ETV Bharat / bharat

ಇಂದು ವಿಶ್ವ ಹಾವು ದಿನ: ಸರ್ಪಗಳ ಬಗ್ಗೆ ನೀವು ತಿಳಿಯಲೇಬೇಕಾದ ಹಲವು ಸಂಗತಿಗಳು ಇಲ್ಲಿವೆ! - World Snake Day 2024 - WORLD SNAKE DAY 2024

ಇಂದು ವಿಶ್ವ ಹಾವು ದಿನ. ಪ್ರಪಂಚದಾದ್ಯಂತದ ವಿವಿಧ ಪ್ರಭೇದದ ಹಾವುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುತ್ತದೆ.

World Snake Day 2024
ವಿಶ್ವ ಹಾವು ದಿನ (ANI)
author img

By ETV Bharat Karnataka Team

Published : Jul 16, 2024, 10:08 AM IST

ಪ್ರಪಂಚದಾದ್ಯಂತದ ಇಂದು (ಜುಲೈ 16) ವಿಶ್ವ ಹಾವು ದಿನ ಆಚರಿಸಲಾಗುತ್ತದೆ. ವಿವಿಧ ಪ್ರಭೇದದ ಹಾವುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಒತ್ತು ನೀಡುತ್ತದೆ. ಈವರೆಗೆ ಸುಮಾರು 3,789 ಪ್ರಕಾರದ ಹಾವುಗಳ ಪ್ರಭೇದಗಳನ್ನು ಗುರುತಿಸಲಾಗಿದೆ. ವಿಶ್ವ ಹಾವು ದಿನವು ಪರಿಸರದ ಸಮತೋಲನ ಕಾಪಾಡುವಲ್ಲಿ ಮತ್ತು ಹಾವುಗಳ ಸಂರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸುವಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ.

ಹಾವುಗಳ ಕುರಿತ ನಕಾರಾತ್ಮಕ ಗ್ರಹಿಕೆ ಮತ್ತು ಪುರಾಣಗಳ ಹೊರತಾಗಿಯೂ, ಇಲಿಗಳ ನಿಯಂತ್ರಿಸುವಲ್ಲಿ ಮತ್ತು ಅವುಗಳಿಂದ ಹರಡುವು ರೋಗಗಳನ್ನು ತಡೆಗಟ್ಟುವಲ್ಲಿ ಹಾವುಗಳು ಅತ್ಯಗತ್ಯ. ಭಾರತವು ಸುಮಾರು 300 ಹಾವು ಪ್ರಭೇದಗಳಿಗೆ ನೆಲೆಯಾಗಿದೆ. ವಿಶ್ವ ಹಾವು ದಿನವು ಹಾವು ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪೂರಕವಾಗಿದೆ.

ವಿಶ್ವ ಹಾವು ದಿನದ ಇತಿಹಾಸ: ವಿಶ್ವ ಹಾವು ದಿನವನ್ನು ಯಾವಾಗಿನಿಂದ ಆಚರಣೆ ಮಾಡಿಕೊಂಡುಬರಲಾಗುತ್ತದೆ ಎಂಬುದನ್ನು ದಾಖಲಿಸಲ್ಪಟ್ಟಿಲ್ಲ. ಆದರೆ, ಭಾರತದಲ್ಲಿ ಈ ಬಗ್ಗೆ ಹೊಂದಿರುವ ಮಹತ್ವವನ್ನು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪುರಾಣಗಳಿಂದ ಗುರುತಿಸಬಹುದು. ಭಾರತೀಯ ಪುರಾಣಗಳಲ್ಲಿ ನಾಗಗಳು ಎಂದೂ ಕರೆಯಲ್ಪಡುವ ಹಾವುಗಳನ್ನು ಪವಿತ್ರ ಜೀವಿಗಳೆಂದು ಗುರುತಿಸಲಾಗಿದೆ.

