ETV Bharat / bharat

ಏರ್​ ಇಂಡಿಯಾ ವಿರುದ್ಧ ಪ್ರತಿಭಟನೆಗೆ ಮುಂದಾದ ವಿಧವೆ ಕುಟುಂಬ; ಕಾರಣ ಇದು - AIR INDIA EXPRESS

author img

By PTI

Published : May 14, 2024, 1:49 PM IST

ಟಾಟಾ ಗ್ರೂಪ್​ ಒಡೆತನದ ಏರ್​ ಇಂಡಿಯಾ ಎಕ್ಸ್​ಪ್ರೆಸ್​​​ ವಿಮಾನ ರದ್ದಾದ ಪರಿಣಾಮ ಮಹಿಳೆಯೊಬ್ಬರು ತಾವು ಅನುಭವಿಸಿದ ತುಂಬಲಾರದ ನಷ್ಟದ ಕಥೆ ಇಲ್ಲಿದೆ.

woman-unable-to-see-hospitalised-husband-before-his-death-due-to-ai-express-flight-cancellations
woman-unable-to-see-hospitalised-husband-before-his-death-due-to-ai-express-flight-cancellations (IANS)

ತಿರುವನಂತಪುರ: ಕಳೆದ ವಾರ ಏಕಾಏಕಿ ಏರ್​ ಇಂಡಿಯಾ ಏಕ್ಸ್​ಪ್ರೆಸ್​ ವಿಮಾನ ರದ್ದಾದ ಪರಿಣಾಮ ಹಲವು ಪ್ರಮುಖ ಮಾರ್ಗದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿ, ಜನರು ಸಮಸ್ಯೆಗೆ ಸಿಲುಕಿದ್ದು ಸುಳ್ಳಲ್ಲ. ಈ ಬಗ್ಗೆ ಡಿಜಿಸಿಎ ಕೂಡ ವರದಿಯನ್ನು ಕೇಳಿತ್ತು. ಈ ಪ್ರತಿಭಟನೆಯಿಂದ ಅನೇಕ ಮಂದಿ ತಮ್ಮ ಅಗತ್ಯ ಮೀಟಿಂಗ್​, ಪ್ರವಾಸ, ಕುಟುಂಬವನ್ನು ಸರಿಯಾದ ಸಮಯದಲ್ಲಿ ಸೇರದಂತೆ ಮಾಡಿತು. ಆದರೆ, ಇದರಲ್ಲಿ ನಡೆದ ಮತ್ತೊಂದು ಹೃದಯ ವಿದ್ರಾವಕ ಘಟನೆ ಎಂದರೆ, ಕೇರಳದಲ್ಲಿದ್ದ ಮಹಿಳೆಯೊಬ್ಬರು ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ತನ್ನ ಪತಿಯನ್ನು ಕೊನೆಯಾದಾಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದೀಗ ಪತಿ ಇಹಲೋಹ ತ್ಯಜಿಸಿದ್ದು, ಬಾಳ ಸಂಗಾತಿಯನ್ನು ಅಂತಿಮ ಕ್ಷಣದಲ್ಲಿ ನೋಡಲು ಆಗಲಿಲ್ಲ ಎಂಬ ಕೊರಗು ಮಹಿಳೆಯನ್ನು ಕಾಡುತ್ತಿದೆ. ಇದಕ್ಕೆ ಕಾರಣವಾದ ಏರ್​ ಇಂಡಿಯಾ ವಿರುದ್ಧ ಇದೀಗ ಮಹಿಳೆ ಕುಟುಂಬಸ್ಥರು ದಾವೆ ಹೂಡಲು ಸಜ್ಜಾಗಿದ್ದಾರೆ.

