಕೆ ನೀಡಿದ್ದರು. ಆದರೆ ಆತ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದಾನೆ ಎಂದು ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲಿಘಡದ ಹರ್ದುವಾಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮೂದ್ಪುರ ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಪಹಾಸು ಗ್ರಾಮದ ಸುಮಿತ್ (24) ಮೃತಪಟ್ಟ ಯುವಕ. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
''ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಮನೆಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸುಮಿತ್ ಕೂಲಿ ಕೆಲಸ ಮಾಡುತ್ತಿದ್ದ'' ಎಂದು ಮೃತನ ಸಹೋದರ ಜಗವೀರ್ ತಿಳಿಸಿದರು.