ನಾಗರಹಾವು, ಕಾಳಿಂಗ ಸರ್ಪ ಮತ್ತು ರಸ್ಸೆಲ್ಸ್ ವೈಪರ್ ಸೇರಿದಂತೆ ಭಾರತದಲ್ಲಿ ಕಂಡುಬರುವ ವಿವಿಧ ಹಾವಿನ ಜಾತಿಗಳನ್ನು ಗಮನಿಸಿದರೆ, ಈ ಆಚರಣೆಯು ಆವಾಸಸ್ಥಾನದ ನಷ್ಟ ಮತ್ತು ಮಾನವ-ಪ್ರಾಣಿ ಸಂಘರ್ಷದಿಂದಾಗಿ ಈ ಹಾವುಗಳ ಜನಸಂಖ್ಯೆಯು ಕ್ಷೀಣಿಸುತ್ತಿರುವುದನ್ನು ಕಾಣಬಹುದು.

ಇತ್ತೀಚಿನ ವರ್ಷಗಳಲ್ಲಿ ಹಾವಿನ ರಕ್ಷಣೆ ಮತ್ತು ಪುನರ್ವಸತಿ ಮುಂತಾದ ಉಪಕ್ರಮಗಳಿಂದ ಅನೇಕ ಹಾವುಗಳ ಜೀವ ಉಳಿಸುವಲ್ಲಿ ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ದಿನ ಸಹಕಾರಿಯಾಗಿದೆ. ಭಾರತದಲ್ಲಿ ಜಾಗೃತಿ ಅಭಿಯಾನಗಳು, ಹಾವು ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಾಗಾರಗಳು ಮತ್ತು ಪ್ರದರ್ಶನಗಳಂತಹ ವಿವಿಧ ಶೈಕ್ಷಣಿಕ ಮತ್ತು ಸಂರಕ್ಷಣಾ ಚಟುವಟಿಕೆಗಳ ಮೂಲಕ ವಿಶ್ವ ಹಾವು ದಿನವನ್ನು ಆಚರಿಸಲಾಗುತ್ತದೆ.

ಈ ಕಾರ್ಯಕ್ರಮಗಳ ಮೂಲಕ ಪರಿಸರ ವ್ಯವಸ್ಥೆಯಲ್ಲಿ ಹಾವುಗಳು ವಹಿಸುವ ಪ್ರಮುಖ ಪಾತ್ರ, ಅವುಗಳ ಸರಿಯಾದ ನಿರ್ವಹಣೆ ಮತ್ತು ಅವುಗಳ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ತಿಳಿಸುವ ಉದ್ದೇಶ ಹೊಂದಿದೆ. ನೇಚರ್ ಕ್ಲಬ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ. ಈ ಸರೀಸೃಪಗಳ ಬಗ್ಗೆ ಉತ್ತಮ ಅರಿವು ಮೂಡಿಸಲು ವನ್ಯಜೀವಿ ತಜ್ಞರು ಮತ್ತು ಉರಗ ತಜ್ಞರು ನೇತೃತ್ವದಲ್ಲಿ ಸಮಾವೇಶಗಳನ್ನು ನಡಸಲಾಗುತ್ತದೆ.

ವಿಶ್ವ ಹಾವು ದಿನದ ಮಹತ್ವ: ಹಾವುಗಳು ಮಾರುವೇಷದಲ್ಲಿ ಪ್ರಾವೀಣ್ಯತೆ, ನುರಿತ ಬೇಟೆ ಮತ್ತು ತಿನ್ನುವುದರಲ್ಲಿ ಚಾಂಪಿಯನ್. ಈ ಮಾಂಸಾಹಾರಿ ಸರೀಸೃಪಗಳ ಬಗ್ಗೆ ನಿಮಗೆ ತಿಳಿಯದಿರುವ ಅದ್ಭುತ ಸಂಗತಿಗಳು ಇಲ್ಲಿವೆ.

  • ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಸುಮಾರು 600 ಜಾತಿಯ ಹಾವುಗಳು ವಿಷಪೂರಿತವಾಗಿವೆ. ಇದರಲ್ಲಿ ಕೇವಲ 200 ಪ್ರಕಾರ ಹಾವುಗಳು ಮಾನವನನ್ನು ಕೊಲ್ಲಲು ಅಥವಾ ಗಾಯಗೊಳಿಸುವ ಸಾಮರ್ಥ್ಯ ಹೊಂದಿದೆ.
  • ಹಾವುಗಳು ತಮ್ಮ ತಲೆಗಿಂತ ಶೇ 75ರಿಂದ 100ರಷ್ಟು ದೊಡ್ಡದಾದ ಪ್ರಾಣಿಗಳನ್ನು ನುಂಗಬಲ್ಲವು.
  • ಇತ್ತೀಚಿನ ದತ್ತಾಂಶದ ಪ್ರಕಾರ, ಒಟ್ಟು 3,789 ಹಾವಿನ ಪ್ರಭೇದಗಳಿವೆ. ಇದು ಹಲ್ಲಿಗಳ ನಂತರ ಸರೀಸೃಪಗಳ ಎರಡನೇ ದೊಡ್ಡ ಗುಂಪಾಗಿದೆ. ಇವುಗಳಲ್ಲಿ 30 ವಿವಿಧ ಮುಖ್ಯ ಪ್ರಭೇದಗಳು ಮತ್ತು ಹಲವು ಉಪ ಪ್ರಭೇದಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಸರಿಸುಮಾರು 140 ಪ್ರಭೇದದ ಹಾವುಗಳು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ.
  • ಭಾರತೀಯ ಸಂಸ್ಕೃತಿಯಲ್ಲಿ ನಾಗರಹಾವುಗಳನ್ನು ಸರ್ಪಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಇವುಗಳು ನಂಬಲಾಗದ ಶಕ್ತಿಗಳನ್ನು ಹೊಂದಿದೆ ಎಂದು ನಂಬಿಕೆಯಿದೆ. ಹಿಂದೂ ಪುರಾಣಗಳಲ್ಲಿ ನಾಗರಹಾವನ್ನು ಸಾಮಾನ್ಯವಾಗಿ ನಾಗ ಎಂದು ಕರೆಯಲಾಗುತ್ತದೆ. ಅನೇಕ ಕಥೆಗಳು ಈ ಶಕ್ತಿಯುತ ಜೀವಿಗಳ ಸುತ್ತ ಸುತ್ತುತ್ತವೆ. ಕೆಲವೊಮ್ಮೆ ಈ ನಾಗವನ್ನು ಅರ್ಧ ಮಾನವ ಮತ್ತು ಅರ್ಧ ಹಾವು ಎಂದು ಚಿತ್ರಿಸಲಾಗುತ್ತದೆ.
  • ಹಿಂದೂ ಧರ್ಮದ ಪ್ರಮುಖ ದೇವರಲ್ಲಿ ಒಬ್ಬರಾದ ಭಗವಾನ್ ಶಿವನ ಕುತ್ತಿಗೆಯಲ್ಲಿ ನಾಗರಹಾವು ಇರುವ ಚಿತ್ರಿ ಕಂಡುಬರುತ್ತದೆ. ನಾಗರಹಾವುಗಳು ಸಾವು ಮತ್ತು ಪುನರ್ಜನ್ಮದ ಮೇಲಿನ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಪುರಾಣಗಳಿಂದ ತಿಳಿದುಬರುತ್ತದೆ.
  • ಆಶ್ಚರ್ಯ ಎಂದರೆ, ಹಾವುಗಳಿಗೆ ಕಣ್ಣುರೆಪ್ಪೆಗಳಿಲ್ಲ. ಇದರರ್ಥ ಹಾವುಗಳು ಕಣ್ಣುಗಳನ್ನು ಮಿಟುಕಿಸುವುದಿಲ್ಲ ಮತ್ತು ತಮ್ಮ ಕಣ್ಣುಗಳನ್ನು ತೆರೆದು ಮಲಗುತ್ತವೆ. ಕಣ್ಣುರೆಪ್ಪೆಗಳ ಬದಲಿಗೆ ಅವುಗಳನ್ನು ರಕ್ಷಿಸಲು ಪ್ರತಿ ಕಣ್ಣಿಗೆ ತೆಳುವಾದ ಪೊರೆಯನ್ನು ಜೋಡಿಸಲಾಗಿದೆ. ಅದನ್ನು ಮೆಂಬರೇನ್ 'ಬ್ರಿಲ್ಲೆ' ಎಂದು ಕರೆಯಲಾಗುತ್ತದೆ. ಜರ್ಮನ್ ಭಾಷೆಯಲ್ಲಿ 'ಬ್ರಿಲ್ಲೆ' ಅಂದ್ರೆ ಕನ್ನಡಕ ಎಂದರ್ಥ.