ಏನಿದು ಘಟನೆ: ಕೇರಳದ ತಿರುವನಂತಪುರದ ಅಮೃತ ಎಂಬುವರ ಪತಿ ಒಮನ್​ನಲ್ಲಿ ಐಸಿಯುಗೆ ದಾಖಲಾಗಿದ್ದರು. ವಿಷಯ ತಿಳಿದಾಕ್ಷಣ ಅಮೃತ ಮೇ 8ರಂದು ಏರ್​ ಇಂಡಿಯಾ ಮೂಲಕ ಮಸ್ಕತ್​​ಗೆ ಟಿಕೆಟ್​ ಬುಕ್​ ಮಾಡಿ ವಿಮಾನ ನಿಲ್ದಾಣ ತಲುಪಿದರು. ಆದರೆ, ಅಲ್ಲಿ ವಿಮಾನ ಹಾರಾಟ ರದ್ದಾಗಿತ್ತು. ದಿಕ್ಕು ತೋಚದೆ ಮುಂದಿನ ದಿನದ ಟಿಕೆಟ್​ ಅನ್ನು ಪಡೆದರು. ಆದರೆ, ದುರದೃಷ್ಟವಶಾತ್​ ಆ ದಿನದ ವಿಮಾನ ಹಾರಾಟ ಕೂಡ ರದ್ದಾಯಿತು. ಈ ನಡುವೆ ಅವರ ಪತಿ ಕೂಡ ಸೋಮವಾರ ಒಮನ್​ನಲ್ಲಿ ಸಾವನ್ನಪ್ಪಿದ ಸುದ್ದಿ ತಲುಪಿತು.

ಗಂಡನ ಸ್ಥಿತಿ ಕುರಿತು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಮನವರಿಕೆ ಪ್ರಯತ್ನ ಕೂಡ ನಡೆಸಿ, ಏನಾದರೂ ಮಾಡುವಂತೆ ಮನವಿ ಮಾಡಲಾಯಿತು. ಆದರೆ, ಅವರಿಂದ ಏನು ಮಾಡಲು ಸಾಧ್ಯವಾಗಲೇ ಇಲ್ಲ ಎಂದು ಅಮೃತಾ ತಾಯಿ ತಿಳಿಸಿದ್ದಾರೆ.

ಚೆನ್ನಾಗಿಯೇ ಇದ್ದ ಗಂಡ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ, ಅಂತಿಮ ಕ್ಷಣದಲ್ಲಿ ನನ್ನ ಮತ್ತು ಮಕ್ಕಳನ್ನು ನೋಡಬೇಕು ಎಂದು ಬಯಸಿದರು. ಈ ಹಿನ್ನೆಲೆ ಟಿಕೆಟ್​ ಬುಕ್​​ ಮಾಡಿದ್ದೆವು. ಆದರೆ, ಬುಕ್​ ಮಾಡಿದ ಎರಡು ವಿಮಾನಗಳು ರದ್ದಾದವು. ಏರ್​ಲೈನ್ಸ್​ ಕೂಡ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸುಮ್ಮನಾದರು. ಅಲ್ಲದೇ ಮುಂದಿನ ನಾಲ್ಕು ದಿನ ವಿಮಾನ ಭರ್ತಿಯಾಗಿದ್ದು, ನಮ್ಮಿಂದ ಯಾವುದೇ ಸಹಾಯ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದರು ಎಂದು ಹೇಳಿದರು.

ಟಾಟಾ ಗ್ರೂಪ್​ ಒಡೆತನದ ಏರ್​ ಇಂಡಿಯಾ ಎಕ್ಸ್​ಪ್ರೆಸ್​​​ ಕ್ಯಾಬಿನ್​ ಸಿಬ್ಬಂದಿಗಳು ಏಕಾಏಕಿ ಸಾಮೂಹಿಕ ಅನಾರೋಗ್ಯ ರಜೆ ಹಾಕಿದ ಪರಿಣಾಮ ಮೇ 8 ರಿಂದ ಮೇ 10ರ ವರೆಗೆ 260 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ರಜೆ ಹಾಕಿದ್ದ 25 ಕ್ಯಾಬಿನ್​ ಸಿಬ್ಬಂದಿಯನ್ನು ಸಂಸ್ಥೆ ಉದ್ಯೋಗದಿಂದ ಕಿತ್ತುಹಾಕಿತ್ತು. ಮೇ 12ರಿಂದ ನಿಧಾನವಾಗಿ ವಿಮಾನಗಳು ಕಾರ್ಯಾಚರಣೆ ಆರಂಭಿಸಿದವು.

ಇದನ್ನೂ ಓದಿ: ಸಾಮೂಹಿಕ ಅನಾರೋಗ್ಯ ರಜೆ ಹಾಕಿದ ಸಿಬ್ಬಂದಿ; 70 ಏರ್ ಇಂಡಿಯಾ ವಿಮಾನ ಹಾರಾಟ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.