ETV Bharat / bharat

ವಯನಾಡ್ ಭೂಕುಸಿತ ಸಂತ್ರಸ್ತರ ಎಲ್ಲ ರೀತಿಯ ಸಾಲ ಮನ್ನಾ: ಕೇರಳ ಬ್ಯಾಂಕ್​ ಘೋಷಣೆ - Kerala Bank Waives Loans

author img

By ANI

Published : Aug 12, 2024, 5:24 PM IST

ಕೇರಳದ ವಯನಾಡ್ ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡ ಜನರ ಸಾಲ ಮನ್ನಾ ಮಾಡಲು ಕೇರಳ ಬ್ಯಾಂಕ್​ ನಿರ್ಧರಿಸಿದೆ.

ವಯನಾಡ್‌ ಭೂಕುಸಿತದ ವೈಮಾನಿಕ ಚಿತ್ರ
ವಯನಾಡ್‌ ಭೂಕುಸಿತದ ವೈಮಾನಿಕ ಚಿತ್ರ (Video Grab)

ತಿರುವನಂತಪುರಂ(ಕೇರಳ): ಘನಘೋರ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೇರಳದ ವಯನಾಡ್ ಈಗ ಸ್ಮಶಾನ ಮೌನವಾಗಿದೆ. ರಣಭೀಕರ ಭೂಕುಸಿತದಲ್ಲಿ ಪ್ರಾಣ ಉಳಿಸಿಕೊಂಡ ಜನರು ಮನೆ, ಆಸ್ತಿ ಕಳೆದುಕೊಂಡಿದ್ದಾರೆ. ಈಗ ಅವರೆಲ್ಲರೂ ತಮ್ಮ ಜೀವನವನ್ನು ಮತ್ತೆ ಹೊಸದಾಗಿ ಕಟ್ಟಿಕೊಳ್ಳಬೇಕಿದೆ. ಬರಿಗೈಯಲ್ಲಿರುವ ಜನರ ನೆರವಿಗೆ ಕೇರಳ ಬ್ಯಾಂಕ್​ ಮಹತ್ವದ ನಿರ್ಧಾರ ಕೈಗೊಂಡಿದೆ.

ವಯನಾಡ್‌ನ ಚೂರಲ್​​ಮಾಲ ಪ್ರದೇಶವು ತೀವ್ರ ಹಾನಿಗೀಡಾಗಿದೆ. ಇಲ್ಲಿದ್ದ ಊರೇ ಮಾಯವಾಗಿದೆ. ಗುಡ್ಡದ ಮಣ್ಣು, ಕಲ್ಲಿನ ಅವಶೇಷಗಳಡಿ ಮನೆಗಳು, ಹಲವು ಪ್ರಾಣಗಳು ಹೂತು ಹೋಗಿವೆ. ಪ್ರೀತಿಪಾತ್ರರು, ಸೂರನ್ನು ಕಳೆದುಕೊಂಡು ದುಸ್ಥಿತಿಯಲ್ಲಿರುವ ಜನರ ಸಾಲವನ್ನು ಮನ್ನಾ ಮಾಡಲು ಕೇರಳ ಬ್ಯಾಂಕ್​ ನಿರ್ಧರಿಸಿದೆ.

ಕೇರಳ ಬ್ಯಾಂಕ್​ನ ಚೂರಲ್​ಮಾಲ ಶಾಖೆಯಲ್ಲಿ ಜನರು ಮಾಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ಆಡಳಿತ ಮಂಡಳಿ ಸೋಮವಾರ ತಿಳಿಸಿದೆ. ಅಡಮಾನ ಇಟ್ಟ ಮನೆಗಳು ಮತ್ತು ಆಸ್ತಿ ಮೇಲಿನ ಸಾಲವನ್ನೂ ಚುಕ್ತಾ ಮಾಡಲಾಗುವುದು. ಈ ಮೂಲಕ ಸಂತ್ರಸ್ತ ಕುಟುಂಬಗಳ ಬೆಂಬಲಕ್ಕೆ ನಿಲ್ಲುವುದಾಗಿ ಬ್ಯಾಂಕ್‌ನ ಆಡಳಿತ ಮಂಡಳಿ ಹೇಳಿದೆ.

ಇದಕ್ಕೂ ಮೊದಲು, ಕೇರಳ ಬ್ಯಾಂಕ್​ನಿಂದ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 50 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು. ಬ್ಯಾಂಕ್‌ನ ನೌಕರರು ಸ್ವಯಂ ಪ್ರೇರಿತರಾಗಿ ಐದು ದಿನಗಳ ವೇತನವನ್ನೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದರು.

ವಯನಾಡ್ ಭೂಕುಸಿತ
ವಯನಾಡ್ ಭೂಕುಸಿತ (ETV Bharat)

ಪ್ರಧಾನಿ ಮೋದಿಗೆ ಸಿಎಂ ವಿಜಯನ್​ ಮನವಿ: ವಯನಾಡ್ ದುರಂತ ಸ್ಥಳಗಳಿಗೆ ಪ್ರಧಾನಿ ನರೇಂದ್ರ ಮೋದಿ ಈಚೆಗೆ ಭೇಟಿ ನೀಡಿದ್ದರು. ಈ ವೇಳೆ ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡವರ ಪುನರ್ವಸತಿಗೆ ಆರ್ಥಿಕ ನೆರವು ಮತ್ತು ಹವಾಮಾನ ಬದಲಾವಣೆಯಿಂದ ಎದುರಾಗಿರುವ ಸವಾಲುಗಳನ್ನು ಎದುರಿಸಲು ನೆರವು ಬೇಕೆಂದು ಪ್ರಧಾನಿ ಬಳಿ ಸಿಎಂ ಪಿಣರಾಯಿ ವಿಜಯನ್​ ಮನವಿ ಮಾಡಿದ್ದರು.

ಪ್ರಾಥಮಿಕ ಅಂದಾಜಿನ ಪ್ರಕಾರ, ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಹಾನಿಯ ಸಂಪೂರ್ಣ ಮೌಲ್ಯಮಾಪನ ನಡೆಯುತ್ತಿದೆ. ಅನಾಹುತದ ವಿವರವಾದ ವರದಿಯನ್ನು ಸಮೀಕ್ಷೆ ಬಳಿಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಿಎಂ ವಿಜಯನ್ ಹೇಳಿದ್ದಾರೆ. ವಯನಾಡ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದರು.

ಅನುದಾನದ ಕೊರತೆಯಿಂದ ಯಾವುದೇ ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು. ರಾಜ್ಯ ಸರ್ಕಾರದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಪ್ರಧಾನಿ ಹೇಳಿದ್ದರು.

ಜುಲೈ 30ರಂದು ನಡೆದ ಭೀಕರ ಭೂಕುಸಿತದಲ್ಲಿ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನೂರಾರು ಮನೆಗಳು ಮತ್ತು ಇತರ ಕಟ್ಟಡಗಳನ್ನು ಸಂಪೂರ್ಣವಾಗಿ ನಾಶವಾಗಿವೆ. ಇನ್ನೂ 130ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸಹಾಯಹಸ್ತ; ಹೃದಯ ಗೆದ್ದ ಆಟೋ ಚಾಲಕಿಯ ನಿರ್ಧಾರ - Wayanad Landslides

ETV Bharat Logo

Copyright © 2024 Ushodaya Enterprises Pvt. Ltd., All Rights Reserved.