  • ಹಾವುಗಳು ಮೂಗಿನ ಹೊಳ್ಳೆಗಳನ್ನು ಹೊಂದಿರುತ್ತವೆ. ಆದರೆ, ಅವುಗಳನ್ನು ವಾಸನೆ ಗ್ರಹಿಸಲು ಬಳಸುವುದಿಲ್ಲ. ಬದಲಿಗೆ ಹಾವುಗಳು ತಮ್ಮ ನಾಲಿಗೆಯಿಂದ ವಾಸನೆಯನ್ನು ಗ್ರಹಿಸುತ್ತವೆ. ಜೊತೆಗೆ ಅವುಗಳ ಬಾಯಿಯಲ್ಲಿರುವ ಜಾಕೋಬ್ಸನ್ ಅಂಗವನ್ನು ಬಳಸುತ್ತವೆ. ಹಾವುಗಳ ವಾಸನೆ ಗ್ರಹಿಕೆ ಸಾಮರ್ಥ್ಯ ಉತ್ತಮವಾಗಿದೆ. ಇದನ್ನು ಸ್ಟಿರಿಯೊದಲ್ಲಿ ವಾಸನೆ ಎಂದು ವಿವರಿಸಲಾಗುತ್ತದೆ. ಹಾವುಗಳು ಕವಲೊಡೆದ ನಾಲಿಗೆಯನ್ನು ಹೊಂದಿವೆ. ಹಾವುಗಳ ಸಮೀಪ ವಿವಿಧ ರಾಸಾಯನಿಕ ವಾಸನೆ ಬಂದರೆ, ಅವು ಸುಲಭವಾಗಿ ಗ್ರಹಿಸುತ್ತವೆ.
  • ಹುಲ್ಲಿನ ಮೇಲೆ ಹಾವುಗಳು ಫಾಸ್ಟ್​ ಆಗಿ ಚಲಿಸುತ್ತವೆ. ಏಕೆಂದರೆ ಇದು ಹಾವುಗಳಲ್ಲಿ ಲೊಕೊಮೊಶನ್ ಲಕ್ಷಣವಾಗಿದೆ. ಇದನ್ನು ಲ್ಯಾಟರಲ್ ಅಂಡ್ಯುಲೇಶನ್ ಎಂದೂ ಕರೆಯುತ್ತಾರೆ. ಆದರೆ, ಹಾವುಗಳು ನಾಲ್ಕು ಇತರ ರೀತಿಯ ಚಲನೆಯನ್ನು ಹೊಂದಿವೆ. ಉದಾಹರಣೆಗೆ, ಅರ್ಬೊರಿಯಲ್ ಹಾವುಗಳು ಕನ್ಸರ್ಟಿನಾ ಎಂದು ಕರೆಯಲ್ಪಡುವ ಏಳು ಪಟ್ಟು ಹೆಚ್ಚು ಶಕ್ತಿಯನ್ನು ಅಂದ್ರೆ, ಲೊಕೊಮೊಶನ್ ಅನ್ನು ಗುಣಲಕ್ಷಣವನ್ನು ಹೊಂದಿವೆ. ಹಾವು ನಯವಾದ ಮೇಲ್ಮೈಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ವಿಶೇಷವಾದ ಲೊಕೊಮೊಶನ್ ಅನ್ನು ಸಹ ಬಳಸಲಾಗುತ್ತದೆ. ಇದನ್ನು ಸ್ಲೈಡ್ ಪುಶಿಂಗ್ ಎಂದು ಕರೆಯಲಾಗುತ್ತದೆ.
  • ಹೆಚ್ಚಿನ ಹಾವುಗಳು ಮೊಟ್ಟೆಗಳನ್ನು ಇಡುತ್ತವೆ. ಆದರೆ, ಸಮುದ್ರ ಹಾವುಗಳು ಸೇರಿದಂತೆ ಕೆಲವು ಜಾತಿಗಳು ಮರಿಗಳಿಗೆ ಜನ್ಮ ನೀಡುತ್ತವೆ.
  • ಮಿಲನದ ಅವಧಿಯನ್ನು ಹೊರತುಪಡಿಸಿ ಹಾವುಗಳು ಹೆಚ್ಚಾಗಿ ಒಂಟಿಯಾಗಿರುತ್ತವೆ.
  • ಅಂಟಾರ್ಕ್ಟಿಕಾ ಮತ್ತು ಉತ್ತರ ಮತ್ತು ದಕ್ಷಿಣ ಪೋಲ್​ಗಳ ಹೊರೆಗೆ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಭೂಮಿಯ ಎಲ್ಲೆಡೆ ಹಾವುಗಳು ಕಂಡುಬರುತ್ತವೆ.
  • ಕೆಲವು ಸಮುದ್ರ ಹಾವುಗಳು ತಮ್ಮ ಚರ್ಮದ ಮೂಲಕ ಆಂಶಿಕವಾಗಿ ಉಸಿರಾಡಬಲ್ಲವು. ಇದು ಅವುಗಳಿಗೆ ನೀರಿನ ಅಡಿಯಲ್ಲಿ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ.
  • ಹಾವುಗಳು ಎಲುಬುಗಳನ್ನು ಹೊಂದಿದ್ದು, ಇವು 1,200ರವರೆಗೆ ಮೂಳೆಗಳು ಹೊಂದಿರಬಹುದು.
  • ಹಾವುಗಳು (ರ್‍ಯಾಟಲ್​ಸ್ನೇಕ್ ರ್‍ಯಾಟಲ್ಸ್) ಕೆರಾಟಿನ್ ಅನ್ನು ಹೊಂದಿರುತ್ತವೆ. ಕೆರಾಟಿನ್ ಮಾನವನ ಕೂದಲು ಮತ್ತು ಉಗುರುಗಳಲ್ಲಿ ಕಂಡುಬರುತ್ತದೆ.
  • ಕೆಲವು ಹಾವುಗಳು ಹೆಣ್ಣು ಶಕ್ತಿಯನ್ನು ಹೊಂದಿವೆ. ಅವುಗಳಲ್ಲಿ ಚಿಕ್ಕ ಬ್ರಾಹ್ಮಿನಿ ಬ್ಲೈಂಡ್​ಸ್ನೇಕ್ ಅಥವಾ ಫ್ಲವರ್​ಫೊಟ್​ ಸ್ನೇಕ್ ಸೇರಿದ್ದು, ಇವು ಹೆಣ್ಣಿನ ಗುಣ ಹೊಂದಿರುವ ಏಕೈಕ ಹಾವಿನ ಜಾತಿಯಾಗಿದೆ. ಅವುಗಳು ತಮ್ಮದೇ ಆದ ಸಂತಾನೋತ್ಪತ್ತಿ ಮಾಡಬಲ್ಲವು.

