ETV Bharat / bharat

ಮದುವೆ ಖರ್ಚು ನಮ್ಮಲ್ಲೇ ಹೆಚ್ಚು!: ಭಾರತೀಯ ವಿವಾಹ ಮಾರುಕಟ್ಟೆ ಎಷ್ಟು ಬಿಲಿಯನ್​ $​ ವೆಚ್ಚದ್ದು ಗೊತ್ತಾ? - Weddings In India

ಭಾರತ ವಿಶ್ವದ ಅತಿ ದೊಡ್ಡ ಮದುವೆಯ ತಾಣ. 2023-24ನೇ ಆರ್ಥಿಕ ವರ್ಷದಲ್ಲಿ ಭಾರತೀಯ ವಿವಾಹ ಮಾರುಕಟ್ಟೆ 130 ಶತಕೋಟಿ ಡಾಲರ್​ ತಲುಪಿದೆ ಎಂದು ಜಾಗತಿಕ ವರದಿಯೊಂದು ಹೇಳಿದೆ.

Indias wedding market
ಭಾರತೀಯ ವಿವಾಹ (ಸಾಂದರ್ಭಿಕ ಚಿತ್ರ)
author img

By ETV Bharat Karnataka Team

Published : Jun 25, 2024, 6:29 PM IST

ನವದೆಹಲಿ: ಭಾರತ ಹಲವು ಸಂಪ್ರದಾಯಗಳ ನೆಲೆವೀಡು. ಪ್ರತಿ ಸಮಾಜ, ಸಮುದಾಯಗಳಲ್ಲಿ ಮದುವೆಗೆ ತನ್ನದೇ ಆದ ಪದ್ಧತಿಗಳಿವೆ. ಹೆಣ್ಣು ಮತ್ತು ಗಂಡನ್ನು ಜೊತೆಗೂಡಿಸುವ ಈ ಸಮಾರಂಭ ಅನೇಕ ಕುಟುಂಬಗಳಿಗೆ ಪ್ರತಿಷ್ಠೆಯ ವಿಷಯವೂ ಹೌದು. ಕಾಲ ಕಳೆದಂತೆ ಇದು ದೇಶದ ಆರ್ಥಿಕತೆಯ ಅತಿ ದೊಡ್ಡ ಭಾಗವಾಗಿಯೂ ಬದಲಾಗಿದೆ.

2023-24ನೇ ಆರ್ಥಿಕ ಸಾಲಿನಲ್ಲಿ ಭಾರತೀಯ ಮದುವೆ ಮಾರುಕಟ್ಟೆ 130 ಬಿಲಿಯನ್​ ಡಾಲರ್ ತಲುಪಿದೆ. ಅಂದರೆ, ಅಂದಾಜು 10 ಲಕ್ಷ ಕೋಟಿ ರೂಪಾಯಿ. ಪ್ರತಿ ಮದುವೆಯ ಸರಾಸರಿ ವೆಚ್ಚ 12 ಲಕ್ಷ ರೂಪಾಯಿ. ಅಷ್ಟೇ ಅಲ್ಲ, ಪ್ರತಿ ಕುಟುಂಬದ ವಾರ್ಷಿಕ ಆದಾಯಕ್ಕಿಂತ (4 ಲಕ್ಷ ರೂ.) ವಿವಾಹಕ್ಕೆ ತಗಲುವ ವೆಚ್ಚ ಮೂರು ಪಟ್ಟು ಅಧಿಕ ಎಂದು ಹೊಸ ವರದಿ ಬಹಿರಂಗಪಡಿಸಿದೆ.

ಪ್ರತಿ ವರ್ಷ ಕನಿಷ್ಠ 80 ಲಕ್ಷ ಮದುವೆ: ಜಾಗತಿಕ ಬ್ರೋಕರೇಜ್ ಜೆಫರೀಸ್ ವರದಿ ಪ್ರಕಾರ, ಭಾರತ ವಿಶ್ವದ ಅತಿ ದೊಡ್ಡ ಮದುವೆಯ ತಾಣ. ದೇಶದಲ್ಲಿ ಪ್ರತಿ ವರ್ಷ ಕನಿಷ್ಠ 80 ಲಕ್ಷದಿಂದ 1 ಕೋಟಿ ವಿವಾಹಗಳು ನಡೆಯುತ್ತಿವೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತೀಯ ವಿವಾಹ ಮಾರುಕಟ್ಟೆ 130 ಶತಕೋಟಿ ಡಾಲರ್​ ತಲುಪಿದೆ.

ಮದುವೆ ಖರ್ಚು ನಮ್ಮಲ್ಲೇ ಹೆಚ್ಚು: ಭಾರತದಲ್ಲಿ ವಿವಾಹೋತ್ಸವದ ಖರ್ಚು ಮತ್ತು ಜಿಡಿಪಿ ಅನುಪಾತ ಇತರ ದೇಶಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿದೆ. ಮದುವೆಗಳು ಭಾರತದಲ್ಲಿ ಆಳವಾದ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಹೀಗಾಗಿ ವೆಚ್ಚ ಹೆಚ್ಚಿಸುತ್ತಿದೆ. ಆಗಾಗ್ಗೆ ಆದಾಯ ಮಟ್ಟಗಳಿಗೆ ಇದು ಅಸಮಾನವಾಗಿರುತ್ತವೆ ಎಂದೂ ವರದಿ ಹೇಳಿದೆ.

ಮದುವೆ ಸಂಬಂಧಿತ ಖರ್ಚು, ವಾಸ್ತವವಾಗಿ 130 ಶತಕೋಟಿ ಡಾಲರ್​ಗಳಷ್ಟು ಗಾತ್ರದಲ್ಲಿದೆ. ಆಭರಣಗಳು, ಉಡುಪುಗಳು, ಈವೆಂಟ್ ಮ್ಯಾನೇಜ್ಮೆಂಟ್, ಅಡುಗೆ, ಮನರಂಜನೆ ಹೀಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಇದು ಹರಡಿಕೊಂಡಿದೆ. ಭಾರತದ ವಿವಾಹ ಮಾರುಕಟ್ಟೆ ಅಮೆರಿಕದ (70 ಶತಕೋಟಿ ಡಾಲರ್​) ಮಾರುಕಟ್ಟೆಯ ಗಾತ್ರಕ್ಕಿಂತ ದುಪ್ಪಟ್ಟು ದೊಡ್ಡದು. ಆದರೆ, ಚೀನಾಕ್ಕಿಂತ (170 ಶತಕೋಟಿ ಡಾಲರ್) ಚಿಕ್ಕದು.

ಇದೇ ವೇಳೆ, ವೆಚ್ಚದ ವ್ಯತಿರಿಕ್ತತೆಯು ವಿವಾಹಗಳ ಮೇಲೆ ಇರಿಸಲಾದ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳುತ್ತದೆ. ಅದ್ದೂರಿ ಆಚರಣೆಗಳನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ನಿರೀಕ್ಷೆಯಾಗಿ ನೋಡಲಾಗುತ್ತದೆ ಎಂದು ಜೆಫರೀಸ್ ವರದಿ ಹೇಳುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ವೈರಲ್​ ಆಯ್ತು ಅನಂತ್​ - ರಾಧಿಕಾ ಪ್ರಿ ವೆಡ್ಡಿಂಗ್​ ಫೋಟೋ; ರಾಜಕುಮಾರಿಯಂತೆ ಕಂಗೊಳಿಸಿದ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.