ETV Bharat / bharat

ಪ್ರೀತಿಸಿದ ತೃತೀಯಲಿಂಗಿ ಕೈಹಿಡಿದ ಯುವಕ; ಕುಟುಂಬದ ಆಶೀರ್ವಾದ, ಬೆಂಬಲದಿಂದ ಅದ್ಧೂರಿ ವಿವಾಹ!

ತೃತೀಯ ಲಿಂಗಿಯೊಬ್ಬರು ತಾನು ಪ್ರೀತಿಸಿದ ಹುಡುಗನೊಂದಿಗೆ ದಾಂಪತ್ಯಕ್ಕೆ ಕಾಲಿಡುವ ಮೂಲಕ ಸುದ್ದಿಯಾಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಈ ಅಪರೂಪದ ಮದುವೆ ಗಮನ ಸೆಳೆದಿದೆ.

Transgender Love Triumphs
ಪ್ರೀತಿಸಿದ ಹುಡುಗನ ಕೈಹಿಡಿದ ತೃತೀಯಲಿಂಗಿ (ETV Bharat)
author img

By ETV Bharat Karnataka Team

Published : Oct 17, 2024, 8:01 PM IST

ಜಗಿತ್ಯಾಲ (ತೆಲಂಗಾಣ): ಪ್ರೀತಿಗೆ ಎಲ್ಲೆಯಿಲ್ಲ ಎಂಬುದನ್ನು ಜಗಿತ್ಯಾಲ ಜಿಲ್ಲೆ ಗೊಲ್ಲಪಲ್ಲಿ ತಾಲೂಕು ಲಕ್ಷ್ಮೀಪುರದ ಶ್ರೀನಿವಾಸ್​ ಮಲ್ಯ ಅವರು ಹೃದಯಸ್ಪರ್ಶಿ ಘಟನೆಯೊಂದರ ಮೂಲಕ ಸಾಬೀತುಪಡಿಸಿದ್ದಾರೆ. ಈ ಅಪರೂಪದ ಮತ್ತು ಸ್ಫೂರ್ತಿದಾಯಕ ಪ್ರೇಮ ವಿವಾಹದಲ್ಲಿ, ಶ್ರೀನಿವಾಸ್ ಅವರು ತಮ್ಮ ಕುಟುಂಬದ ಸಂಪೂರ್ಣ ಬೆಂಬಲ ಮತ್ತು ಆಶೀರ್ವಾದವನ್ನು ಪಡೆದ ನಂತರ ಮಡಂಪಲ್ಲಿಯ ಟ್ರಾನ್ಸ್​ಜೆಂಡರ್ ಕರುಣಾಂಜಲಿಯನ್ನು ವಿವಾಹವಾದರು.

ಎರಡು ವರ್ಷದಿಂದ ಪ್ರೀತಿ, ಪ್ರಣಯ; ಈ ಜೋಡಿಯ ಪ್ರೇಮಕಥೆಯು ಎರಡು ವರ್ಷಗಳ ಹಿಂದೆ ಅವರು ಮೊದಲು ಭೇಟಿಯಾದಾಗ ಪ್ರಾರಂಭವಾಯಿತು, ಅವರ ಸ್ನೇಹವು ಪ್ರೀತಿ, ಪ್ರಣಯದ ಹೆಮ್ಮರವಾಗಿ ಬೆಳೆದಿತ್ತು. ಆದರೆ, ತಾನು ಕೆಲಸ ಮಾಡುತ್ತಿದ್ದ ದುಬೈನಿಂದ ಶ್ರೀನಿವಾಸ್ ಮನೆಗೆ ಮರಳಿದ ತಕ್ಷಣವೇ ಕರುಣಾಂಜಲಿಯ ಮೇಲಿನ ಪ್ರೀತಿಯನ್ನು ಮನೆಯವರಿಗೆ ತಿಳಿಸಿರಲಿಲ್ಲ. ಆರಂಭದಲ್ಲಿ ಗೊಂದಲವಿತ್ತು, ಕುಟುಂಬ ಸದಸ್ಯರು ಟ್ರಾನ್ಸ್​ಜೆಂಡರ್ ಎಂದರೆ ಏನು ಎಂದು ಪ್ರಶ್ನಿಸಿದರು. ಆದರೆ ಶ್ರೀನಿವಾಸ್ ಅವರ ವಿವರಣೆಗಳು ಮತ್ತು ನಿರ್ಣಯವು ಅವರಿಗೆ ಮನವರಿಕೆ ಮಾಡಿಕೊಟ್ಟಿತು. ಅದು ಸಾಮಾಜಿಕ ಕಳಂಕದ ತಡೆಗೋಡೆಗಳನ್ನು ಒಡೆಯಿತು.

ಪ್ರೀತಿಸಿದ ಹುಡುಗನ ಕೈಹಿಡಿದ ತೃತೀಯಲಿಂಗಿ; ಕುಟುಂಬದ ಆಶೀರ್ವಾದ, ಬೆಂಬಲದಿಂದ ಅದ್ಧೂರಿ ವಿವಾಹ! (ETV Bharat)

ಇತ್ತೀಚೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ, ಶ್ರೀನಿವಾಸ್ ಮತ್ತು ಕರುಣಾಂಜಲಿ ಅವರ ಎರಡೂ ಕುಟುಂಬಗಳು ಮತ್ತು ಸ್ಥಳೀಯ ಟ್ರಾನ್ಸ್‌ಜೆಂಡರ್ ಸಮುದಾಯದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲಾ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆದ ವಿವಾಹವನ್ನು ಇತರರಂತೆಯೇ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ತೃತೀಯಲಿಂಗಿಗಳೂ ಕೂಡ ಈ ಮದುವೆಯ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮವನ್ನು ಹೆಚ್ಚಿಸಿದರು.

ಶ್ರೀನಿವಾಸ್ ಅವರ ಪ್ರೀತಿಗೆ ಬೆಂಬಲವಾಗಿ ನಿಂತಿದ್ದಾರೆ ಮತ್ತು ಕರುಣಾಂಜಲಿ ಜೀವನದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ ಎಂದು ಸ್ಥಳೀಯರು ಶ್ಲಾಘಿಸಿದರು. ಜೊತೆಗೆ ದಂಪತಿಯನ್ನು ಯುವಜೋಡಿಯಾಗಿ ಸ್ವೀಕರಿಸಿದ ಅವರ ಕುಟುಂಬದ ಪ್ರಗತಿಪರ ಮನೋಭಾವದ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬದುಕಿನ ಪಥ ಬದಲಿಸಿದ ತೃತೀಯ ಲಿಂಗಿ; ಅನಂತಪುರದ ಹನ್ನಾ ಸ್ಪೇನ್​ನಲ್ಲಿ ವಿಜ್ಞಾನಿಯಾಗಿ ಬೆಳೆದ ಸ್ಫೂರ್ತಿಯ ಕಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.