ಕರ್ನಾಟಕದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದವರ ಸಂಖ್ಯೆ: ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯ ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಕರ್ನಾಟಕದಲ್ಲಿ 5,418 ಹಾವು ಕಡಿತದ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 36 ಸಾವುಗಳ ಸಂಭವಿಸಿವೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 2024ರ ಫೆಬ್ರವರಿಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. 2030ರ ವೇಳೆಗೆ ಸಾವುಗಳು ಮತ್ತು ಅಂಗವೈಕಲ್ಯ ಸೇರಿದಂತೆ ಹಾವು ಕಡಿತದ ಪ್ರಕರಣಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಕಾಳಿಂಗ ಸರ್ಪ, ಮಲಬಾರ್ ಪಿಟ್ ವೈಪರ್ ಮತ್ತು ಹಂಪ್ ನೋಸ್ಡ್ ಪಿಟ್ ವೈಪರ್​ನಂತಹ ಹಲವಾರು ವಿಷಕಾರಿ ಹಾವುಗಳಿಗೆ ರಾಜ್ಯವು ನೆಲೆಯಾಗಿದೆ.

ಹಾವು ಕಡಿತದ ಪ್ರಕರಣಗಳನ್ನು ಕಡಿಮೆ ಮಾಡಲು ವಿವಿಧ ಸಂಸ್ಥೆಗಳನ್ನು ಒಳಗೊಂಡ ಸಂಘಟಿತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. 172 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಜೊತೆಗೆ ಕೆಲವು ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳೆಂದು ಗುರುತಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉನ್ನತ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಅಗತ್ಯ ಔಷಧಿ ಲಭ್ಯವಿರುತ್ತದೆ.

