ತಿರುಪತಿ, ಆಂಧ್ರಪ್ರದೇಶ: ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಅದೆಷ್ಟೋ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ತಿರುಪತಿಗೆ ಭೇಟಿ ನೀಡಲು ಎಲ್ಲಿ ಟಿಕೆಟ್ ಸಿಗುತ್ತವೆ, ಹೇಗೆ ಭೇಟಿ ನೀಡುವುದು ಎಂಬುದಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಇಂತಹವರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶುಭ ಸುದ್ದಿ ನೀಡಿದೆ. ಶ್ರೀವಾರಿ ಅರ್ಜಿತ ಸೇವಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
18ರಂದು ಟಿಕೆಟ್ ಬಿಡುಗಡೆ: ವೆಂಕಟೇಶ್ವರನ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ ಮಾರ್ಚ್ 2025ರ ಸುಪ್ರಭಾತಂ, ತೋಮಾಲ, ಅಷ್ಟದಳಪದ ಪದ್ಮಾರಾಧನೆ ಸೇವೆಗಳ ಗಳಿಕೆ ಸೇವಾ ಟಿಕೆಟ್‌ಗಳ ಕೋಟಾವನ್ನು ಇದೇ 18 ರಂದು ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.
ಈ ಪೈಕಿ ಲಕ್ಕಿ ಡಿಪ್ ಕೋಟಾಕ್ಕಾಗಿ ಇದೇ 20ರ ಬೆಳಗ್ಗೆ 10ರವರೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಬಿ ಕಲ್ಯಾಣೋತ್ಸವ, ಅರ್ಜಿತ ಬ್ರಹ್ಮೋತ್ಸವ, ಊಂಜಾಲ್ ಸೇವೆ, ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳನ್ನು ಇದೇ 21 ರಂದು ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಅಧಿಕಾರಿಗಳು ವರ್ಚುಯಲ್ ಸೇವಾ ಟಿಕೆಟ್‌ಗಳನ್ನು ರಿಲೀಸ್ ಆಗಲಿವೆ.
ಡಿಸೆಂಬರ್ 23ರಂದು ಬೆಳಗ್ಗೆ 10ಕ್ಕೆ ಅಂಗಪ್ರದಕ್ಷಿಣಂ ಕೋಟಾ, 11ಕ್ಕೆ ಶ್ರೀ ವಾಣಿ ಟ್ರಸ್ಟ್ ಬ್ರೇಕ್ ದರ್ಶನ ಕೋಟಾ, ಮಧ್ಯಾಹ್ನ 3ಕ್ಕೆ ವೃದ್ಧಾಪ್ಯ, ದೀರ್ಘಕಾಲದ ಅನಾರೋಗ್ಯ ಹಾಗೂ ಅಂಗವಿಕಲರಿಗೆ ಉಚಿತ ವಿಶೇಷ ಪ್ರವೇಶ ದರ್ಶನ ಟೋಕನ್‌ಗಳ ಕೋಟಾಗಳ ಟಿಕೆಟ್ ಗಳನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ತಿಳಿಸಿದೆ.
ಈ ತಿಂಗಳ 24 ರಂದು ಬೆಳಿಗ್ಗೆ 10 ಗಂಟೆಗೆ ಮಾರ್ಚ್ 2025 ರ ವಿಶೇಷ ಪ್ರವೇಶ ದರ್ಶನ 300 ರೂಪಾಯಿ ಕೋಟಾ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ತಿರುಮಲ ಮತ್ತು ತಿರುಪತಿಯಲ್ಲಿ ಬಾಡಿಗೆಗೆ ಕೊಠಡಿಗಳ ಬುಕಿಂಗ್ ಮಧ್ಯಾಹ್ನ 3 ಗಂಟೆಗೆ ಇರುತ್ತದೆ. ಮಾರ್ಚ್ ತಿಂಗಳ ಶ್ರೀವಾರಿ ಸೇವಾ ಕೋಟಾವನ್ನು ಇದೇ ತಿಂಗಳ 27 ರಂದು ಬಿಡುಗಡೆ ಮಾಡಲಿದೆ. ಅರ್ಜಿತ ಸೇವೆಗಳು ಮತ್ತು ದರ್ಶನ ಟಿಕೆಟ್‌ಗಳನ್ನು https://ttdevasthanams.ap.gov.in ಗೆ ಭೇಟಿ ನೀಡಿ ಕಾಯ್ದಿರಿಸಿಕೊಳ್ಳುವಂತೆ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾ, ಏಕತೆಯ ಪ್ರತಿಮೆ ವೀಕ್ಷಿಸಲು IRCTC 'ಸುಂದರ ಸೌರಾಷ್ಟ್ರ ಪ್ಯಾಕೇಜ್'