ಕರ್ನಾಟಕದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ (ಜನವರಿಯಿಂದ ಜೂನ್‌ವರೆಗೆ) ಒಟ್ಟು 5,418 ಹಾವು ಕಡಿತ ಪ್ರಕರಣಗಳು ಮತ್ತು 36 ಸಾವುಗಳು ವರದಿಯಾಗಿದೆ. 2023ರಲ್ಲಿ 6,596 ಹಾವು ಕಡಿತ ಪ್ರಕರಣಗಳು ಮತ್ತು 19 ಸಾವುಗಳು ಮಾತ್ರ ವರದಿಯಾಗಿದ್ದವು.

ಹಾಸನದಲ್ಲಿ 419 ಪ್ರಕರಣಗಳು ದಾಖಲಾಗಿದ್ದರೆ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆಯಲ್ಲಿ ಕ್ರಮವಾಗಿ 373 ಮತ್ತು 369 ಪ್ರಕರಣಗಳು ವರದಿಯಾಗಿವೆ. ತುಮಕೂರು ಮತ್ತು ಕೊಪ್ಪಳದಲ್ಲಿ ಅತಿ ಹೆಚ್ಚು ಹಾವು ಕಡಿತದ ಸಾವುಗಳು (ತಲಾ ಐದು ಪ್ರಕರಣಗಳು) ದಾಖಲಾಗಿವೆ. ನಂತರ ಚಿತ್ರದುರ್ಗದಲ್ಲಿ ನಾಲ್ಕು ಮತ್ತು ಉತ್ತರ ಕನ್ನಡದಲ್ಲಿ ಮತ್ತು ಮೂರು ಸಾವಿನ ಪ್ರಕರಣಗಳು ವರದಿಯಾಗಿವೆ.

ಕ್ರಿಯಾ ಯೋಜನೆ: ಕರ್ನಾಟಕದಲ್ಲಿ ಹಾವು ಪ್ರಬೇಧಗಳ ವೈವಿಧ್ಯತೆ, ಸವಾಲುಗಳನ್ನು ಎದುರಿಸಲು ಕ್ರಿಯಾ ಯೋಜನೆ ಅಗತ್ಯವಾಗಿದೆ ಎಂದು ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಜ್ಯ ಕ್ರಿಯಾ ಯೋಜನೆ (SAPSE) ಕುರಿತು ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಹಾವು ಕಡಿತದ ಘಟನೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕರ್ನಾಟಕವು ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. 2030ರ ವೇಳೆಗೆ ಹಾವು ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಅಂಗವೈಕಲ್ಯಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವುದು ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ADSI ಪ್ರಕಾರ ಹಾವು ಕಡಿತದ ಸಾವಿನ ಪ್ರಕರಣಗಳು (2018-2022)

ವರ್ಷಗಾಯಗೊಂಡಿರುವರ ಸಂಖ್ಯೆ ಮೃತಪಟ್ಟವರ ಸಂಖ್ಯೆ
2018708962
2019399224
2020629822
20216410382
20223110096

Source:ADSI REPORT

ಕರ್ನಾಟಕದಲ್ಲಿ ADSI ಪ್ರಕಾರ ಹಾವು ಕಡಿತದ ಸಾವಿನ ಪ್ರಕರಣಗಳು (2018-2022)

ವರ್ಷಗಾಯಗೊಂಡಿರುವರ ಸಂಖ್ಯೆಮೃತಪಟ್ಟವರ ಸಂಖ್ಯೆ
20182561
20190614
20200636
20210698
20220688

Source:ADSI REPORT

ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ: ಹೆಚ್ಚಿನ ಹಾವುಗಳು ಜನರಿಗೆ ಅಪಾಯಕಾರಿ ಅಲ್ಲ. ಪ್ರಪಂಚದಾದ್ಯಂತ ಕೇವಲ ಶೇ15 ಮತ್ತು ಅಮೆರಿಕದಲ್ಲಿ ಶೇ 20ರಷ್ಟು ಹಾವುಗಳು ತುಂಬಾ ವಿಷಕಾರಿಯಾಗಿವೆ. ಈ ಹಾವುಗಳ ಕಚ್ಚಿದರೆ, ವ್ಯಕ್ತಿ ಬೇಗ ಸಾವನ್ನಪ್ಪುತ್ತಾನೆ. ಉತ್ತರ ಅಮೆರಿಕಾದಲ್ಲಿ ಇವುಗನ್ನು ರ್‍ಯಾಟಲ್​ಸ್ನೇಕ್, ಕೋರಲ್ ಹಾವು, ವಾಟರ್​ ಮೊಕಾಸಿನ್ ಕಾಟನ್‌ಮೌತ್, ಕಾಪರ್‌ಹೆಡ್ ಎಂದೂ ಕರೆಯುತ್ತಾರೆ. ಇವುಗಳ ಕಡಿತವು ಗಂಭೀರ ಗಾಯಗಳಿಗೆ ಕಾರಣವಾಗಬಹುದು ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು.

ವಿಷಪೂರಿತ ಹಾವು ನಿಮಗೆ ಕಚ್ಚಿದರೆ, ತಕ್ಷಣವೇ 911 ಅಥವಾ ನಿಮ್ಮ ಸ್ಥಳೀಯ ತುರ್ತು ಸಂಖ್ಯೆಗೆ ಕರೆ ಮಾಡಿ, ವಿಶೇಷವಾಗಿ ಕಚ್ಚಿದ ಪ್ರದೇಶವು ಬಣ್ಣವನ್ನು ಬದಲಾಗುತ್ತದೆ. ಊದಿಕೊಂಡಿರುತ್ತದೆ. ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅನೇಕ ತುರ್ತು ವಿಭಾಗಗಳಲ್ಲಿ ಆಂಟಿವೆನಮ್ ಔಷಧ ಇರುತ್ತದೆ. ಅಲ್ಲಿ ನಿಮಗೆ ಸಹಾಯ ಮಾಡಬಹುದು.

ಹಾವು ಕಚ್ಚಿದಾಗ ಸಾಧ್ಯವಾದರೆ ಈ ಕ್ರಮಗಳನ್ನು ಪಾಲಿಸಿ:

  • ಹಾವಿನಿಂದ ದೂರ ಸರಿಯಿರಿ.
  • ನಿಮ್ಮ ಹತ್ತಿರದಲ್ಲಿ ಹಾವು ಇದ್ದರೆ ಗದ್ದಲ ಮಾಡದೆ ಶಾಂತವಾಗಿರಿ.
  • ಹಾವು ಕಚ್ಚಿದ ಭಾಗದಲ್ಲಿ ಊತ ಪ್ರಾರಂಭವಾಗುವ ಮೊದಲು ಯಾವುದೇ ಆಭರಣಗಳು, ಕೈಗಡಿಯಾರಗಳು ಅಥವಾ ಬಿಗಿಯಾದ ಬಟ್ಟೆಗಳನ್ನು ತೆಗೆದುಹಾಕಿ.
  • ಹಾವು ಕಚ್ಚಿದ ಸಮಯದಲ್ಲಿ ಭಯ ಪಡಬಾರದು, ಆರಾಮದಾಯಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ.
  • ಸೋಪ್ ಮತ್ತು ನೀರಿನಿಂದ ಕಚ್ಚಿದ ಭಾಗವನ್ನು ಸ್ವಚ್ಛಗೊಳಿಸಿ. ಸ್ವಚ್ಛ, ಒಣ ಬ್ಯಾಂಡೇಜ್‌ನಿಂದ ಅದನ್ನು ಸುತ್ತಿ ಅಥವಾ ಸಡಿಲವಾಗಿ ಕಟ್ಟಿಕೊಳ್ಳಿ.

ಎಚ್ಚರಿಕೆ ಕ್ರಮಗಳು:

  • ಟೂರ್ನಿಕೆಟ್ ಅಥವಾ ಐಸ್ ಬಳಸಬೇಡಿ.
  • ಕಚ್ಚುದ ಭಾಗವನ್ನು ಕತ್ತರಿಸಬೇಡಿ ಅಥವಾ ವಿಷವನ್ನು ತೆಗೆದುಹಾಕಲು ಪ್ರಯತ್ನಿಸಬೇಡಿ.
  • ಕೆಫೀನ್ ಅಥವಾ ಆಲ್ಕೋಹಾಲ್ ಕುಡಿಯಬೇಡಿ.
  • ಆಸ್ಪಿರಿನ್, ಐಬುಪ್ರೊಫೇನ್ (ಅಡ್ವಿಲ್, ಮೋಟ್ರಿನ್ ಐಬಿ, ಇತರೆ) ಅಥವಾ ನ್ಯಾಪ್ರೋಕ್ಸೆನ್ ಸೋಡಿಯಂ (ಅಲೆವ್) ನಂತಹ ನೋವು ನಿವಾರಕ ಔಷಧವನ್ನು ತೆಗೆದುಕೊಳ್ಳಬೇಡಿ. ಹಾಗೆ ಮಾಡುವುದರಿಂದ ನಿಮ್ಮ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು.
  • ಹಾವನ್ನು ಹಿಡಿಯಲು ಅಥವಾ ಬಲೆಗೆ ಬೀಳಿಸಲು ಪ್ರಯತ್ನಿಸಬೇಡಿ. ಅದರ ಬಣ್ಣ ಮತ್ತು ಆಕಾರವನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನೀವು ಹಾವಿನ ವಿವರಿಸಬಹುದು. ಸಾಧ್ಯವಾದರೆ ದೂರದಿಂದ ಹಾವಿನ ಚಿತ್ರವನ್ನು ತೆಗೆದುಕೊಳ್ಳಿ. ನಿಮಗೆ ಯಾವ ರೀತಿಯ ಹಾವು ಕಚ್ಚಿದ ಎಂಬುದನ್ನು ತಿಳಿದು ಚಿಕಿತ್ಸೆ ನೀಡಲು ಸಹಾಯ ಆಗುತ್ತದೆ.

ಇದನ್ನೂ ಓದಿ: ಚಂಡೀಪುರ ವೈರಸ್​ಗೆ ನಾಲ್ವರು ಮಕ್ಕಳು ಸಾವು: ಏನಿದು ಸೋಂಕು, ಲಕ್ಷಣಗಳೇನು - ಪರಿಹಾರೋಪಾಯಗಳೇನು? - what is Chandipura virus infection

ETV Bharat Logo

Copyright © 2024 Ushodaya Enterprises Pvt. Ltd., All Rights Reserved.